
ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯ ದುಧ್ವಾ ಹುಲಿ ಸಂರಕ್ಷಣಾ ವಲಯದ ಬಫರ್ ವಲಯದಲ್ಲಿರುವ ಹಳ್ಳಿಯ ಇಬ್ಬರು ಗ್ರಾಮಸ್ಥರ ಮೇಲೆ ದಾಳಿ ಮಾಡಿದ ಎರಡು ವರ್ಷದ ಹುಲಿಯನ್ನು ಬುಧವಾರ ಸ್ಥಳೀಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫುಲ್ವಾರಿಯಾ ಗ್ರಾಮಸ್ಥರು ಹುಲಿಯನ್ನು ಗುಂಡು ಹಾರಿಸಿ ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅರಣ್ಯ ಅಧಿಕಾರಿಗಳು ಪಾಲಿಯಾ ತಹಸಿಲ್‌ನಲ್ಲಿರುವ ಗ್ರಾಮದಿಂದ ಹುಲಿಯ ಮೃತದೇಹವನ್ನು ಹೊರತೆಗೆದು ರೇಂಜ್ ಪ್ರಧಾನ ಕಚೇರಿಗೆ ಕಳುಹಿಸಿದ್ದಾರೆ ಎಂದು ದುಧ್ವಾ ಬಫರ್ ವಲಯದ ಉಪನಿರ್ದೇಶಕ ಸೌರೀಶ್ ಸಹಾಯ್ ಅವರು ತಿಳಿಸಿದ್ದಾರೆ.
ವನ್ಯಜೀವಿ(ರಕ್ಷಣೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪಾಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಹುಲಿ ದಾಳಿಯಿಂದ ಗಾಯಗೊಂಡ ಗ್ರಾಮಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement