ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ, ಅಧಿಕೃತ ಭಾಷೆಯಷ್ಟೆ: ಮತ್ತೆ ಚರ್ಚೆ ಹುಟ್ಟುಹಾಕಿದ ಆರ್ ಅಶ್ವಿನ್

ಅನುಭವಿ ಆಫ್ ಸ್ಪಿನ್ನರ್ ಅಶ್ವಿನ್, ಟೀಂ ಇಂಡಿಯಾ ನಾಯಕತ್ವದ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ.
ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್
Updated on

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದ ರವಿಚಂದ್ರನ್ ಅಶ್ವಿನ್ ಇದೀಗ ಹಿಂದಿ 'ನಮ್ಮ ರಾಷ್ಟ್ರ ಭಾಷೆಯಲ್ಲ, ಅಧಿಕೃತ ಭಾಷೆಯಷ್ಟೇ' ಎಂದು ಹೇಳಿದ್ದಾರೆ. ತಮಿಳುನಾಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಶ್ವಿನ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ತಮಿಳಿನಲ್ಲಿ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗದಿದ್ದರೆ, ಹಿಂದಿಯಲ್ಲಿ ಪ್ರಶ್ನೆಗಳನ್ನು ಕೇಳಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.

'ಇಲ್ಲಿ ಇಂಗ್ಲಿಷ್ ವಿದ್ಯಾರ್ಥಿಗಳಿದ್ದರೆ yay ಎಂದು ಹೇಳಿ' ಎನ್ನುತ್ತಾರೆ ಅದಕ್ಕೆ ಪ್ರತ್ಯುತ್ತರವಾಗಿ ವಿದ್ಯಾರ್ಥಿಗಳು yay ಎಂದು ಚೀರುತ್ತಾರೆ. ಬಳಿಕ 'ತಮಿಳು' ಎನ್ನುತ್ತಾರೆ. ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಘರ್ಜಿಸುತ್ತಾರೆ. 'ಸರಿ, ಹಿಂದಿ?' ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಪ್ರೇಕ್ಷಕರು ಇದ್ದಕ್ಕಿದ್ದಂತೆ ಮೌನವಾಗುತ್ತಾರೆ. ಆಗ ಅಶ್ವಿನ್, ನಾನು ಇದನ್ನೇ ಹೇಳಬೇಕೆಂದು ನಾನು ಭಾವಿಸಿದೆ. ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ; ಇದು ಅಧಿಕೃತ ಭಾಷೆ' ಎಂದು ಅಶ್ವಿನ್ ತಮಿಳಿನಲ್ಲಿ ಹೇಳಿದರು.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ಹಲವು ವಿರೋಧ ಪಕ್ಷಗಳು ಕೇಂದ್ರವು ರಾಜ್ಯಗಳ ಮೇಲೆ, ವಿಶೇಷವಾಗಿ ದಕ್ಷಿಣದಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಸಮಯದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಈ ಹೇಳಿಕೆ ನೀಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಅನುಭವಿ ಆಫ್ ಸ್ಪಿನ್ನರ್ ಅಶ್ವಿನ್, ಟೀಂ ಇಂಡಿಯಾ ನಾಯಕತ್ವದ ವಿಷಯವನ್ನೂ ಪ್ರಸ್ತಾಪಿಸಿದರು ಮತ್ತು ಅದಕ್ಕೆ ರಾಜತಾಂತ್ರಿಕ ಉತ್ತರವನ್ನು ನೀಡಿದರು.

'ನನ್ನಿಂದ ಸಾಧ್ಯವಿಲ್ಲ ಎಂದು ಯಾರಾದರೂ ಹೇಳಿದಾಗ, ಅದನ್ನು ಸಾಧಿಸಲು ನಾನು ಸಾಕಷ್ಟು ಪ್ರಯತ್ನ ಪಡುತ್ತೇನೆ. ಆದರೆ, ಅವರು ನನಗೆ ಸಾಧ್ಯವೆಂದು ಹೇಳಿದರೆ, ನಾನು ಆಸಕ್ತಿ ಕಳೆದುಕೊಳ್ಳುತ್ತೇನೆ' ಎಂದು ವಿವರಿಸಿದರು.

ಇಂಜಿನಿಯರಿಂಗ್ ಮಾಡಿರುವ ತಮ್ಮ ಸ್ವಂತ ಕಲಿಕೆಯ ಪ್ರಯಾಣದ ಬಗ್ಗೆ ಮಾತನಾಡಿದ ಅಶ್ವಿನ್, ಅನುಮಾನಗಳು ಇರುವ ಸಮಯದಲ್ಲಿಯೂ ಸಹ ನೀವು ಎಂದಿಗೂ ಬಿಟ್ಟುಕೊಡಬೇಡಿ ಮತ್ತು ನಿರಂತರವಾಗಿ ನಿಮ್ಮ ಹಾದಿಯಲ್ಲಿಯೇ ಪ್ರಯಾಣಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ರವಿಚಂದ್ರನ್ ಅಶ್ವಿನ್
ನನ್ನ ಕ್ರಿಕೆಟ್‌ನ MVP ನಾನೇ ಹೊರತು ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅಲ್ಲ: ರವಿಚಂದ್ರನ್ ಅಶ್ವಿನ್

'ಯಾವುದೇ ಇಂಜಿನಿಯರಿಂಗ್ ಸಿಬ್ಬಂದಿ ನಾನು ಕ್ಯಾಪ್ಟನ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರೆ, ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ'. ಅನುಮಾನಗಳು ಎದುರಾದಾಗಲೂ ಏಕಾಗ್ರತೆ ಮತ್ತು ತಮ್ಮ ಮುಂದಿನ ಹಾದಿಯಲ್ಲಿ ನಿರಂತರವಾಗಿ ಸಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ನಿಮ್ಮನ್ನು ನೀವು ವಿದ್ಯಾರ್ಥಿ ಎಂದು ಪರಿಗಣಿಸಿದರೆ, ನೀವು ನಿರಂತರ ಕಲಿಕೆಯಲ್ಲಿ ತೊಡಗುವಿರಿ ಮತ್ತು ಯಾವಾಗಲೂ ಜ್ಞಾನ ಹಾಗೂ ಸುಧಾರಣೆಯನ್ನು ಹುಡುಕುವಿರಿ. ಈ ಮನಸ್ಥಿತಿಯು ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತದೆ ಮತ್ತು ವಿಕಸನಗೊಳ್ಳುವಂತೆ ಮಾಡುತ್ತದೆ. ಇಲ್ಲದಿದ್ದರೆ, ಕಲಿಕೆಯು ಮೊಟಕುಗೊಳ್ಳುತ್ತದೆ. ಆಗ ಶ್ರೇಷ್ಠತೆಯಂತಹ ಪರಿಕಲ್ಪನೆಗಳು ಅರ್ಥಹೀನವಾಗುತ್ತವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com