ಕೇಬಲ್ ಆಪರೇಟರ್‌ಗಳಿಂದ ಲಂಚಕ್ಕೆ ಬೇಡಿಕೆ: ಟ್ರಾಯ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ

ಆರೋಪಿ ಟ್ರಾಯ್ ಅಧಿಕಾರಿ ರಾವತ್ 1 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೇಬಲ್ ಆಪರೇಟರ್ ನೀಡಿದ ದೂರಿನ ಮೇರೆಗೆ ಸಿಬಿಐ ಜನವರಿ 1 ರಂದು ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆ ಸಿಬಿಐ
ಕೇಂದ್ರ ತನಿಖಾ ಸಂಸ್ಥೆ ಸಿಬಿಐ
Updated on

ನವದೆಹಲಿ: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಕೇಬಲ್ ಆಪರೇಟರ್‌ರಿಂದ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಹಿರಿಯ ಸಂಶೋಧನಾ ಅಧಿಕಾರಿ ನರೇಂದ್ರ ಸಿಂಗ್ ರಾವತ್ ಅವರನ್ನು ಸಿಬಿಐ ಬಂಧಿಸಿದೆ. ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಆರೋಪಿ ಟ್ರಾಯ್ ಅಧಿಕಾರಿ ರಾವತ್ 1 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೇಬಲ್ ಆಪರೇಟರ್ ನೀಡಿದ ದೂರಿನ ಮೇರೆಗೆ ಸಿಬಿಐ ಜನವರಿ 1 ರಂದು ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ದೂರುದಾರರು ಸಿರ್ಮೌರ್ ಜಿಲ್ಲೆಯಲ್ಲಿ ಕೇಬಲ್ ಸೇವೆ ಒದಗಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪರವಾನಗಿ ಹೊಂದಿದ್ದಾರೆ" ಎಂದು ಸಿಬಿಐ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ತನಿಖಾ ಸಂಸ್ಥೆ ಸಿಬಿಐ
ನಕಲಿ ಪಿಎಂಒ ಅಧಿಕಾರಿ ವಿರುದ್ಧ ಸಿಬಿಐ ಪ್ರಕರಣ ದಾಖಲು

ಇತರ ಐದು ಕೇಬಲ್ ಆಪರೇಟರ್‌ಗಳ ಪರವಾಗಿ ಈ ದೂರು ದಾಖಲಿಸಲಾಗಿದೆ. ಆರೋಪಿ ಅಧಿಕಾರಿಯು ತಮ್ಮ ನಿಯಂತ್ರಕ ದಾಖಲೆಗಳನ್ನು - ತ್ರೈಮಾಸಿಕ ಕಾರ್ಯಕ್ಷಮತೆ ಮಾನಿಟರಿಂಗ್ ವರದಿಗಳು(ಕ್ಯೂ-ಪಿಎಂಆರ್) ಮೌಲ್ಯಮಾಪನ ಮಾಡಲು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

TRAI ಮಾರ್ಗಸೂಚಿಗಳ ಪ್ರಕಾರ, ಕೇಬಲ್ ಆಪರೇಟರ್‌ಗಳು ತಮ್ಮ Q-PMR ಗಳನ್ನು ಅಧಿಕಾರಿಗೆ ಸಲ್ಲಿಸಬೇಕು. ಅದರ ಮೌಲ್ಯಮಾಪನ ಅಥವಾ ಪರಿಶೀಲನೆಯ ನಂತರ, ಕೆಲವು ವ್ಯತ್ಯಾಸಗಳು ಕಂಡುಬಂದಲ್ಲಿ ತಮ್ಮ ಪರವಾನಗಿಗಳನ್ನು ರದ್ದುಗೊಳಿಸುವುದನ್ನು ಒಪ್ಪಿಕೊಳ್ಳುತ್ತಾರೆ ಅಥವಾ ಶಿಫಾರಸು ಮಾಡುತ್ತಾರೆ.

ಎಫ್‌ಐಆರ್‌ನಲ್ಲಿ, ಆರೋಪಿಯು ಕ್ಯೂ-ಪಿಎಂಆರ್‌ಗಳಿಗೆ ಸಂಬಂಧಿಸಿದಂತೆ ಅನುಕೂಲಕರ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆಪರೇಟರ್‌ಗಳಿಗೆ ಹೇಳಿದ್ದಾರೆ ಮತ್ತು ಲಂಚ ನೀಡದಿದ್ದಲ್ಲಿ ಅವರ ಪರವಾನಗಿ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ ಎಂದು ಸಿಬಿಐ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com