
ತಿರುವನಂತಪುರಂ: ನಗರೂರಿನ ರಾಜಧಾನಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ (ಆರ್‌ಐಇಟಿ)ಯಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಮಿಜೋರಾಂನ 22 ವರ್ಷದ ಯುವಕನೊಬ್ಬನನ್ನು ಶನಿವಾರ ರಾತ್ರಿ ಕಾಲೇಜು ಆವರಣದ ಬಳಿ ಇರಿದು ಹತ್ಯೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ಕಾಲೇಜಿನಿಂದ ಸುಮಾರು 200 ಮೀಟರ್ ದೂರದಲ್ಲಿರುವ ನೆಡುಂಪರಂಬು ಜಂಕ್ಷನ್‌ನಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ವಿದ್ಯಾರ್ಥಿ ಮೇಲೆ ದಾಳಿ ನಡೆದಿದೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಆತನನ್ನು ಕೆಟಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕೆಟಿಸಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮುಂಜಾನೆ ಸಾವಿಗೀಡಾಗಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಮದ್ಯದ ಅಮಲಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ನೇಹಿತನ ರೂಂನಲ್ಲಿ ಜಗಳವಾಡಿದ್ದಾರೆ. ರಾತ್ರಿ 10.40ರ ಸುಮಾರಿಗೆ ನೆಡುಂಪರಂಬು ಜಂಕ್ಷನ್‌ಗೆ ಲೋಮಾ ಎಂಬಾತ ವ್ಯಾಲೆಂಟೈನ್‌ನನ್ನು ಕರೆಸಿದ್ದಾನೆ. ಆಗ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಲೋಮಾ ಏಕಾಏಕಿ ವ್ಯಾಲೆಂಟೈನ್‌ನ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ಈ ಹಿಂದೆಯೂ ಇಬ್ಬರ ನಡುವೆ ಜನಗಳು ನಡೆದಿದ್ದು, ಚಾಕು ಇರಿತಕ್ಕೂ ಮುನ್ನ ಪರಸ್ಪರ ಸವಾಲು ಹಾಕಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ.
ನಗರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement