ಸಂವಿಧಾನ ರಕ್ಷಣೆ, ಗಾಂಧಿ ಪರಂಪರೆ ಉಳಿಸಿ ಬೆಳೆಸಲು ಕರೆ: ಕಾಂಗ್ರೆಸ್ ನಿಂದ ಇಂದು ಅಭಿಯಾನ ಆರಂಭ

1924 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದರು. ಅಲ್ಲಿಂದ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ಸಿಡಬ್ಲ್ಯುಸಿಯ ಕೊನೆಯ ಸಭೆಯಲ್ಲಿ ಅಭಿಯಾನವನ್ನು ಆಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ಅನುಗುಣವಾಗಿ, 'ಸಂವಿಧಾನವನ್ನು ರಕ್ಷಿಸಲು' ಮತ್ತು ಮಹಾತ್ಮ ಗಾಂಧಿಯವರ ಪರಂಪರೆಯನ್ನು ಉಳಿಸಿ ಬೆಳೆಸಲು ಕಾಂಗ್ರೆಸ್ ತನ್ನ ತಿಂಗಳ ಅವಧಿಯ ಅಭಿಯಾನವನ್ನು ಇಂದು ಶುಕ್ರವಾರದಿಂದ ಪ್ರಾರಂಭಿಸಲಿದೆ.

ಕಳೆದ ಡಿಸೆಂಬರ್ 27 ರಂದು ಅಭಿಯಾನವನ್ನು ಪ್ರಾರಂಭಿಸಬೇಕಾಗಿತ್ತು, ಆದರೆ ಡಿಸೆಂಬರ್ 26 ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಗೌರವಾರ್ಥ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದರಿಂದ ಅಭಿಯಾನ ಮುಂದೂಡಲಾಗಿತ್ತು.

1924 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದರು. ಅಲ್ಲಿಂದ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ಸಿಡಬ್ಲ್ಯುಸಿಯ ಕೊನೆಯ ಸಭೆಯಲ್ಲಿ ಅಭಿಯಾನವನ್ನು ಆಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಅಭಿಯಾನ’ ಎಂಬ ಅಭಿಯಾನವನ್ನು ಇಂದು ಎಲ್ಲಾ ಬ್ಲಾಕ್‌ಗಳು, ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಜನವರಿ 26 ರಂದು ಮಧ್ಯಪ್ರದೇಶದ ಮೊವ್‌ನಲ್ಲಿರುವ ಅಂಬೇಡ್ಕರ್ ಅವರ ಜನ್ಮಸ್ಥಳದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಅಭಿಯಾನವು ಮುಕ್ತಾಯಗೊಳ್ಳಲಿದೆ.

"ಜನವರಿ 26 ಭಾರತದ ಗಣರಾಜ್ಯೋತ್ಸವ ಮತ್ತು ಭಾರತದ ಸಂವಿಧಾನದ 75 ನೇ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಸಿಡ್ಬ್ಲುಸಿ ತನ್ನ ನಿರ್ಣಯದಲ್ಲಿ, ಸಂವಿಧಾನ ಮತ್ತು ಸ್ವಾತಂತ್ರ್ಯ ಚಳವಳಿಯ ಆದರ್ಶಗಳನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದೆ. ಅದರಂತೆ, ಡಿಸೆಂಬರ್ 27 ರಂದು ಬೆಳಗಾವಿಯಲ್ಲಿ ರ್ಯಾಲಿಯಿಂದ ಪ್ರಾರಂಭವಾಗುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭಿಸುತ್ತದೆ ಮತ್ತು ಜನವರಿ 26 ರಂದು ರ್ಯಾಲಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಸಿಡಬ್ಲ್ಯುಸಿ ನಿರ್ಣಯವು ತಿಳಿಸಿದೆ.

Representational image
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಅತ್ಯಂತ ಫಲಪ್ರದವಾಗಿತ್ತು: ಡಿಸಿಎಂ ಡಿಕೆ ಶಿವಕುಮಾರ್

ಈ ತಿಂಗಳಲ್ಲಿ ಪ್ರತಿ ಬ್ಲಾಕ್, ಜಿಲ್ಲೆ ಮತ್ತು ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಮಹಾತ್ಮ ಗಾಂಧೀಜಿಯವರ ಹಾಗೂ ಸಂವಿಧಾನದ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಅಗತ್ಯದ ತುರ್ತನ್ನು ಗಮನದಲ್ಲಿಟ್ಟುಕೊಂಡು, ಈ ಆಂದೋಲನವು ಜನವರಿ 26 ರ ನಂತರವೂ ವಿಸ್ತರಿಸಲಿದೆ ಎಂದು ಅದು ಹೇಳಿದೆ.

ಜನವರಿ 26, 2025 ಮತ್ತು ಜನವರಿ 26, 2026 ರ ನಡುವೆ, ಕಾಂಗ್ರೆಸ್ ರಾಷ್ಟ್ರವ್ಯಾಪಿ ಬೃಹತ್ ಜನಸಂಪರ್ಕ ಅಭಿಯಾನವನ್ನು ಸಂವಿಧಾನ್ ಬಚಾವೋ ರಾಷ್ಟ್ರೀಯ ಪಾದಯಾತ್ರೆಯನ್ನು ಪ್ರಾರಂಭಿಸುತ್ತದೆ, ಇದರಲ್ಲಿ ಎಲ್ಲಾ ನಾಯಕರು ಭಾಗವಹಿಸುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ. ಏಪ್ರಿಲ್ 2025 ರ ಮೊದಲಾರ್ಧದಲ್ಲಿ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮುಂದಿನ ವರ್ಷ ಪ್ರಮುಖ ಸಂಘಟನೆ ಪುನಶ್ಚೇತನದ ವರ್ಷವಾಗಲಿದೆ. ಎಲ್ಲಾ ಹಂತದ ನಾಯಕರ ಹೊಣೆಗಾರಿಕೆಯ ಪರೀಕ್ಷೆ ಇರುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com