
ಅಹಮದಾಬಾದ್ : ಗುಜರಾತಿನ ಅಹಮದಾಬಾದಿನಲ್ಲಿ 9 ತಿಂಗಳ ಹಸುಗೂಸಿಗೆ HMPV ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಗುಜರಾತಿನಲ್ಲಿ ವರದಿಯಾದ ನಾಲ್ಕನೇ ಪ್ರಕರಣವಾಗಿದೆ. ಎಲ್ಲಾ ಪ್ರಕರಣಗಳು ಕಳೆದೊಂದು ವಾರದಲ್ಲಿ ವರದಿಯಾಗಿವೆ.
ಜನವರಿ 6 ರಂದು ಕೆಮ್ಮು, ಶೀತ ಮತ್ತು ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಂಡು ಮಗುವಿಗೆ ಸೋಂಕು ತಗುಲಿದೆ. ನವಜಾತ ಶಿಶು ವಿದೇಶಕ್ಕೆ ಹೋಗಿದ್ದ ಅಥವಾ ಇತರ ಯಾವುದೇ ಪ್ರಯಾಣದ ಇತಿಹಾಸ ಹೊಂದಿಲ್ಲ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಹೇಳಿದೆ.
ಶುಕ್ರವಾರ ಸಬರಕಾಂತ ಜಿಲ್ಲೆಯ 8 ವರ್ಷದ ಬಾಲಕನಲ್ಲಿ HMPV ಸೋಂಕು ದೃಢಪಟ್ಟಿತ್ತು.
ಎರಡು ದಿನಗಳ ಹಿಂದೆ ಅಹಮದಾಬಾದ್ ನಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಸೋಂಕು ತಗಲಿತ್ತು. ಆಸ್ತಮಾದಿಂದ ಬಳಲುತ್ತಿರುವ ವೃದ್ಧ ರೋಗಿ ಸದಸ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 1 6 ರಂದು ರಾಜಸ್ಥಾನದಿಂದ ಬಂದ ಎರಡು ತಿಂಗಳ ಶಿಶುವಿನಲ್ಲಿ ಸೋಂಕು ದೃಢಪಟ್ಟಿತ್ತು. ಇದು ಗುಜರಾತಿನ ಮೊದಲ ಪ್ರಕರಣವಾಗಿದೆ.
ಜ್ವರ, ನೆಗಡಿ. ಕೆಮ್ಮುವಿನಂತಹ ಲಕ್ಷಣ ಕಾಣಿಸಿಕೊಂಡ ಶಿಶುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಡಿಸ್ಚಾರ್ಚ್ ಮಾಡಲಾಗಿತ್ತು. ಈ ಸೋಂಕಿತ ಶಿಶುವಿನೊಂದಿಗೆ ಗುಜರಾತಿನಲ್ಲಿ ಜನವರಿ 6 ರಿಂದ ನಾಲ್ಕು HMPV ಪಾಸಿಟಿವ್ ಕೇಸ್ ಗಳು ವರದಿಯಾಗಿದೆ.
Advertisement