ಗಡಿಪಾರುಗೊಂಡ 119 ಮಂದಿ ಭಾರತೀಯರ ಎರಡನೇ ತಂಡವನ್ನು ಹೊತ್ತ ಅಮೆರಿಕ ವಿಮಾನ ಅಮೃತಸರಕ್ಕೆ ಆಗಮನ

ಗಡಿಪಾರು ಮಾಡಲಾದವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷ ವಯಸ್ಸಿನ ಯುವಕ-ಯುವತಿಯರಾಗಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಚಂಡೀಗಢ: 119 ಮಂದಿ ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ವಿಮಾನ ನಿನ್ನೆ ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಡೊನಾಲ್ಡ್ ಟ್ರಂಪ್ ಆಡಳಿತದ ಅಕ್ರಮ ವಲಸೆ ವಿರುದ್ಧದ ಕಠಿಣ ಕ್ರಮದ ಅಡಿಯಲ್ಲಿ ಗಡೀಪಾರು ಮಾಡಲಾದ ಭಾರತೀಯರ ಎರಡನೇ ತಂಡ ಇದಾಗಿದೆ.

ವಿಮಾನವು ಕಳೆದ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಮೂಲಗಳು ತಿಳಿಸಿವೆ. ಗಡೀಪಾರು ಮಾಡಲಾದವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷ ವಯಸ್ಸಿನ ಯುವಕ-ಯುವತಿಯರಾಗಿದ್ದಾರೆ.

ಗಡೀಪಾರು ಮಾಡಲಾದ 119 ಜನರಲ್ಲಿ 67 ಜನರು ಪಂಜಾಬ್‌ನವರು, 33 ಜನರು ಹರಿಯಾಣದವರು, ಎಂಟು ಜನರು ಗುಜರಾತ್‌ನವರು, ಮೂವರು ಉತ್ತರ ಪ್ರದೇಶದವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರಾಗಿದ್ದಾರೆ.

ಗಡೀಪಾರು ಮಾಡಲಾದ ತನ್ನ ಮೊಮ್ಮಗನಿಗಾಗಿ ಕಾಯುತ್ತಿದ್ದ ಜಂಡಿಯಾಲ ಗುರುವಿನ ಮಂಗಲ್ ಸಿಂಗ್, ಜನವರಿ 29 ಮತ್ತು 30 ರ ಮಧ್ಯರಾತ್ರಿ ಯುಎಸ್-ಮೆಕ್ಸಿಕೋ ಗಡಿಯ ಮೂಲಕ ಆತ ಯುಎಸ್ ಗಡಿಯನ್ನು ದಾಟಿ ಹೋಗಿದ್ದ ಎನ್ನುತ್ತಾರೆ.

ಅವನು ಒಂಬತ್ತು ತಿಂಗಳ ಹಿಂದೆ ಭಾರತವನ್ನು ತೊರೆದಿದ್ದನು. ನಾವು ಅವನನ್ನು ಕಳುಹಿಸಲು 46 ಲಕ್ಷ ರೂಪಾಯಿ ಖರ್ಚು ಮಾಡಿದ್ದೆವು. ಒಬ್ಬ ಏಜೆಂಟ್ ಅವನನ್ನು ಕಾನೂನುಬದ್ಧವಾಗಿ ಕಳುಹಿಸುವುದಾಗಿ ನಮಗೆ ಹೇಳಿದನು ಆದರೆ ನಂತರ ಅವನು ನಮ್ಮ ಮೊಮ್ಮಗನನ್ನು ಕಾನೂನುರಹಿತವಾಗಿ ಕಳುಹಿಸಿದನು ಎಂದು ತಿಳಿಯಿತು. ನಾವು ಸಾಲ ತೆಗೆದುಕೊಂಡು ಅವನನ್ನು ಕಳುಹಿಸಲು ಭೂಮಿಯನ್ನು ಮಾರಿದೆವು. ಏಜೆಂಟ್ ನಮ್ಮ ಹಣವನ್ನು ಹಿಂತಿರುಗಿಸದಿದ್ದರೆ ನಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಹೇಳುತ್ತಾರೆ.

ಗುರುದಾಸಪುರದ ಮತ್ತೊಂದು ಕುಟುಂಬವು ತಮ್ಮ ಮಗ ಗುರ್ಮೀಲ್ ಸಿಂಗ್ ಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿತ್ತು, ಗುರ್ಮೀಲ್ ಸಿಂಗ್ ಎರಡು ವರ್ಷಗಳ ಹಿಂದೆ ಭಾರತವನ್ನು ತೊರೆದು ಈ ವರ್ಷ ಜನವರಿ 30 ರಂದು ಅಮೆರಿಕ ಹೋಗಿದ್ದರು. ಆತನ ತಂದೆ ಮತ್ತು ಸೋದರಸಂಬಂಧಿ ಟ್ರಾವೆಲ್ ಏಜೆಂಟ್‌ಗೆ 50 ಲಕ್ಷ ರೂಪಾಯಿಗಳ ಒಪ್ಪಂದದ ಮೇರೆಗೆ 36 ಲಕ್ಷ ರೂಪಾಯಿಗಳನ್ನು ಪಾವತಿಸಿ ಕಳುಹಿಸಿದ್ದರು.

