Representational image
ಸಾಂದರ್ಭಿಕ ಚಿತ್ರ

ಕೇರಳ: ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವಪತ್ತೆ; ಆತ್ಮಹತ್ಯೆ ಶಂಕೆ

ಬೆಳಿಗ್ಗೆ 5.30 ರ ಸುಮಾರಿಗೆ ಕೊಟ್ಟಾಯಂ-ನಿಲಂಬೂರ್ ಪ್ಯಾಸೆಂಜರ್ ರೈಲು ಎರ್ನಾಕುಲಂ ಕಡೆಗೆ ಹೋಗುತ್ತಿದ್ದಾಗ ಮೂವರು ಹಳಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ.
Published on

ಕೇರಳ: ಕೇರಳದ ಕೊಟ್ಟಾಯಂನ ಸಮೀಪದ ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರ ವಯಸ್ಸು, ಗುರುತು ಮತ್ತು ಇತರ ವಿವರಗಳನ್ನು ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 5.30 ರ ಸುಮಾರಿಗೆ ಕೊಟ್ಟಾಯಂ-ನಿಲಂಬೂರ್ ಪ್ಯಾಸೆಂಜರ್ ರೈಲು ಎರ್ನಾಕುಲಂ ಕಡೆಗೆ ಹೋಗುತ್ತಿದ್ದಾಗ ಮೂವರು ಹಳಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಗೆ ಕಾರಣ ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ.

ಅಪಘಾತದಿಂದಾಗಿ ಈ ಮಾರ್ಗದಲ್ಲಿ ರೈಲು ಸೇವೆ ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತು. ಶವಗಳನ್ನು ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Representational image
ನನ್ನ ಸಾವಿಗೆ ರಾಜಮೌಳಿ ಕಾರಣ: ಡೆತ್ ನೋಟ್ ಬರೆದಿಟ್ಟು ನಿರ್ದೇಶಕನ ಆಪ್ತ ಸ್ನೇಹಿತ ಆತ್ಮಹತ್ಯೆ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com