ದೆಹಲಿ: ಕುತೂಹಲ ಮೂಡಿಸಿದ ನೂತನ ಸಿಎಂ ಆಯ್ಕೆ; ಫೆಬ್ರವರಿ 19-20ರಂದು ಪ್ರಮಾಣ ವಚನ ಸಾಧ್ಯತೆ

27 ವರ್ಷಗಳ ನಂತರ ಕೇಸರಿ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದು, ಪ್ರಮಾಣವಚನ ಸ್ವೀಕಾರಕ್ಕೆ ಒಂದು ದಿನ ಮೊದಲು ಬಿಜೆಪಿ ಶಾಸಕಾಂಗ ಪಕ್ಷ ನಡೆಯುವ ಸಾಧ್ಯತೆಯಿದೆ.
BJP supporters celebrate the party's decisive lead in the Delhi Assembly polls as counting of votes is underway, outside the Delhi BJP office.
ದೆಹಲಿಯಲ್ಲಿ ಬಿಜೆಪಿ ಬೆಂಬಲಿಗರ ಸಂಭ್ರಮಾಚರಣೆ
Updated on

ನವದೆಹಲಿ: ದೆಹಲಿ ಚುನಾವಣಾ ಫಲಿತಾಂಶ ಹೊರಬಿದ್ದು ಬಿಜೆಪಿ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ದೆಹಲಿಯ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲದ ನಡುವೆ, ಇದೇ ಫೆಬ್ರವರಿ 19 ಅಥವಾ 20 ರಂದು ಬಿಜೆಪಿ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆಯಬಹುದು ಎಂದು ಹೇಳಲಾಗುತ್ತಿದೆ.

27 ವರ್ಷಗಳ ನಂತರ ಕೇಸರಿ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದು, ಪ್ರಮಾಣವಚನ ಸ್ವೀಕಾರಕ್ಕೆ ಒಂದು ದಿನ ಮೊದಲು ಬಿಜೆಪಿ ಶಾಸಕಾಂಗ ಪಕ್ಷ ನಡೆಯುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ಸರ್ಕಾರ ರಚನೆಗೆ ಸಿದ್ಧತೆಗಳು ವೇಗ ಪಡೆಯುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಹಿರಿಯ ನಾಯಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ, ಬಹುಶಃ ಒಬ್ಬರು ಅಥವಾ ಇಬ್ಬರು ಅವರ ಉಪನಾಯಕರು ಮತ್ತು ಮಂತ್ರಿಮಂಡಲ ರಚಿಸಬಹುದು.

ಪ್ರಧಾನಿ ಮೋದಿ ಆಗಮನದ ನಂತರ, ಪಕ್ಷದ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಹೆಸರನ್ನು ಘೋಷಿಸುವ ಮೊದಲು ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಚರ್ಚಿಸಲು ವೀಕ್ಷಕರನ್ನು ನೇಮಿಸುತ್ತದೆ.

ರಾಜೌರಿ ಗಾರ್ಡನ್‌ನ ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ, ಫೆಬ್ರವರಿ 18-19 ರಂದು ಶಾಸಕಾಂಗ ಪಕ್ಷದ ಸಭೆಯ ನಂತರ ಹೊಸ ಸರ್ಕಾರ ಫೆಬ್ರವರಿ 19-20 ರಂದು ಅಸ್ತಿತ್ವಕ್ಕೆ ಬರಬಹುದು ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಇದೆ ಎಂಬ ವರದಿಗಳನ್ನು ಬಿಜೆಪಿಯ ಹಿರಿಯ ನಾಯಕರು ತಳ್ಳಿಹಾಕಿದ್ದು, ಅವೆಲ್ಲ ಕೇವಲ ಊಹಾಪೋಹವಷ್ಟೆ ಎಂದಿದ್ದಾರೆ.

BJP supporters celebrate the party's decisive lead in the Delhi Assembly polls as counting of votes is underway, outside the Delhi BJP office.
ದೆಹಲಿ ಗದ್ದುಗೆಗೆ ಮತ್ತೆ ಮಹಿಳಾ ಮುಖ್ಯಮಂತ್ರಿ?: CM ಹುದ್ದೆಗೆ ರೇಖಾ ಗುಪ್ತಾ ನೇಮಿಸಲು ಬಿಜೆಪಿ ಒಲವು!

ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಪೈಪೋಟಿ ಇಲ್ಲ. ನಮ್ಮ ಪಕ್ಷದಲ್ಲಿ, ಸಿಎಂ ಅಥವಾ ಶಾಸಕಾಂಗ ಪಕ್ಷದ ನಾಯಕನನ್ನು ಶಾಸಕರ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದರು. ನಾವು ಅಭಿವೃದ್ಧಿ, ಜನರಿಗೆ ಶುದ್ಧ ನೀರು ಮತ್ತು ಗಾಳಿಯನ್ನು ಒದಗಿಸುವುದಕ್ಕೆ ಆದ್ಯತೆ ನೀಡುತ್ತೇವೆ. ಯಮುನಾ ನೀರನ್ನು ಮಾಲಿನ್ಯ ಮುಕ್ತಗೊಳಿಸಲು ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಧಾನಿಯವರ ಭರವಸೆಯಂತೆ, ಎಎಪಿ ಸರ್ಕಾರದಿಂದ ಅಡ್ಡಿಪಡಿಸಲ್ಪಟ್ಟ ಆಯುಷ್ಮಾನ್ ಭಾರತ್ ಯೋಜನೆಯನ್ನು ಹೊಸ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಜಾರಿಗೆ ತರಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com