Representational image
ಟ್ರಂಪ್ ಆದೇಶ: ವೀಸಾಗಳಿಗಾಗಿ ಕಾಯುವಿಕೆ ಅವಧಿ ಇನ್ನು ಮುಂದೆ ಮತ್ತಷ್ಟು ಹೆಚ್ಚು! ಡ್ರಾಪ್‌ಬಾಕ್ಸ್ ಅರ್ಹತಾ ಅವಧಿ 12 ತಿಂಗಳಿಗೆ ಇಳಿಕೆ

ಫೆಬ್ರವರಿ 5 ರಂದು, ಸುಮಾರು 40 ಗಂಟೆಗಳ ಪ್ರಯಾಣದ ನಂತರ 104 ಭಾರತೀಯ ಗಡೀಪಾರುಗಾರರ ಮೊದಲ ಗುಂಪು ಅಮೃತಸರಕ್ಕೆ ಆಗಮಿಸಿತು, ಈ ಸಮಯದಲ್ಲಿ ಅವರ ಕೈಗಳಿಗೆ ಕೋಳ ಹಾಕಿ ಮತ್ತು ಅವರ ಕಾಲುಗಳಿಗೆ ಸರಪಳಿಗಳಿಂದ ಬಂಧಿಸಲಾಯಿತು, ಇದು ಯುಎಸ್ ಅಮಾನವೀಯ ವರ್ತನೆಯ ವಿರುದ್ಧ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.ಏತನ್ಮಧ್ಯೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಇಳಿಸುವ ಕ್ರಮವನ್ನು ಪ್ರಶ್ನಿಸಿದರು, ಕೇಂದ್ರವು ಪಿತೂರಿಯ ಭಾಗವಾಗಿ ಪಂಜಾಬ್‌ಗೆ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ನೇತೃತ್ವದ ಕೇಂದ್ರವು ಯಾವಾಗಲೂ ಪಂಜಾಬ್ ವಿರುದ್ಧ ತಾರತಮ್ಯ ಮಾಡುತ್ತದೆ. ರಾಜ್ಯಕ್ಕೆ ಮಾನಹಾನಿ ಮಾಡುವ ಯಾವುದೇ ಅವಕಾಶವನ್ನು ಅದು ಬಿಡುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಮೃತಸರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು. ಅಕ್ರಮ ವಲಸಿಗರನ್ನು ಅಮೃತಸರಕ್ಕೆ ಕರೆಸಿಕೊಳ್ಳುತ್ತಿರುವುದು ಒಂದು ಪಿತೂರಿಯ ಭಾಗವಾಗಿ, ಅವರು ಪಂಜಾಬ್ ಮತ್ತು ಪಂಜಾಬಿಗಳಿಗೆ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Representational image
ಮೋದಿ ನನಗಿಂತ ಕಠಿಣ, ಅತ್ಯುತ್ತಮ ಸಂಧಾನಕಾರ: ಪ್ರಧಾನಿಯನ್ನು ಹೊಗಳಿದ Trump

ಎರಡನೇ ವಿಮಾನವನ್ನು ಇಳಿಸಲು ಅಮೃತಸರ ವಿಮಾನ ನಿಲ್ದಾಣವನ್ನು ಯಾವ ಮಾನದಂಡದ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಮಾನ್ ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಅಮೃತಸರವನ್ನು ಆಯ್ಕೆ ಮಾಡಲು ಮಾನದಂಡವೇನು? ಕೇಂದ್ರ ಮತ್ತು ವಿದೇಶಾಂಗ ಸಚಿವಾಲಯ ನನಗೆ ಹೇಳಬೇಕು. ನೀವು ರಾಷ್ಟ್ರ ರಾಜಧಾನಿಯನ್ನು ಅಲ್ಲ, ಅಮೃತಸರವನ್ನು ಏಕೆ ಆಯ್ಕೆ ಮಾಡಿದ್ದೀರಿ ಪಂಜಾಬ್ ಮತ್ತು ಪಂಜಾಬಿಗಳಿಗೆ ಮಾನಹಾನಿ ಮಾಡಲು ನೀವು ಇದನ್ನು ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.

ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಎಸ್‌ಸಿಬಿಪಿ) ಪ್ರಕಾರ, 2022 ಮತ್ತು ನವೆಂಬರ್ 2024 ರ ನಡುವೆ ಸುಮಾರು 1,700 ಭಾರತೀಯರನ್ನು ಬಂಧಿಸಲಾಗಿದೆ. 2022 ರಲ್ಲಿ, 409 ಜನರನ್ನು ತಡೆಹಿಡಿಯಲಾಯಿತು, 2023 ರಲ್ಲಿ 730 ಮತ್ತು 2024 ರಲ್ಲಿ ನವೆಂಬರ್ ವರೆಗೆ 42 ಅಪ್ರಾಪ್ತ ವಯಸ್ಕರು ಸೇರಿದಂತೆ 517 ಜನರನ್ನು ಬಂಧಿಸಲಾಯಿತು.

ಸಾಮೂಹಿಕ ಗಡೀಪಾರು ಟ್ರಂಪ್ ಆಡಳಿತದ ವಿಶಾಲ ವಲಸೆ ನೀತಿಯ ಪ್ರಮುಖ ಭಾಗವಾಗಿದೆ, ಇದು ಕಠಿಣ ಜಾರಿ ಮತ್ತು ದಾಖಲೆರಹಿತ ವ್ಯಕ್ತಿಗಳನ್ನು ತೆಗೆದುಹಾಕುವತ್ತ ಗಮನಹರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com