ಭಾರತೀಯರಿಗೆ ಮೋದಿ ಸರ್ಕಾರದ ಗುಡ್ ನ್ಯೂಸ್: Universal Pension Scheme ಶೀಘ್ರವೇ ಜಾರಿ!

'ಸಾರ್ವತ್ರಿಕ ಪಿಂಚಣಿ ಯೋಜನೆ'ಯನ್ನು ನೀಡುವ ಸಾಮಾನ್ಯ ಉದ್ದೇಶವೆಂದರೆ, ಅಸ್ತಿತ್ವದಲ್ಲಿರುವ ಕೆಲವು ಯೋಜನೆಗಳನ್ನು ಸೇರಿಸುವ ಮೂಲಕ ದೇಶದಲ್ಲಿ ಪಿಂಚಣಿ/ಉಳಿತಾಯ ಚೌಕಟ್ಟನ್ನು ಸುಗಮಗೊಳಿಸುವುದಾಗಿದೆ.
Universal Pension Scheme
ಸಾರ್ವತ್ರಿಕ ಪಿಂಚಣಿ ಯೋಜನೆonline desk
Updated on

ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮಧ್ಯಮವರ್ಗದವರಿಗೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿ ಬಂಪರ್ ಘೋಷಣೆ ಮಾಡಿದ ಬಳಿಕ ಈಗ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಮತ್ತೊಂದು ಯೋಜನೆಯನ್ನು ಘೋಷಿಸಲು ಸಿದ್ಧತೆ ನಡೆಸಿದೆ.

ಅಸಂಘಟಿತ ವಲಯದಲ್ಲಿರುವವರು ಸೇರಿದಂತೆ ಎಲ್ಲಾ ನಾಗರಿಕರಿಗೆ ಲಭ್ಯವಾಗುವ 'ಸಾರ್ವತ್ರಿಕ ಪಿಂಚಣಿ ಯೋಜನೆ' (Universal Pension Scheme) ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ NDTV ವರದಿ ಪ್ರಕಟಿಸಿದೆ.

ಪ್ರಸ್ತುತ, ಅಸಂಘಟಿತ ವಲಯದಲ್ಲಿರುವವರು- ನಿರ್ಮಾಣ ಕಾರ್ಮಿಕರು, ಗೃಹ ಕಾರ್ಮಿಕರು ಮತ್ತು ಗಿಗ್ ಕೆಲಸಗಾರರು - ಸರ್ಕಾರ ನಡೆಸುವ ದೊಡ್ಡ ಉಳಿತಾಯ ಯೋಜನೆಗಳಿಗೆ ಪ್ರವೇಶವನ್ನು ಹೊಂದಿಲ್ಲ.

Universal Pension Scheme ಎಲ್ಲಾ ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೂ ಮುಕ್ತವಾಗಿರುತ್ತದೆ.

ಈ ಹೊಸ ಪ್ರಸ್ತಾವನೆ ಮತ್ತು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಂತಹ (Provident Fund Organisation) ಅಸ್ತಿತ್ವದಲ್ಲಿರುವ ಯೋಜನೆಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿರಲಿವೆ. Universal Pension Scheme ನಲ್ಲಿ ಉಳಿತಾಯ ಅಥವಾ ಕೊಡುಗೆಗಳು ಆ ವ್ಯಕ್ತಿಯ ಸ್ವಯಂಪ್ರೇರಿತ ಆಧಾರದ ಮೇಲೆ ಇರುತ್ತವೆ ಮತ್ತು ಸರ್ಕಾರ ತನ್ನ ಕಡೆಯಿಂದ ಯಾವುದೇ ಕೊಡುಗೆಗಳನ್ನು ನೀಡುವುದಿಲ್ಲ.

'ಸಾರ್ವತ್ರಿಕ ಪಿಂಚಣಿ ಯೋಜನೆ'ಯನ್ನು ನೀಡುವ ಸಾಮಾನ್ಯ ಉದ್ದೇಶವೆಂದರೆ, ಅಸ್ತಿತ್ವದಲ್ಲಿರುವ ಕೆಲವು ಯೋಜನೆಗಳನ್ನು ಸೇರಿಸುವ ಮೂಲಕ ದೇಶದಲ್ಲಿ ಪಿಂಚಣಿ/ಉಳಿತಾಯ ಚೌಕಟ್ಟನ್ನು ಸುಗಮಗೊಳಿಸುವುದಾಗಿದೆ.

Universal Pension Scheme
Unified Pension Scheme ಎಂದರೇನು? ಇದು National Pension Scheme ಗಿಂತ ಹೇಗೆ ವಿಭಿನ್ನ? (ಹಣಕ್ಲಾಸು)

ಸ್ವಯಂಪ್ರೇರಿತ ಆಧಾರದ ಮೇಲೆ ಯಾವುದೇ ನಾಗರಿಕರಿಗೆ ಇವು ಸುರಕ್ಷಿತ ಆಯ್ಕೆಯಾಗಿ ಕಂಡುಬರುತ್ತವೆ ಎಂದು ಮೂಲಗಳು ತಿಳಿಸಿವೆ. 'ಹೊಸ ಪಿಂಚಣಿ ಯೋಜನೆ' ಎಂದು ಸದ್ಯಕ್ಕೆ ಕರೆಯಲ್ಪಡುವ ಈ ಹೊಸ ಯೋಜನೆ, ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಬದಲಾಯಿಸುವುದಿಲ್ಲ ಅಥವಾ ಅದನ್ನು ಸ್ವಯಂಪ್ರೇರಿತ ಪಿಂಚಣಿ ಯೋಜನೆಯಾಗಿಯೂ ಪರಿವರ್ತಿಸುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪ್ರಸ್ತಾವನೆ ದಾಖಲೆ ಪೂರ್ಣಗೊಂಡ ನಂತರ ಪಾಲುದಾರರ ಸಮಾಲೋಚನೆ ಪ್ರಾರಂಭವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ವರೆಗಿನ ಮಾಹಿತಿಯ ಪ್ರಕಾರ, ಅಸಂಘಟಿತ ವಲಯಕ್ಕಾಗಿ, ಸರ್ಕಾರ ನಡೆಸುವ ಹಲವಾರು ಪಿಂಚಣಿ ಯೋಜನೆಗಳಿವೆ. ಉದಾಹರಣೆಗೆ ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ ಮಾಸಿಕ 1,000 - 1,500 ರೂ.ಗಳ ಆದಾಯವನ್ನು ನೀಡುವ ಅಟಲ್ ಪಿಂಚಣಿ ಯೋಜನೆ ಮತ್ತು ಬೀದಿ ವ್ಯಾಪಾರಿಗಳು, ಮನೆಕೆಲಸಗಾರರು ಅಥವಾ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ (PM-SYM), ರೈತರಿಗಾಗಿ ವಿನ್ಯಾಸಗೊಳಿಸಲಾದ ಯೋಜನೆಗಳು ಸಹ ಇವೆ, ಉದಾಹರಣೆಗೆ ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ ಮಾಸಿಕ 3,000 ರೂ.ಗಳನ್ನು ಒದಗಿಸುವ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆಗಳು ಇವೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಶೀಘ್ರವೇ Universal Pension Scheme ಜಾರಿಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com