Delhi Election Results: ದೆಹಲಿ ಸಿಎಂ ಆತಿಶಿಗೆ ಪ್ರಯಾಸದ ಜಯ; ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಗೆಲುವು

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಅತಿಶಿ ಅವರು ಕಲ್ಕಾಜಿ ಸ್ಥಾನದಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಕಂಡಿದ್ದಾರೆ.
Delhi Election Results: ದೆಹಲಿ ಸಿಎಂ ಆತಿಶಿಗೆ ಪ್ರಯಾಸದ ಜಯ; ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಗೆಲುವು
Updated on

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಆಮ್ ಆದ್ಮಿ ಪಕ್ಷದ ಸಂಚಾಲಕ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೋಲು ಪಕ್ಷಕ್ಕೆ ಆಘಾತ ಉಂಟುಮಾಡಿದೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಅತಿಶಿ ಅವರು ಕಲ್ಕಾಜಿ ಸ್ಥಾನದಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಕಂಡಿದ್ದಾರೆ. ಅವರು ಬಿಜೆಪಿ ನಾಯಕ ರಮೇಶ್ ಬಿಧುರಿ ವಿರುದ್ಧ 3500 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಲ್ಕಾಜಿ ಕ್ಷೇತ್ರದಲ್ಲಿ 11 ಸುತ್ತುಗಳ ಮತ ಎಣಿಕೆ ನಂತರ, ಎಎಪಿಯ ಅತಿಶಿ 47,363 ಮತಗಳಿಂದ ಮುನ್ನಡೆ ಕಂಡರೆ, ಬಿಜೆಪಿಯ ರಮೇಶ್ ಬಿಧುರಿ 44,627 ಮತಗಳೊಂದಿಗೆ ಎರಡನೇ ಸ್ಥಾನ ಹಾಗೂ ಕಾಂಗ್ರೆಸ್ ನ ಅಲ್ಕಾ ಲಂಬಾ 3,828 ಮತಗಳಿಂದ ಮೂರನೇ ಸ್ಥಾನಕ್ಕೆ ಜಾರಿದರು.

Delhi Election Results: ದೆಹಲಿ ಸಿಎಂ ಆತಿಶಿಗೆ ಪ್ರಯಾಸದ ಜಯ; ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಗೆಲುವು
Delhi Election Results 2025: ಮಾಜಿ ಸಿಎಂ Arvind Kejriwal ಸೋಲು, AAP ತೀವ್ರ ಮುಖಭಂಗ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com