MahaKumbh 2025
ಮಹಾಕುಂಭಮೇಳ

ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ.. ಕುಡಿಯಬೇಡಿ: ವೈದ್ಯರ ಎಚ್ಚರಿಕೆ

ಕುಂಭದಿಂದ ಹಿಂತಿರುಗುತ್ತಿರುವ ಸಾಕಷ್ಟು ಜನರಲ್ಲಿ ನಾವು ಹಲವು ವೈದ್ಯಕೀಯ ಸಮಸ್ಯೆಗಳಿರುವುದನ್ನು ಗಮನಿಸುತ್ತಿದ್ದೇವೆ. ತುಂಬಾ ಜನರು ಇರುವ ಸ್ಥಳದಲ್ಲಿನ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
Published on

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತರಿಗೆ ವೈದ್ಯರು ಎಚ್ಚರಿಕೆ ನೀಡಿದ್ದು, ಕುಂಭಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ.. ಕುಡಿಯಬೇಡಿ ಎಂದು ಹೇಳಿದ್ದಾರೆ.

ಹೌದು.. ಕುಂಭಮೇಳದ ಗಂಗಾ ನದಿಯಲ್ಲಿ ಮಲ ಬ್ಯಾಕ್ಟೀರಿಯಾದ ಬಗ್ಗೆ, ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಲಹೆಗಾರರೊಬ್ಬರು, "ಕುಂಭದಿಂದ ಹಿಂತಿರುಗುತ್ತಿರುವ ಸಾಕಷ್ಟು ಜನರಲ್ಲಿ ನಾವು ಹಲವು ವೈದ್ಯಕೀಯ ಸಮಸ್ಯೆಗಳಿರುವುದನ್ನು ಗಮನಿಸುತ್ತಿದ್ದೇವೆ. ತುಂಬಾ ಜನರು ಇರುವ ಸ್ಥಳದಲ್ಲಿನ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಕುಂಭಮೇಳದಲ್ಲಿ ಈವರೆಗೂ 52 ಕೋಟಿಗೂ ಅಧಿಕ ಮಂದಿ ಸ್ನಾನ ಮಾಡಿದ್ದಾರೆ. ಇಷ್ಟು ಮಂದಿ ಸ್ನಾನ ಮಾಡುವ ಜಾಗದಲ್ಲಿ ಇದು ಸಂಭವಿಸುತ್ತದೆ ಎಂದು ನಾವು ಮೊದಲೇ ನಿರೀಕ್ಷಿಸಿದ್ದೆವು ಎಂದು ಹೇಳಿದ್ದಾರೆ.

ಸಮಸ್ಯೆ ಇರುವ ಜನರ ಸಂಖ್ಯೆ ಕಡಿಮೆ ಇದೆ

ಇನ್ನು ಇದೇ ವೇಳೆ ಕುಂಭಮೇಳಕ್ಕೆ ಆಗಮಿಸಿದ ಜನರ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಅಲ್ಲಿ ವೈದ್ಯಕೀಯ ಸಮಸ್ಯೆಗಳೊಂದಿಗೆ ಬರುವ ಜನರ ಸಂಖ್ಯೆ ತುಂಬಾ ಕಡಿಮೆ. ಆ ರೀತಿಯಲ್ಲಿ, ನಿಯಂತ್ರಣವು ತುಂಬಾ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಜನರು ಗ್ಯಾಸ್ಟ್ರೋಎಂಟರೈಟಿಸ್ಸ ಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಲ್ಲಿ ಅವರಿಗೆ ಬೇದಿ, ವಾಂತಿಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

MahaKumbh 2025
ಮಹಾಕುಂಭಮೇಳ ಮತ್ತು 144 ವರ್ಷಗಳಿಗೊಮ್ಮೆ ಎಂದು ಹೇಳಿ ಜನರ ದಾರಿ ತಪ್ಪಿಸಿದ್ದಾರೆ: ಯೋಗಿ ಆದಿತ್ಯನಾಥ್ ವಿರುದ್ಧ ಅಖಿಲೇಶ್ ವಾಗ್ದಾಳಿ!

"ಬಹುಶಃ, ಅವು ವೈರಾಣು ಜ್ವರಗಳಾಗಿರಬಹುದು. ಕೆಲವು ಜನರು ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದಾರೆ, ಉದಾಹರಣೆಗೆ ಮೂಗು ಸೋರುವುದು, ಸೀನುವುದು, ಕೆಮ್ಮು ಮತ್ತು ಶೀತ, ಇದು ತುಂಬಾ ಸಾಮಾನ್ಯವಾಗಿದೆ. ನೀವು ಅಂತಹ ಜನದಟ್ಟಣೆಯ ಸ್ಥಳಕ್ಕೆ ಹೋಗಿ, ನಂತರ ನೀವು ಸ್ನಾನ ಮಾಡಿದಾಗ ಅಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಅದು ಬೆಳಿಗ್ಗೆ 3 ಗಂಟೆಯಾಗಿರಬಹುದು.. ಆಗಲೂ ನೀವು ಇಷ್ಟು ಜನದಟ್ಟಣೆ ಇರುವ ಪ್ರದೇಶದಲ್ಲಿ ಉತ್ತಮ ಗಾಳಿ ಅಥಾವ ವಾತಾವರಣ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ನೀವು ಸುಲಭವಾಗಿ ಶೀತಕ್ಕೆ ಒಳಗಾಗಬಹುದು... ಎಂದಿದ್ದಾರೆ.

ಹೀಗಾಗಿ ಜನರು ತಮ್ಮದೇ ಆದ ನೀರನ್ನು, ಬಹುಶಃ ಮನೆಯಿಂದ ನೀರು ಅಥವಾ ಬಹುಶಃ ನೀರಿನ ಬಾಟಲಿಗಳನ್ನು ಕೊಂಡೊಯ್ಯಬೇಕು ಮತ್ತು ಅವರು ಉತ್ತಮ ಸ್ಥಳದಿಂದ ನೀರು ಕುಡಿಯಬೇಕು ಅಥವಾ ತಮ್ಮದೇ ಆದ ಬಾಟಲಿಗಳನ್ನು ಕೊಂಡೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.

"ಎರಡನೆಯ ವಿಷಯವೆಂದರೆ ಆರೋಗ್ಯಕರ ಸ್ಥಳದಿಂದ ಆಹಾರವನ್ನು ಸೇವಿಸುವುದು ಮತ್ತು ಹಸಿ ಆಹಾರಕ್ಕಿಂತ ಬೇಯಿಸಿದ ಆಹಾರವನ್ನು ಸೇವಿಸುವುದು ಉತ್ತಮ....ಜನದಟ್ಟಣೆ ಹೆಚ್ಚು ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಆದಷ್ಟೂ ಜನಸಮೂಹಿಂದ ದೂರವಿರಲು ಪ್ರಯತ್ನಿಸಿ... ನದಿಯಲ್ಲಿ ಸ್ನಾನ ಮಾಡುವಾಗ ನೀರನ್ನು ಕುಡಿಯಬೇಡಿ..." ಎಂದು ಹೇಳಿದ್ದಾರೆ.

MahaKumbh 2025
ಪ್ರಯಾಗ್‌ರಾಜ್ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ; ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದೆ: ಮಾಲಿನ್ಯ ನಿಯಂತ್ರಣ ಮಂಡಳಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com