ವಿದ್ಯುತ್ ಕ್ಷೇತ್ರದ ಖಾಸಗೀಕರಣ: ಜೂನ್ 26 ರಂದು ದೇಶಾದ್ಯಂತ ಪ್ರತಿಭಟನೆಗೆ AIPEF ಕರೆ!

ವಿದ್ಯುತ್ ಉಪಯುಕ್ತತೆಗಳು ಮತ್ತು ಇಲಾಖೆಗಳ ಖಾಸಗೀಕರಣ ವಿರೋಧಿಸಿ ಜೂನ್ 26 ರಂದು ಪ್ರತಿಭಟನೆ ನಡೆಸಲು ವಿದ್ಯುತ್ ನೌಕರರು ಮತ್ತು ಎಂಜಿನಿಯರ್ ಗಳ ರಾಷ್ಟ್ರೀಯ ಸಮನ್ವಯ ಸಮಿತಿ (NCCOEEE) ನಿರ್ಧರಿಸಿದೆ ಎಂದು AIPEF ಭಾನುವಾರ ಹೇಳಿದೆ.
Casual Images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ವಿದ್ಯುತ್ ಕ್ಷೇತ್ರದ ಖಾಸಗೀಕರಣದ ವಿರುದ್ಧ ಅಖಿಲ ಭಾರತ ವಿದ್ಯುತ್ ಎಂಜಿನಿಯರ್ ಒಕ್ಕೂಟ (AIPEF) ಜೂನ್ 26 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ವಿದ್ಯುತ್ ಉಪಯುಕ್ತತೆಗಳು ಮತ್ತು ಇಲಾಖೆಗಳ ಖಾಸಗೀಕರಣ ವಿರೋಧಿಸಿ ಜೂನ್ 26 ರಂದು ಪ್ರತಿಭಟನೆ ನಡೆಸಲು ವಿದ್ಯುತ್ ನೌಕರರು ಮತ್ತು ಎಂಜಿನಿಯರ್ ಗಳ ರಾಷ್ಟ್ರೀಯ ಸಮನ್ವಯ ಸಮಿತಿ (NCCOEEE) ನಿರ್ಧರಿಸಿದೆ ಎಂದು AIPEF ಭಾನುವಾರ ಹೇಳಿದೆ.

ದೇಶಾದ್ಯಂತ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಎಲ್ಲಾ ಪ್ರಾಂತ್ಯಗಳಲ್ಲಿ ಬೃಹತ್ ಸಮಾವೇಶ ನಡೆಸಲು NCCOEEE ನಿರ್ಧರಿಸಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯುತ್ ಕ್ಷೇತ್ರದ ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ ನಾಲ್ಕು ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ನಡೆಸಲು ತೀರ್ಮಾನಿಸಿದೆ.

Casual Images
ವಿದ್ಯುತ್ ಸರಬರಾಜು ಖಾಸಗೀಕರಣ ಎಷ್ಟು ಸರಿ? (ಹಣಕ್ಲಾಸು)

ಚಂಡೀಗಢದ ಲಾಭ ಗಳಿಸುವ ವಿದ್ಯುತ್ ಇಲಾಖೆಯ ಖಾಸಗೀಕರಣವನ್ನು NCCOEEE ಸಾಮಾನ್ಯ ಸಭೆಯ ನಿರ್ಣಯದಲ್ಲಿ ಟೀಕಿಸಲಾಗಿದ್ದು, ಇದು ಅತ್ಯಂತ ಆಕ್ಷೇಪಾರ್ಹ ಎಂದು ಹೇಳಿದೆ.

ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಆಸ್ತಿ ನಗದೀಕರಣದ ಹೆಸರಿನಲ್ಲಿ ವಿದ್ಯುತ್ ವಲಯವನ್ನು ವ್ಯಾಪಕವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಯ ಖಾಸಗೀಕರಣದ ಶಾಪ ಸಾಮಾನ್ಯ ಜನರಿಗೆ ತಟ್ಟುತ್ತಿದೆ ಎಂದು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com