
ಈರೋಡ್: ತಮಿಳುನಾಡಿನ ಈರೋಡ್(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಡಿಎಂಕೆಯ ವಿ.ಚಿ. ಚಂದ್ರಶೇಖರ್ ಅವರು ತಮ್ಮ ಸಮೀಪದ ಅಭ್ಯರ್ಥಿ ನಾಮ್ ತಮಿಝಾರ್ ಕಚ್ಚಿ (ಎನ್ ಟಿಕೆ) ಪಕ್ಷದ ಎಂ.ಕೆ. ಸೀತಾಲಕ್ಷ್ಮಿ ಅವರನ್ನು 91, 558 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಜಯ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಟಾಲಿನ್ ಪಕ್ಷಕ್ಕೆ ಹೊಸ ಹುರುಪು ತುಂಬಿದೆ.
ಕಣದಲ್ಲಿದ್ದ ಇತರ 44 ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಪಕ್ಷೇತರರರು. 6,109 ಮತದಾರರು ಈ ಚುನಾವಣೆಯಲ್ಲಿ 'ನೋಟಾ'' ಒತ್ತಿದ್ದಾರೆ. ಚಂದ್ರಶೇಖರ್ 1,15, 709 ಮತಗಳನ್ನು ಪಡೆದಿದ್ದರೆ ಸೀತಾಲಕ್ಷ್ಮಿ 24, 151 ಮತಗಳನ್ನು ಪಡೆದಿದ್ದಾರೆ.
ಡಿಎಂಕೆ ಶೇ. 75 ರಷ್ಟು ಮತಗಳನ್ನು ಪಡೆದಿದ್ದು, ಈ ಗೆಲುವುವನ್ನು ಸಿಎಂ ಸ್ಟಾಲಿನ್ ಅವರಿಗೆ ಅರ್ಪಿಸುವುದಾಗಿ ಚಂದ್ರಶೇಖರ್ ಹೇಳಿದ್ದಾರೆ. ಈ ಕ್ಷೇತ್ರದ ಶಾಸಕರಾಗಿದ್ದ ಇವಿಕೆಎಸ್ ಇಳಾಂಗೋವನ್ ಅವರು ಮೃತಪಟ್ಟಿದ್ದರು ಉಪಚುನಾವಣೆ ನಡೆದಿತ್ತು.
Advertisement