ನನ್ನ ಸ್ನೇಹಿತ ಟ್ರಂಪ್ ಭೇಟಿಗೆ ಎದುರು ನೋಡುತ್ತಿದ್ದೇನೆ, ಅಮೆರಿಕ-ಭಾರತ ಬಾಂಧವ್ಯಕ್ಕೆ ಮತ್ತಷ್ಟು ಬಲ: ಪ್ರಧಾನಿ ಮೋದಿ

ಈ ಭೇಟಿಯು ತಂತ್ರಜ್ಞಾನ, ವ್ಯಾಪಾರ, ರಕ್ಷಣೆ, ಇಂಧನ ಕ್ಷೇತ್ರಗಳನ್ನು ಒಳಗೊಂಡಂತೆ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ ಎಂದು ಮೋದಿ ಹೇಳಿದ್ದಾರೆ.
Donald Trump with PM Modi
ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿ
Updated on

ನವದೆಹಲಿ: ನನ್ನ ಸ್ನೇಹಿತ, ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಅಮೆರಿಕ ಪ್ರವಾಸವನ್ನು ವಿಶೇಷವಾಗಿ ತಂತ್ರಜ್ಞಾನ, ವ್ಯಾಪಾರ, ರಕ್ಷಣೆ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಒಂದು ಅವಕಾಶ ಎಂದಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಭರ್ಜರಿ ಗೆಲುವಿನ ನಂತರ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದು, ಅಮೆರಿಕದ 47 ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಒಂದು ತಿಂಗಳೊಳಗೆ ಯುಎಸ್ ಅಧ್ಯಕ್ಷರೊಂದಿಗೆ ತಮ್ಮ ಮೊದಲ ಅಧಿಕೃತ ಸಭೆಯನ್ನು ನಡೆಸಲಿದ್ದಾರೆ.

ಎರಡು ದಿನಗಳ AI ಆ್ಯಕ್ಷನ್ ಶೃಂಗಸಭೆಗೂ ತೆರಳುವ ಮುನ್ನಾ ಮಾತನಾಡಿದ ಪ್ರಧಾನಿ ಮೋದಿ, ಟ್ರಂಪ್ ಅವರ ಐತಿಹಾಸಿಕ ಗೆಲುವು ಮತ್ತು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ನಮ್ಮ ಮೊದಲ ಸಭೆಯಾಗಿದ್ದರೂ ಭಾರತ ಮತ್ತು ಯುಎಸ್ ನಡುವೆ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಹೆಚ್ಚಿಸಲು ಅವರ ಮೊದಲ ಅವಧಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ ನೆನಪುಗಳಿವೆ ಎಂದರು.

ಜೂನ್ 2017 ರಲ್ಲಿ ಟ್ರಂಪ್ ಅವರು ಮೊದಲ ಬಾರಿ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಮೊದಲ ಸಭೆಯಂತೆಯೇ, ನಿಯೋಗ ಮಟ್ಟದ ಮಾತುಕತೆಗಾಗಿ ಭೇಟಿಯಾಗುವ ಮೊದಲು ಉಭಯ ನಾಯಕರು ಪರಸ್ಪರ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಟ್ರಂಪ್ ಆಡಳಿತದ ಎಲ್ಲಾ ಪ್ರಮುಖ ಅಧಿಕಾರಿಗಳು ಮತ್ತು ಸಲಹೆಗಾರರನ್ನು ಮೋದಿ ಭೇಟಿಯಾಗುವ ಸಾಧ್ಯತೆಯಿದೆ. ತಮ್ಮ ಮೊದಲ ಸಭೆಯಲ್ಲಿ ಟ್ರಂಪ್ ಅವರು ಶ್ವೇತಭವನದಲ್ಲಿ ಮೋದಿ ಅವರಿಗೆ ಅತಿಥ್ಯ ನೀಡಿದ್ದರು. ಅಲ್ಲದೇ ಮೋದಿ "ನಿಜವಾದ ಸ್ನೇಹಿತ" ಎಂದು ಕರೆದಿದ್ದರು.

ಈ ಭೇಟಿಯು ತಂತ್ರಜ್ಞಾನ, ವ್ಯಾಪಾರ, ರಕ್ಷಣೆ, ಇಂಧನ ಕ್ಷೇತ್ರಗಳನ್ನು ಒಳಗೊಂಡಂತೆ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ ಎಂದು ಮೋದಿ ಹೇಳಿದ್ದಾರೆ.

Donald Trump with PM Modi
ಫ್ರಾನ್ಸ್ ಗೆ ಪ್ರಧಾನಿ ಮೋದಿ ಭೇಟಿ: ಉಭಯ ದೇಶಗಳ ಸಂಬಂಧ ವೃದ್ಧಿಗೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮಾತುಕತೆ

ಭಾರತ ಮತ್ತು ಯುಎಸ್ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಹೊಂದಿವೆ. ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಕುರಿತು ಅಮೆರಿಕ ಸರ್ಕಾರದ ಹೆಚ್ಚಿದ ನಿಲುವು ಮತ್ತು ಭಾರತದ ಮೇಲೆ ಸುಂಕಗಳನ್ನು ವಿಧಿಸುವ ಬೆದರಿಕೆಗಳ ಮಧ್ಯೆ ಉಭಯ ನಾಯಕರು ಭೇಟಿಯಾಗುತ್ತಿದ್ದಾರೆ. ಉಭಯ ದೇಶಗಳ ಜನರ ಪರಸ್ಪರ ಪ್ರಯೋಜನಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ಜಗತ್ತಿಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತೇವೆ" ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com