
ಮುಂಬೈ: ಅಮೆರಿಕಾದ ಪಶ್ಚಿಮ ರಾಜ್ಯ ಕ್ಯಾಲಿಫೋರ್ನಿಯಾದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಭೀಕರ ರಸ್ತೆ ಅಪಘಾತ ನಂತರ ಕೋಮಾಕ್ಕೆ ಹೋಗಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ನೀಲಂ ಶಿಂಧೆ ಅವರ ಕುಟುಂಬಕ್ಕೆ ಅಮೆರಿಕ ರಾಯಭಾರ ಕಚೇರಿ ತುರ್ತು ವೀಸಾ ನೀಡಿದೆ.
ಫೆಬ್ರವರಿ 16 ರಂದು ನೀಲಂ ಶಿಂಧೆಯ ರೂಮ್‌ಮೇಟ್‌ನಿಂದ ನನಗೆ ಫೋನ್ ಕರೆ ಬಂದಿತು. ಅಪಘಾತದ ಬಗ್ಗೆ ಅವಳು ನನಗೆ ಹೇಳರಲಿಲ್ಲ. ನಂತರ ಆಕೆ ನೀಲಂ ಅವರ ಚಿಕ್ಕಪ್ಪನಿಗೆ ಅದರ ಬಗ್ಗೆ ತಿಳಿಸಿದಳು. ಆಕೆ ಇನ್ನೂ ಕೋಮಾ ಸ್ಥಿತಿಯಲ್ಲಿದ್ದಾಳೆ. ಈಗ ಸ್ಥಿತಿ ಸ್ವಲ್ಪ ಸುಧಾರಿಸಿದೆ. ನಾವು ಇಲ್ಲಿ ರಾಯಭಾರ ಕಚೇರಿಗೆ ಬಂದಿದ್ದು, ಇಲ್ಲಿ ಸಂದರ್ಶನವನ್ನು ತೆಗೆದುಕೊಂಡು ಅರ್ಧ ಗಂಟೆಯಲ್ಲಿ ವೀಸಾಗಳನ್ನು ನೀಡಿದರು. ನಾಳೆ ಯುಎಸ್ ಗೆ ಹೊರಡುತ್ತೇವೆ ಎಂದು ತನ್ಹಾಜಿ ಶಿಂಧೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಜೀವನ್ಮರಣದ ಹೋರಾಟದಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯ ಕುಟುಂಬಕ್ಕೆ ತುರ್ತು ವೀಸಾ ನೀಡುವಂತೆ ವಿದೇಶಾಂಗ ಸಚಿವಾಲಯ (MEA) ಅಮೆರಿಕಕ್ಕೆ ಮನವಿ ಮಾಡಿತ್ತು.
ಮಹಾರಾಷ್ಟ್ರದ ಸತಾರದ ನೀಲಂ ಶಿಂಧೆ ಫೆಬ್ರವರಿ 14 ರಂದು ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾರೆ. ಅವರ ಕುಟುಂಬವು ಈ ಸಂದರ್ಭದಲ್ಲಿ ಜೊತೆಗಿರಲು ಅಮೆರಿಕಕ್ಕೆ ಪ್ರಯಾಣಿಸಲು ತುರ್ತು ವೀಸಾವನ್ನು ಕೋರಿತ್ತು.
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕಿ ಶರದ್ಚಂದ್ರ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು, ವಿದ್ಯಾರ್ಥಿನಿ ನೀಲಂ ಶಿಂಧೆ ಅಮೆರಿಕದಲ್ಲಿ ಅಪಘಾತಕ್ಕೀಡಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಮಹಾರಾಷ್ಟ್ರದ ಸತಾರದ ಆಕೆಯ ತಂದೆ ತಾನಾಜಿ ಶಿಂಧೆ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ತಮ್ಮ ಮಗಳನ್ನು ತುರ್ತಾಗಿ ಭೇಟಿ ಮಾಡಬೇಕಾಗಿದೆ. ತಾನಾಜಿ ಶಿಂಧೆ ಅಮೆರಿಕಕ್ಕೆ ತುರ್ತು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ತುರ್ತು ಸಹಾಯದ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ನೀಲಂ ಶಿಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅವರ ಕುಟುಂಬಕ್ಕೆ ತನ್ನ ಬೆಂಬಲವನ್ನು ನೀಡಿದೆ. ದೂತಾವಾಸ ಕಚೇರಿಯು ಶಿಂಧೆ ಅವರ ಕುಟುಂಬದೊಂದಿಗೆ ತನ್ನ ಸಹಾನುಭೂತಿ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿದೆ. ಆಸ್ಪತ್ರೆ, ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಭರವಸೆ ನೀಡಿದೆ.
Advertisement