ರಾಜಕೀಯ ತಂತ್ರವೋ, ಬಿಜೆಪಿಯತ್ತ ಒಲವೋ? ಡಿಸಿಎಂ ಶಿಂಧೆ ಜೊತೆ Sharad Pawar ವೇದಿಕೆ ಹಂಚಿಕೆ, ಹೊಗಳಿಕೆ; INDIA ಕೂಟಕ್ಕೆ ಶಾಕ್!

ಶಿವಸೇನೆಗೆ ದ್ರೋಹ ಬಗೆದ ಮತ್ತು ಪಕ್ಷವನ್ನು ಮುರಿದ "ಬೆನ್ನಿಗೆ ಇರಿಯುವವ"ನಿಗೆ ಪವಾರ್ ಅವರಂತಹ ಹಿರಿಯ ನಾಯಕರು ಹೇಗೆ ಪ್ರಶಸ್ತಿ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
Shindhe- Sharad pawar
ಶಿಂಧೆಗೆ ಶರದ್ ಪವಾರ್ ಸನ್ಮಾನ online desk
Updated on

ನವದೆಹಲಿ: ಮಹಾರಾಷ್ಟ್ರದಲ್ಲಿ INDI ಮೈತ್ರಿಕೂಟದಲ್ಲಿ ಮತ್ತೆ ಬಿರುಕು ಉಂಟಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟದ ನಂತರ ಈಗ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಹಾಗೂ ಶರದ್ ಪವಾರ್ ಬಣದ ಎನ್ ಸಿಪಿ ನಡುವೆ ತಿಕ್ಕಾಟ ಉಂಟಾಗಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ ವಿರುದ್ಧ ಶರದ್ ಪವಾರ್ ಅಸಮಾಧಾನಗೊಂಡಿದ್ದಾರೆ.

ಇದಷ್ಟೇ ಅಲ್ಲದೇ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾದ ಹಾಲಿ ಡಿಸಿಎಂ ಏಕನಾಥ್ ಶಿಂಧೆ ಜೊತೆ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡಿರುವ ಶರದ್ ಪವಾರ್, ಮಹಾದ್ಜಿ ಶಿಂಧೆ ರಾಷ್ಟ್ರ ಗೌರವ್ ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಿ ಶಿಂಧೆ ಅವರನ್ನು ಹಾಡಿ ಹೊಗಳಿರುವುದು ಹಲವು ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.

ಹಿರಿಯ ರಾಜಕಾರಣಿಯಾಗಿರುವ ಶರದ್ ಪವಾರ್ ಶಿಂಧೆಯನ್ನು ಹೊಗಳುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದತ್ತ ಒಲವು ತೋರುತ್ತಿದ್ದಾರೋ ಅಥವಾ ಶಿಂಧೆಯನ್ನೇ ತಮ್ಮತ್ತ ಸೆಳೆಯುವ ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೋ ಎಂಬ ಗೊಂದಲದಲ್ಲಿ ಮಹಾರಾಷ್ಟ್ರ ರಾಜಕೀಯ ವಲಯ ಇದೆ.

ದೆಹಲಿಯಲ್ಲಿ ನಡೆದ 98 ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶಿಂಧೆ ಪವಾರ್ ಅವರಿಂದ ಪ್ರಶಸ್ತಿಯನ್ನು ಪಡೆದರು. ನಂತರದ ಭಾಷಣದಲ್ಲಿ, ಶಿಂಧೆ ಪವಾರ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದಾಗಿ ಹೇಳಿದ್ದಾರೆ.

ಶಿಂಧೆಗೆ ಪ್ರಶಸ್ತಿ ನೀಡಿದ್ದಕ್ಕೆ ಉದ್ಧವ್ ಬಣದ ಶಿವಸೇನೆ ಗರಂ!

ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಹಿರಿಯ ಸೇನಾ ನಾಯಕ ಸಂಜಯ್ ರಾವತ್, ಪವಾರ್ ಅವರು ಸಮಾರಂಭದಲ್ಲಿ ಭಾಗವಹಿಸಿ ಶಿಂಧೆ ಅವರಿಗೆ ಪ್ರಶಸ್ತಿ ನೀಡುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

ಶಿವಸೇನೆಗೆ ದ್ರೋಹ ಬಗೆದ ಮತ್ತು ಪಕ್ಷವನ್ನು ಮುರಿದ "ಬೆನ್ನಿಗೆ ಇರಿಯುವವ"ನಿಗೆ ಪವಾರ್ ಅವರಂತಹ ಹಿರಿಯ ನಾಯಕರು ಹೇಗೆ ಪ್ರಶಸ್ತಿ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಕಾರ್ಯಕ್ರಮವನ್ನು ಸಂಜಯ್ ರಾವತ್ "ದಲ್ಲಾಳಿಗಳ ರಾಜಕೀಯ ಸಭೆ" ಎಂದು ಕರೆದಿದ್ದಾರೆ. "ರಾಜಕೀಯ ನಾಯಕರಿಗೆ ನೀಡಲಾಗುವ ಅಂತಹ ಪ್ರಶಸ್ತಿಗಳನ್ನು ಖರೀದಿಸಲಾಗುತ್ತದೆ ಅಥವಾ ಮಾರಾಟ ಮಾಡಲಾಗುತ್ತದೆ" ಎಂದು ರಾವತ್ ಟೀಕಿಸಿದ್ದಾರೆ.

ಬಿಜೆಪಿಯ ಶೈನಾ ಎನ್‌ಸಿ, ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಅವರು "ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.

Shindhe- Sharad pawar
Maharashtra: Uddhav Thackeray ಬಣದ ಶಿವಸೇನೆ ಮತ್ತೆ ಇಬ್ಭಾಗ?; 8 ಸಂಸದರು ಶಿಂಧೆ ಬಣಕ್ಕೆ?

"ಅವರಿಗೆ ಆ ಪ್ರಶಸ್ತಿ ಎಂದಿಗೂ ಯಾವುದೇ ಪ್ರಶಸ್ತಿ ಸಿಗುವುದಿಲ್ಲ, ಆದ್ದರಿಂದ, ರಾಷ್ಟ್ರ ಗೌರವ್ ಪ್ರಶಸ್ತಿಯನ್ನು ವಿರೋಧಿಸುತ್ತಿದ್ದಾರೆ. ಪ್ರಶಸ್ತಿ ಪುರಸ್ಕೃತರು ಮರಾಠಿ ಸಮುದಾಯದವರು ಎಂದು ಸಂತೋಷ ಮತ್ತು ಹೆಮ್ಮೆಪಡಬೇಕು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com