
ನವದೆಹಲಿ: ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2025 ರ ಎಂಟನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸಿದ್ಧರಾಗಿದ್ದಾರೆ. ಈ ವರ್ಷ ಸಂವಾದಾತ್ಮಕ ಕಾರ್ಯಕ್ರಮವು ಹೊಸ ಸ್ವರೂಪ ಮತ್ತು ಶೈಲಿಯಲ್ಲಿ ನಡೆಯಲಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸದ್ಗುರು ಮತ್ತು ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಅವನಿ ಲೇಖನಾ, ಪೌಷ್ಟಿಕ ತಜ್ಞೆ ರುಜುತಾ ದಿವೇಕರ್, ಸೋನಾಲಿ ಸಬರ್ವಾಲ್, ರೇವಂತ್ ಹಿಮತ್ಸಿಂಕಾ, ವಿಕ್ರಾಂತ್ ಮಾಸ್ಸೆ, ನಟಿ ಭೂಮಿ ಪೆಡ್ನೇಕರ್, ಗೌರವ್ ಚೌಧರಿ ಮತ್ತು ರಾಧಿಕಾ ಗುಪ್ತಾ ಪಾಲ್ಗೊಳ್ಳಲಿದ್ದಾರೆ.
ಜನವರಿ 10ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಟೌನ್ ಹಾಲ್ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡವನ್ನು ನಿವಾರಿಸಲು ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಪ್ರಧಾನಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶ ಹೊಂದಿರುತ್ತಾರೆ.
ಪರೀಕ್ಷಾ ಪೆ ಚರ್ಚಾ 2025 ಕಾರ್ಯಕ್ರಮಕ್ಕೆ ಭಾರತ ಮತ್ತು ವಿದೇಶದಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಂದ 3.30 ಕೋಟಿ ನೋಂದಣಿಗಳೊಂದಿಗೆ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಈ ಆನ್‌ಲೈನ್ ನೋಂದಣಿಯು ಕಳೆದ ವರ್ಷ ಡಿಸೆಂಬರ್ 14ರಂದು ಪ್ರಾರಂಭವಾಗಿತ್ತು ಮತ್ತು ಈ ವರ್ಷ ಜನವರಿ 14 ರಂದು ಮುಕ್ತಾಯವಾಯಿತು.
2018ರಲ್ಲಿ ಪ್ರಾರಂಭವಾದ 'ಪರೀಕ್ಷಾ ಪೇ ಚರ್ಚಾ' (PPC) ವಾರ್ಷಿಕ ಕಾರ್ಯಕ್ರಮವಾಗಿದ್ದು, ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ನಿಭಾಯಿಸುವ ಮಾರ್ಗಗಳ ಕುರಿತು ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸುತ್ತಾರೆ.
Advertisement