ಅಮೆರಿಕದಿಂದ ಗಡಿಪಾರು: 119 ಭಾರತೀಯರ ಎರಡನೇ ತಂಡ ವಾರಾಂತ್ಯಕ್ಕೆ ಆಗಮನ

ಈ ಗಡೀಪಾರು ಮಾಡಲ್ಪಟ್ಟವರು ಮೆಕ್ಸಿಕೋ ಗಡಿ ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿ ನಂತರ ತಮ್ಮ ಪಾಸ್‌ಪೋರ್ಟ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Indian police officials escort immigrants, wearing mask, deported from the United States, who were among those who arrived in a U.S. military plane Wednesday in Amritsar, upon their arrival at the Ahmedabad airport in India
ಫೆಬ್ರವರಿ 6ರಂದು ಭಾರತಕ್ಕೆ ಆಗಮಿಸಿದ್ದ ಮೊದಲ ತಂಡ
Updated on

ಚಂಡೀಗಢ: ಅಮೆರಿಕದಿಂದ ಗಡೀಪಾರುಗೊಂಡ ಸುಮಾರು 119 ಮಂದಿ ಭಾರತೀಯರು ಈ ವಾರಾಂತ್ಯದಲ್ಲಿ ಎರಡು ವಿಮಾನಗಳಲ್ಲಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆಯಿದೆ. ಜನವರಿ 20 ರಂದು ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ನಾಳೆ ಶನಿವಾರ ಒಂದು ವಿಮಾನ ಮತ್ತು ಭಾನುವಾರ ಫೆಬ್ರವರಿ 16ರಂದು ಅಮೃತಸರದ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಬಂದಿಳಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಗಡೀಪಾರು ಮಾಡಲ್ಪಟ್ಟವರಲ್ಲಿ 67 ಮಂದಿ ಪಂಜಾಬ್‌ನವರು, 33 ಮಂದಿ ಹರಿಯಾಣದವರು, ಎಂಟು ಮಂದಿ ಗುಜರಾತ್‌ನವರು, ಮೂವರು ಉತ್ತರ ಪ್ರದೇಶದವರು, ತಲಾ ಇಬ್ಬರು ರಾಜಸ್ಥಾನ ಮತ್ತು ಮಹಾರಾಷ್ಟ್ರದವರು ಮತ್ತು ತಲಾ ಒಬ್ಬರು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದವರಾಗಿದ್ದಾರೆ.

ಈ ಗಡೀಪಾರು ಮಾಡಲ್ಪಟ್ಟವರು ಮೆಕ್ಸಿಕೋ ಗಡಿ ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿ ನಂತರ ತಮ್ಮ ಪಾಸ್‌ಪೋರ್ಟ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದಿಂದ ಗಡೀಪಾರು ಮಾಡಲಾಗುತ್ತಿರುವ ಎರಡನೇ ಗುಂಪು ಇದಾಗಿದೆ. ಫೆಬ್ರವರಿ 5 ರಂದು ಅಮೃತಸರಕ್ಕೆ ಬಂದ ಮೊದಲ ಗುಂಪಿನಲ್ಲಿ 104 ಭಾರತೀಯರು ಇದ್ದರು, ಅವರ ಕೈಗಳಿಗೆ ಕೋಳ ತೊಡಿಸಿ, ಕಾಲುಗಳಿಗೆ ಸರಪಳಿ ಕಟ್ಟಿ ಕರೆತರಲಾಗಿತ್ತು ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ, ಗಡೀಪಾರು ಮಾಡಿದವರ ಬಗ್ಗೆ ಭಾರತ ತನ್ನ ಕಳವಳವನ್ನು ಅಮೆರಿಕಕ್ಕೆ ತಿಳಿಸಿತ್ತು.

ನಿನ್ನೆ ಅಮೆರಿಕದಲ್ಲಿ ಶ್ವೇತಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೊಡ್ಡ ಕನಸುಗಳು ಮತ್ತು ಭರವಸೆಗಳೊಂದಿಗೆ ಸಾಮಾನ್ಯ ಕುಟುಂಬಗಳು ಜನರು ಇಲ್ಲಿಗೆ ಬರುತ್ತಾರೆ, ಜನರು ಈ ರೀತಿ ಅಕ್ರಮವಾಗಿ ಬರಲು ಆಕರ್ಷಿಸುವ ಮತ್ತು ಹೀಗೆ ಬಂದವರನ್ನು ಅಕ್ರಮ ವಲಸಿಗರೆಂದು ಆಕರ್ಷಿಸುವ ಮಾನವ ಕಳ್ಳಸಾಗಣೆಯ ವಿರುದ್ಧ ಹೋರಾಡುವ ಅಗತ್ಯವನ್ನು ಪ್ರತಿಪಾದಿಸಿದರು.

