ಪ್ರತಿಯೊಂದು ಸಂಸ್ಥೆಯಲ್ಲೂ ದಲಿತರು, ದುರ್ಬಲ ವರ್ಗದವರ ನಾಯಕತ್ವ ನೋಡಲು ಬಯಸುತ್ತೇನೆ: ರಾಹುಲ್ ಗಾಂಧಿ

ದಲಿತರು ಮತ್ತು ದುರ್ಬಲ ವರ್ಗಗಳು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ ನಾಯಕತ್ವದ ಸ್ಥಾನದಲ್ಲಿರುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಪಾಟ್ನಾ: ದೇಶದ ಪ್ರತಿಯೊಂದು ಸಂಸ್ಥೆಯಲ್ಲೂ ದಲಿತರು ಮತ್ತು ದುರ್ಬಲ ವರ್ಗದವರು ನಾಯಕತ್ವದ ಸ್ಥಾನವನ್ನು ವಹಿಸಿಕೊಳ್ಳುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಇಂದು ಸ್ವಾತಂತ್ರ್ಯ ಹೋರಾಟಗಾರ ಮತ್ತು ದಲಿತ ಐಕಾನ್ ಜಗಲಾಲ್ ಚೌಧರಿ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶಾದ್ಯಂತ ಜಾತಿ ಜನಗಣತಿಯ ಅಗತ್ಯವನ್ನು ಪುನರುಚ್ಚರಿಸಿದರು.

ದಲಿತರು ಮತ್ತು ದೀನದಲಿತರ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧವಾಗಿವೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ದಿಢೀರ್ 70 ಲಕ್ಷ ಮತದಾರರ ಸೇರ್ಪಡೆ: ರಾಹುಲ್ ಗಾಂಧಿ

"ದೇಶದ ಪ್ರಸ್ತುತ ಅಧಿಕಾರ ವರ್ಗದಲ್ಲಿ ಮತ್ತು ಸಂಸ್ಥೆಗಳಲ್ಲಿ ದಲಿತರು ಮತ್ತು ದೀನದಲಿತರ ಭಾಗವಹಿಸುವಿಕೆ ಇಲ್ಲ... ದಲಿತರು, ಅಲ್ಪಸಂಖ್ಯಾತರು ಮತ್ತು ಸಮಾಜದ ದುರ್ಬಲ ವರ್ಗಗಳ ನಿಖರ ಸಂಖ್ಯೆಯನ್ನು ಗುರುತಿಸಲು ಭಾರತದಾದ್ಯಂತ ಜಾತಿ ಜನಗಣತಿಯ ಅವಶ್ಯಕತೆಯಿದೆ" ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಹೇಳಿದರು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ರಾಹುಲ್ ಗಾಂಧಿ ಇಂದು ಬೆಳಗ್ಗೆ ಪಾಟ್ನಾಗೆ ಆಗಮಿಸಿದರು.

"ದಲಿತರು ಮತ್ತು ದುರ್ಬಲ ವರ್ಗಗಳು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ ನಾಯಕತ್ವದ ಸ್ಥಾನದಲ್ಲಿರುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ... ಮತ್ತು ನಾನು ದೀನದಲಿತರ ಪರವಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ" ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com