ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ದೂರುಗಳ ವಿಚಾರಣೆಗೆ ಅವಕಾಶ ನೀಡಿದ್ದ ಲೋಕ್ ಪಾಲ್ ಆದೇಶ: ಸುಪ್ರೀಂ ಕೋರ್ಟ್ ತಡೆ
ನವದೆಹಲಿ: ಹಾಲಿ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ಸ್ವೀಕರಿಸಿದ್ದ ಲೋಕಪಾಲ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ತಡೆಹಿಡಿದಿದ್ದು, ಇದು ತುಂಬಾ ಗೊಂದಲಕಾರಿಯಾಗಿದೆ ಎಂದು ಹೇಳಿದೆ.
ಜನವರಿ 27 ರಂದು ಲೋಕಪಾಲ್ ಹೊರಡಿಸಿದ್ದ ಆದೇಶಕ್ಕೆ ಆರಂಭಿಸಿದ್ದ ಸ್ವಯಂಪ್ರೇರಿತ ವಿಚಾರಣೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ವಿಶೇಷ ಪೀಠವು ಕೇಂದ್ರ ಸರ್ಕಾರ ಮತ್ತು ಇತರ ಸಂಬಂಧಪಟ್ಟವರಿಗೆ ನೊಟೀಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಅಭಯ್ ಎಸ್ ಓಕಾ ಅವರನ್ನೂ ಒಳಗೊಂಡ ವಿಶೇಷ ಪೀಠವು, ದೂರುದಾರರು ನ್ಯಾಯಾಧೀಶರ ಹೆಸರನ್ನು ಬಹಿರಂಗಪಡಿಸದಂತೆ ತಡೆಯಾಜ್ಞೆ ನೀಡಿದೆ. ದೂರುದಾರರು ಸಲ್ಲಿಸಿದ ದೂರನ್ನು ಗೌಪ್ಯವಾಗಿಡುವಂತೆಯೂ ಅದು ಸೂಚಿಸಿದೆ.
ಹೈಕೋರ್ಟ್‌ನ ಹಾಲಿ ಹೆಚ್ಚುವರಿ ನ್ಯಾಯಾಧೀಶರು, ರಾಜ್ಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಖಾಸಗಿ ಕಂಪನಿಯು ದೂರುದಾರರ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ನಿಭಾಯಿಸಬೇಕಾಗಿದ್ದ ಅದೇ ಹೈಕೋರ್ಟ್‌ನ ನ್ಯಾಯಾಧೀಶರ ವಿರುದ್ಧ ಸಲ್ಲಿಸಲಾದ ಎರಡು ದೂರುಗಳ ಮೇಲೆ ಲೋಕಪಾಲ್ ಈ ಆದೇಶವನ್ನು ಹೊರಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