
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಬಳಿ ಶನಿವಾರ ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಕಾಡಿನಿಂದ ಗುಂಡು ಹಾರಿಸಲಾಯಿತು. ಭಾರತೀಯ ಪಡೆಗಳು ಸಹ ಪ್ರತೀಕಾರದ ದಾಳಿ ನಡೆಸಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸಂಕ್ಷಿಪ್ತ ಗುಂಡಿನ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಆದರೆ ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಯ್ದುಕೊಳ್ಳಲು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ಪಡೆಗಳು ಕೇರಿ ವಲಯದ ಮುಂಭಾಗದ ಹಳ್ಳಿಯಲ್ಲಿ ಗಸ್ತು ತಿರುಗುತ್ತಿದ್ದಾಗ, ಗಡಿಯಾಚೆಗಿನ ಕಾಡಿನಲ್ಲಿ ಅಡಗಿಕೊಂಡಿದ್ದ ಶಂಕಿತ ಭಯೋತ್ಪಾದಕರು ಕೆಲವು ಸುತ್ತು ಗುಂಡು ಹಾರಿಸಿದರು. ಅವರು ಈ ಭಾಗಕ್ಕೆ ನುಸುಳಲು ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಸೇನಾ ಪಡೆಗಳು ಪ್ರತೀಕಾರವಾಗಿ ಕೆಲವು ಸುತ್ತು ಗುಂಡು ಹಾರಿಸಿದವು. ನಂತರ ಆ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನನು ಕಾಯ್ದುಕೊಳ್ಳಲು ಒಳನುಸುಳುವಿಕೆ ವಿರೋಧಿ ಗ್ರಿಡ್ ಅನ್ನು ಬಲಪಡಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement