
ಮುಂಬೈ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) 'ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿಕೊಂಡಿದೆ.
ಭೇಟಿ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಆರ್‌ಎಸ್‌ಎಸ್ ಅನ್ನು ತಾನು ಆತ್ಮೀಯತೆಯ ಭಾವನೆಯಿಂದ ನೋಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು RSS ಸಂವಹನ ವಿಭಾಗವಾದ ವಿದರ್ಭ ಪ್ರಾಂತ್ಯದ ವಿಶ್ವ ಸಂವಾದ ಕೇಂದ್ರ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಡಾ. ಅಂಬೇಡ್ಕರ್ ಅವರು ಜನವರಿ 2, 1940 ರಂದು ಸತಾರಾ ಜಿಲ್ಲೆಯ ಕರಾಡ್‌ನಲ್ಲಿರುವ ಆರ್‌ಎಸ್‌ಎಸ್ 'ಶಾಖಾ' ಕಚೇರಿಗೆ ಭೇಟಿ ನೀಡಿದ್ದ ಅಂಬೇಡ್ಕರ್, ಅಲ್ಲಿನ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದ್ದರು. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಂಘವನ್ನು ಆತ್ಮೀಯತೆಯ ಭಾವನೆಯಿಂದ ನೋಡುತ್ತೇನೆ ಎಂದು ಹೇಳಿದ್ದರು.
ಆರ್‌ಎಸ್‌ಎಸ್ ಶಾಖೆಗೆ ಡಾ ಅಂಬೇಡ್ಕರ್ ಭೇಟಿಯ ಕುರಿತು ಜನವರಿ 9, 1940 ರಂದು ಮರಾಠಿ ದೈನಿಕ "ಕೇಸರಿ" ಯಲ್ಲಿ ವರದಿ ಪ್ರಕಟಿಸಲಾಗಿದೆ ಎಂದು ಸುದ್ದಿಯ ಕ್ಲಿಪಿಂಗ್ ನೊಂದಿಗೆ VKS ಹೇಳಿಕೆಯಲ್ಲಿ ತಿಳಿಸಿದೆ.
Advertisement