ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಾಗ ಅಣ್ಣಾ ಹಜಾರೆ ಎಲ್ಲಿದ್ದರು?: ಸಂಜಯ್ ರಾವತ್

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆಗಳು ಸಾಂವಿಧಾನಿಕ ವಿಧಾನಗಳನ್ನು ಅನುಸರಿಸಿಲ್ಲ. ಮತಯಂತ್ರಗಳ ತಿರುಚುವಿಕೆ ಮತ್ತು ಹಣದ ಬಲದ ಮೂಲಕ ಗೆಲ್ಲುತ್ತಿದ್ದಾರೆ.
Anna Hazare, Sanjay Raut
ಅಣ್ಣಾ ಹಜಾರೆ, ಸಂಜಯ್ ರಾವತ್
Updated on

ಮುಂಬೈ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸೋಲಿನ ಬಗ್ಗೆ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಸಂತೋಷಪಟ್ಟಿದ್ದಾರೆ. ಆದರೆ ಕೇಂದ್ರದ ಮೋದಿ ಮೋದಿ ಸರ್ಕಾರದ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಮಾಡಿದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಹಜಾರೆಯವರ ಮೌನವಾಗಿದ್ದಾರೆ ಎಂದು ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ.

ಕೇಜ್ರಿವಾಲ್ ಸೋಲಿಗೆ ಹಜಾರೆ ಖುಷಿಯಾಗಿದ್ದಾರೆ. "ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಾಗ ಎಲ್ಲಿದ್ದರು? ಒಬ್ಬ ಕೈಗಾರಿಕೋದ್ಯಮಿಯ ಕೈಯಲ್ಲಿ ಸಂಪತ್ತನ್ನು ಕೇಂದ್ರೀಕರಿಸಿ ದೇಶವನ್ನು ಲೂಟಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಹೇಗೆ ಮುಂದುವರಿಯುತ್ತದೆ? ಇಂತಹ ಸಮಯದಲ್ಲಿ ಹಜಾರೆ ಮೌನದ ಹಿಂದಿನ ರಹಸ್ಯ ಏನಿರಬಹುದು ಎಂದು ರಾವತ್ ಪ್ರಶ್ನಿಸಿದ್ದಾರೆ.

"ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಮತದಾರರ ಪಟ್ಟಿ ಗೊಂದರ ಒಂದೇ ರೀತಿಯಲ್ಲಿದೆ. ಆದರೆ ಹಜಾರೆ ಇಂತಹ ವಿಷಯಗಳ ಬಗ್ಗೆ ಮೌನವಾಗಿರಲು ನಿರ್ಧರಿಸಿದ್ದಾರೆ. ಹರಿಯಾಣದಲ್ಲಿಯೂ ಇದೇ ರೀತಿಯ ದೂರುಗಳು ಬಂದಿವೆ. ಬಿಹಾರ ಚುನಾವಣೆಯಲ್ಲೂ ಇದು ಬರಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆಗಳು ಸಾಂವಿಧಾನಿಕ ವಿಧಾನಗಳನ್ನು ಅನುಸರಿಸಿಲ್ಲ. ಮತಯಂತ್ರಗಳ ತಿರುಚುವಿಕೆ ಮತ್ತು ಹಣದ ಬಲದ ಮೂಲಕ ಗೆಲ್ಲುತ್ತಿದ್ದಾರೆ. ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರೆ ದೆಹಲಿ ಚುನಾವಣೆಯ ಫಲಿತಾಂಶವೇ ಬೇರೆಯಾಗಿರುತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Anna Hazare, Sanjay Raut
Delhi Election results 2025: AAP ಸೋಲು; Kejriwal ಚಾರಿತ್ರ್ಯದ ಬಗ್ಗೆ ಮಾತಾಡ್ತಾರೆ, ಆದರೆ... ಶಿಷ್ಯನಿಗೆ Anna Hazare ಕ್ಲಾಸ್!

ದೆಹಲಿ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, ಕೇಜ್ರಿವಾಲ್ ನಾನು ಹೇಳಿದ್ದಕ್ಕೆ ಗಮನ ಕೊಡುತ್ತಿರಲಲ್ಲ. ಮದ್ಯದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದರು. ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ಧವಾಗಿರಬೇಕು, ಅವರ ಜೀವನವು ದೋಷರಹಿತವಾಗಿರಬೇಕು ಮತ್ತು ಅದು ತ್ಯಾಗವನ್ನು ಒಳಗೊಂಡಿರಬೇಕು. ಮತದಾರರಲ್ಲಿ ವಿಶ್ವಾಸವನ್ನು ಮೂಡಿಸುವ ಗುಣಗಳು ಇವು. ನಾನು ಇದನ್ನು ಕೇಜ್ರಿವಾಲ್‌ಗೆ ಹೇಳಿದ್ದೇನೆ ಆದರೆ ಅವರು ಗಮನ ಹರಿಸಲಿಲ್ಲ. ಅವರು ಹಣದ ಬಲದಿಂದ ಮುಳುಗಿದ್ದರು ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com