ಅಪರೂಪದ ಶಸ್ತ್ರ ಚಿಕಿತ್ಸೆ: 21 ವರ್ಷಗಳ ನಂತರ ಯುವಕನ ಶ್ವಾಸಕೋಶದಲ್ಲಿ ಸಿಲುಕಿದ್ದ 'ಪ್ಲಾಸ್ಟಿಕ್ ಪೆನ್ ಕ್ಯಾಪ್' ತೆಗೆದ KIMS ಡಾಕ್ಟರ್!

ಕಳೆದ ಒಂದು ತಿಂಗಳಿನಿಂದ ತೂಕ ಇಳಿಕೆ ಹಾಗೂ ಧೀರ್ಘ ಕೆಮ್ಮುವಿನಿಂದ ಬಳಲುತ್ತಿದ್ದ ಕರೀಂ ನಗರದ 26 ವರ್ಷದ ಯುವಕನಿಗೆ ಕಳೆದ 10 ದಿನಗಳಲ್ಲಿ ಸಮಸ್ಯೆ ಮತ್ತಷ್ಟು ತೀವ್ರವಾಗಿದ್ದು, ರಾತ್ರಿ ಹೊತ್ತಿನಲ್ಲಿ ಮಲಗಲು ಸಾಧ್ಯವಾಗುತ್ತಿರಲಿಲ್ಲ.
pen cap in lung, undergoes successful surgery
ಶಸ್ತ್ರ ಚಿಕಿತ್ಸೆ ಮೂಲಕ ಹೊರಗೆ ತೆಗೆಯಲಾದ ಪೆನ್ ಕ್ಯಾಪ್
Updated on

ಹೈದರಾಬಾದ್: ಹೈದರಾಬಾದ್ ನ ಕೊಂಡಾಪುರದ KIMS ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷಗಳ ನಂತರ ಯುವಕನ ಶ್ವಾಸಕೋಶದಲ್ಲಿ ಸಿಲುಕಿದ್ದ 'ಪ್ಲಾಸ್ಟಿಕ್ ಪೆನ್ ಕ್ಯಾಪ್ ಹೊರಗೆ ತೆಗೆದಿದ್ದಾರೆ.

ಪತ್ತೆಯಾದದ್ದು ಹೇಗೆ: ಕಳೆದ ಒಂದು ತಿಂಗಳಿನಿಂದ ತೂಕ ಇಳಿಕೆ ಹಾಗೂ ಧೀರ್ಘ ಕೆಮ್ಮುವಿನಿಂದ ಬಳಲುತ್ತಿದ್ದ ಕರೀಂ ನಗರದ 26 ವರ್ಷದ ಯುವಕನಿಗೆ ಕಳೆದ 10 ದಿನಗಳಲ್ಲಿ ಸಮಸ್ಯೆ ಮತ್ತಷ್ಟು ತೀವ್ರವಾಗಿದ್ದು, ರಾತ್ರಿ ಹೊತ್ತಿನಲ್ಲಿ ಮಲಗಲು ಸಾಧ್ಯವಾಗುತ್ತಿರಲಿಲ್ಲ.

ಆರೋಗ್ಯ ದಿನದಿಂದ ದಿನಕ್ಕೆ ಹದೆಗೆಡುತ್ತಿದ್ದರಿಂದ ವೈದ್ಯರ ಬಳಿಗೆ ಹೋದಾಗ CT ಸ್ಕ್ಯಾನ್ ಮಾಡಿಸಲು ಹೇಳಿದ್ದಾರೆ. ಸ್ಕ್ಯಾನಿಂಗ್ ನಲ್ಲಿ ಎಡ ಭಾಗದ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗಿದೆ ,ತದನಂತರ ಅವರನ್ನು ಮಾಧಾಪುರದ KIMS ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಮತ್ತೊಂದು ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪೆನ್ನಿನ ಕ್ಯಾಪ್ ಸಿಲುಕಿರುವುದು ಕಂಡುಬಂದಿದೆ.

ಸ್ಕ್ಯಾನ್ ವೇಳೆಯಲ್ಲಿ ಆರಂಭದಲ್ಲಿ ಶ್ವಾಸಕೋಶದ ಭಾಗದಲ್ಲಿ ಊದಿರುವುದು ಕಂಡುಬಂದಾಗ ಅದೇ ಕೆಮ್ಮುವಿಗೆ ಕಾರಣವಿರಬಹುದು ಎಂದು ಅನಿಸಿತು. ನಂತರ ಮತ್ತಷ್ಟು ಪರೀಕ್ಷೆ ನಡೆಸಿದಾಗ ಶ್ವಾಸಕೋಶದ ಒಳಗಡೆ ಪೆನ್ನಿನ ಕ್ಯಾಪ್ ಸಿಲುಕಿರುವುದು ಗೊತ್ತಾಗಿದೆ.

ಈ ಮಧ್ಯೆ ಯುವಕನ ಹಿರಿಯ ಅಣ್ಣನನ್ನು ಕರೆಯಿಸಿ, ಚಿಕ್ಕವಯಸ್ಸಿನಲ್ಲಿದ್ದಾಗ ಏನಾದರೂ ನುಂಗಿರಬಹುದೇ ಎಂದು ಕೇಳಿದಾಗ, ಐದು ವರ್ಷದವನಿದ್ದಾಗ ಆಕಸ್ಮಿಕವಾಗಿ ಪೆನ್ನಿನ ಕ್ಯಾಪ್ ನುಂಗಿರುವುದನ್ನು ನೆನಪು ಮಾಡಿಕೊಂಡರು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಶ್ವಾಸಕೋಶ ತಜ್ಞ ಡಾ. ಶುಭಕರ್ ನಾಡೆಲ್ಲಾ ತಿಳಿಸಿದರು.

pen cap in lung, undergoes successful surgery
ಮಂಗಳೂರು: ಮರದ ಕೊಂಬೆ ಬಿದ್ದು ಬಾಲಕನಿಗೆ ಗಾಯ; ಎದೆಯಿಂದ 20 cm ಉದ್ದದ ಮರದ ತುಂಡು ಹೊರತೆಗೆದ ವೈದ್ಯರು

ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ: ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಪೆನ್ ಕ್ಯಾಪ್ ಹೊರಗೆ ತರಲಾಗಿದೆ. ಮೊದಲಿಗೆ ಬ್ರಾಂಕೋಸ್ಕೋಪಿ ಮೂಲಕ ಪೆನ್ನಿನ ಸುತ್ತ ರಚನೆಯಾಗಿದ್ದ ಅಂಗವನ್ನು ತೆಗೆದು ಹಾಕಲಾಯಿತು. ನಂತರ ಶ್ವಾಸಕೋಶದ ಸುತ್ತಮುತ್ತಲಿನ ಪ್ರದೇಶವನ್ನು ತೆರವುಗೊಳಿಸಿ, ಪೆನ್ ಕ್ಯಾಪ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದೇವೆ. ಸುಮಾರು 21 ವರ್ಷಗಳಿಂದ ಪೆನ್ನಿನ ಕ್ಯಾಪ್ ಒಳಗಡೆ ಇದ್ದರಿಂದ ಶ್ವಾಸಕೋಶ ಹಾನಿಯಾಗಿದೆ. ಆದರೆ ಆಂಟಿಬಯೋಟಿಕ್ ಚಿಕಿತ್ಸೆ ಮೂಲಕ ಸಮಸ್ಯೆಯಾಗಿದ್ದ ದೇಹದ ಭಾಗಕ್ಕೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಯಿತು. ಈಗ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com