Indian police officials escort immigrants, wearing mask, deported from the United States, who were among those who arrived in a U.S. military plane Wednesday in Amritsar, upon their arrival at the Ahmedabad airport in India
ಅಕ್ರಮ ವಲಸಿಗರ ವಾಪಸಾತಿ: ಕೈಗೆ ಕೋಳ, ಕಾಲಿಗೆ ಬೇಡಿ..; ಅಮೆರಿಕಾದಿಂದ ಭಾರತಕ್ಕೆ ಬಂದವರ ಕಣ್ಣೀರ ಕಥೆ ಇದು...!

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಯಾವುದೇ ಪರಿಶೀಲಿಸಿದ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಹೇಳಿದರು. ಮಾನವ ಕಳ್ಳಸಾಗಣೆಯನ್ನು ನಿರ್ಮೂಲನೆ ಮಾಡಲು ಮಾತುಕತೆ ನಡೆಸಬೇಕೆಂದು ಮೋದಿ ಒತ್ತಾಯಿಸಿದರು.

ಇತರ ದೇಶಗಳಲ್ಲಿ ಅಕ್ರಮವಾಗಿ ಉಳಿದಿರುವವರಿಗೆ ಅಲ್ಲಿರಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ. ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ, ಪರಿಶೀಲಿಸಲ್ಪಟ್ಟವರು ಮತ್ತು ನಿಜವಾಗಿಯೂ ಭಾರತದ ನಾಗರಿಕರಾಗಿರುವವರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ, ಭಾರತ ಅವರನ್ನು ವಾಪಸ್ ಕರೆಸಿಕೊಳ್ಳುತ್ತದೆ. ಇಂಥವರು ಸಾಮಾನ್ಯ ಕುಟುಂಬಗಳ ಜನರು. ಅವರಿಗೆ ದೊಡ್ಡ ದೊಡ್ಡ ಹುಸಿ ಕನಸುಗಳನ್ನು ಆಸೆಗಳನ್ನು ತೋರಿಸಿ ಹೆಚ್ಚಿನವರನ್ನು ದಾರಿ ತಪ್ಪಿಸಿ ಇಲ್ಲಿಗೆ ಕರೆತರಲಾಗುತ್ತದೆ ಎಂದು ಹೇಳಿದರು.

Indian police officials escort immigrants, wearing mask, deported from the United States, who were among those who arrived in a U.S. military plane Wednesday in Amritsar, upon their arrival at the Ahmedabad airport in India
ವಿದೇಶಗಳ ಅಕ್ರಮ ವಲಸಿಗರ ವಿರುದ್ಧ ವಲಸೆ ಕಾನೂನು ಜಾರಿಗೊಳಿಸುವುದು ನಮ್ಮ ನೀತಿ: ಅಮೆರಿಕಾ

ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (USCBP) ಪ್ರಕಾರ, 2022 ಮತ್ತು ನವೆಂಬರ್ 2024 ರ ನಡುವೆ ಸುಮಾರು 1,700 ಭಾರತೀಯರನ್ನು ಬಂಧಿಸಲಾಗಿದೆ. 2022 ರಲ್ಲಿ, 409 ಜನರನ್ನು ತಡೆಹಿಡಿಯಲಾಯಿತು, 2023 ರಲ್ಲಿ 730 ಮತ್ತು 2024 ರಲ್ಲಿ ನವೆಂಬರ್ ವರೆಗೆ 42 ಅಪ್ರಾಪ್ತರು ಸೇರಿದಂತೆ 517 ಜನರನ್ನು ಬಂಧಿಸಲಾಯಿತು. 2022 ರಲ್ಲಿ, ಪ್ಯೂ ಸಂಶೋಧನಾ ಕೇಂದ್ರವು ಯುಎಸ್‌ನಲ್ಲಿ ವಾಸಿಸುವ 7,25,000 ಅನಧಿಕೃತ ಭಾರತೀಯ ವಲಸಿಗರು ಎಂದು ಅಂದಾಜಿಸಿದೆ.

ಅಕ್ರಮ ವಲಸಿಗರ ಸಾಮೂಹಿಕ ಗಡೀಪಾರು ಟ್ರಂಪ್ ಆಡಳಿತದ ವಿಶಾಲ ವಲಸೆ ನೀತಿಯ ಪ್ರಮುಖ ಭಾಗವಾಗಿದೆ, ಇದು ಅಕ್ರಮವಾಗಿ ನೆಲೆಸಿರುವ ವ್ಯಕ್ತಿಗಳನ್ನು ದೇಶದಿಂದ ಕಳುಹಿಸುವತ್ತ ಗಮನಹರಿಸಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com