ಅಮೆರಿಕದಿಂದ ಗಡೀಪಾರು: ಅಮೃತಸರಕ್ಕೆ ಬಂದಿಳಿದ 104 ಭಾರತೀಯರು!

ಫೆಬ್ರವರಿ 4 ರಂದು ಬೆಳಗ್ಗೆ3 ಗಂಟೆಗೆ ಟೆಕ್ಸಾಸ್ ನ ಸ್ಯಾನ್ ಆಂಟೋನಿಯೊದಿಂದ ಹೊರಟಿದ್ದ C-17 ವಿಮಾನ ಇಂದು ಬೆಳಿಗ್ಗೆ ಅಮೃತಸರಕ್ಕೆ ಬರಬೇಕಾಗಿತ್ತು. ಆದರೆ ಸ್ವಲ ವಿಳಂಬವಾಗಿ ಬಂದಿಳಿದಿದೆ. ಗಡೀಪಾರು ಮಾಡಿದವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ನೆರೆಯ ರಾಜ್ಯಗಳಿಂದ ಬಂದವರು ಎಂದು ವರದಿಯಾಗಿದೆ.
Indian deportees
ಅಮೃತಸರಕ್ಕೆ ಬಂದಿಳಿದ ಭಾರತೀಯರು
Updated on

ಅಮೃತಸರ: ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರು ಸ್ವದೇಶಕ್ಕೆ ಆಗಮಿಸಿದ್ದಾರೆ. 104 ಅಕ್ರಮ ಭಾರತೀಯ ವಲಸಿಗರಿದ್ದ ಯುಎಸ್ ಮಿಲಿಟರಿ ವಿಮಾನ ಬುಧವಾರ ಮಧ್ಯಾಹ್ನ ಪಂಜಾಬಿನ ಅಮೃತಸರದಲ್ಲಿ ಬಂದಿಳಿಯಿತು.

ಫೆಬ್ರವರಿ 4 ರಂದು ಬೆಳಗ್ಗೆ3 ಗಂಟೆಗೆ ಟೆಕ್ಸಾಸ್ ನ ಸ್ಯಾನ್ ಆಂಟೋನಿಯೊದಿಂದ ಹೊರಟಿದ್ದ C-17 ವಿಮಾನ ಇಂದು ಬೆಳಿಗ್ಗೆ ಅಮೃತಸರಕ್ಕೆ ಬರಬೇಕಾಗಿತ್ತು. ಆದರೆ ಸ್ವಲ ವಿಳಂಬವಾಗಿ ಬಂದಿಳಿದಿದೆ. ಗಡೀಪಾರು ಮಾಡಿದವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ನೆರೆಯ ರಾಜ್ಯಗಳಿಂದ ಬಂದವರು ಎಂದು ವರದಿಯಾಗಿದೆ.

ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಗಡೀಪಾರು ವಿಮಾನದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ವಾಷಿಂಗ್ಟನ್ ವಲಸೆ ನೀತಿಗಳನ್ನು ಬಿಗಿಗೊಳಿಸುತ್ತಿದ್ದು, ಅಕ್ರಮವಾಗಿ ದೇಶದಲ್ಲಿರುವ ವ್ಯಕ್ತಿಗಳನ್ನು ಹೊರಗೆ ಕಳುಹಿಸುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.

ಫೆಬ್ರವರಿ 12 ರಿಂದ 13 ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯನ್ನು ಭಾರತ ಮತ್ತು ಯುಎಸ್ ಅಂತಿಮಗೊಳಿಸುತ್ತಿರುವಂತೆಯೇ ಈ ಬೆಳವಣಿಗೆಯಾಗಿದೆ.

ಗ್ವಾಟೆಮಾಲಾ, ಪೆರು ಮತ್ತು ಹೊಂಡುರಾಸ್‌ನಂತಹ ದೇಶಗಳಿಗೆ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಟ್ರಂಪ್ ಆಡಳಿತ ಈಗಾಗಲೇ ಮಿಲಿಟರಿ ವಿಮಾನವನ್ನು ಬಳಸಿದೆ. ಆದರೆ ಈಗ ಅತ್ಯಂತ ದೂರದ ಪ್ರದೇಶವಾದ ಭಾರತಕ್ಕೂ ಮಿಲಿಟರಿ ವಿಮಾನ ಕಳುಹಿಸಿದೆ.

ಜನವರಿ 27 ರಂದು ಪ್ರಧಾನಿ ಮೋದಿಯವರೊಂದಿಗಿನ ದೂರವಾಣಿ ಸಂಭಾಷಣೆಯ ನಂತರ, ಅಧ್ಯಕ್ಷ ಟ್ರಂಪ್ ಭಾರತವು ತನ್ನ ನಾಗರಿಕರನ್ನು ಗಡೀಪಾರು ಮಾಡುವ ಬಗ್ಗೆ ಸರಿಯಾದದ್ದನ್ನು ಮಾಡುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅಂದಾಜಿನ ಪ್ರಕಾರ, US ಅಧಿಕಾರಿಗಳು 18,000 ಅಕ್ರಮ ವಲಸಿಗರನ್ನು ಗುರುತಿಸಿದ್ದಾರೆ.

Indian deportees
ಭಾರತಕ್ಕೆ ಗಡೀಪಾರು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ನೀರವ್ ಮೋದಿ 

ಡೊನಾಲ್ಡ್ ಟ್ರಂಪ್ ಅಮೆರಿಕದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಈ ವಿಚಾರದಲ್ಲಿ ಅಮೆರಿಕಕ್ಕೆ ಸಹಕಾರ ನೀಡುವುದಾಗಿ ಭಾರತ ಒಲವು ತೋರಿತ್ತು. ಭದ್ರತೆಗೆ ಸಂಬಂಧಿಸಿದ ಒಪ್ಪಂದದಿಂದಾಗ ಅಕ್ರಮ ವಲಸೆಗೆ ಭಾರತೀಯ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com