ಹೋಟೆಲ್ ಧ್ವಂಸ: ತೆಲುಗಿನ ನಟರಾದ ವೆಂಕಟೇಶ್, ರಾಣಾ ದಗ್ಗುಬಾಟಿ ವಿರುದ್ಧ ಪ್ರಕರಣ ದಾಖಲು!

ದಗ್ಗುಬಾಟಿ ಕುಟುಂಬವು 2014 ರಲ್ಲಿ ಫಿಲ್ಮ್‌ನಗರದ ಪ್ಲಾಟ್‌ನಲ್ಲಿ ಭೂಮಿಯನ್ನು ಲೀಸ್ ಗೆ ನೀಡಿತ್ತು.
ನಟರಾದ ರಾಣಾ, ವೆಂಕಟೇಶ್ ದಗ್ಗುಬಾಟಿ
ನಟರಾದ ರಾಣಾ, ವೆಂಕಟೇಶ್ ದಗ್ಗುಬಾಟಿ
Updated on

ಹೈದರಾಬಾದ್: ತೆಲುಗಿನ ಜನಪ್ರಿಯ ನಟರಾದ ವೆಂಕಟೇಶ್ ದಗ್ಗುಬಾಟಿ, ಅವರ ಸೋದರಳಿಯ ಮತ್ತು ನಟ ರಾಣಾ ದಗ್ಗುಬಾಟಿಗೆ ಸಂಕಷ್ಟ ಎದುರಾಗಿದೆ.

ದಗ್ಗುಬಾಟಿ ಕುಟುಂಬದಿಂದ ಲೀಸ್ ಪಡೆದಿರುವ ಜಮೀನಿನಲ್ಲಿ ಉದ್ಯಮಿಯೊಬ್ಬರು ನಡೆಸುತ್ತಿದ್ದ ಹೋಟೆಲ್ ವೊಂದರ ಧ್ವಂಸಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಡಿ. ಸುರೇಶ್ ಸೇರಿದಂತೆ ವೆಂಕಟೇಶ್, ರಾಣಾ ದುಗ್ಗುಬಾಟಿಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಈ ಸಂಬಂಧ ಸ್ಥಳೀಯ ನ್ಯಾಯಾಲಯವೊಂದರ ನಿರ್ದೇಶನದ ನಂತರ ಕ್ರಿಮಿನಲ್ ಪಿತೂರಿ, ಮನೆ ಅತಿಕ್ರಮಣ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಜನವರಿ 11 ರಂದು ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ದೂರುದಾರ BRS ಶಾಸಕರ ಖರೀದಿಗೆ ಪ್ರಯತ್ನಿಸಿದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. 2022ರ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ಮಂಜೂರಾಗಿತ್ತು. ದಗ್ಗುಬಾಟಿ ಕುಟುಂಬವು 2014 ರಲ್ಲಿ ಫಿಲ್ಮ್‌ನಗರದ ಪ್ಲಾಟ್‌ನಲ್ಲಿ ಭೂಮಿಯನ್ನು ಲೀಸ್ ಗೆ ನೀಡಿತ್ತು. ನೋಂದಾಯಿತ ಗುತ್ತಿಗೆ ಪತ್ರ ನೀಡಿದ ನಂತರ ಅಲ್ಲಿ ಹೋಟೆಲ್ ಪ್ರಾರಂಭಿಸಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.

ಗುತ್ತಿಗೆ ಪತ್ರ (ಲೀಸ್ ಡೀಡ್) ಅವಧಿ ಇನ್ನೂ ಮುಗಿಯದ ಕಾರಣ ವೆಂಕಟೇಶ್ ಮತ್ತಿತರರು ಅಲ್ಲಿಂದ ನಮ್ಮನ್ನು ತೆರವುಗೊಳಿಸಲು ಪ್ರಯತ್ನಿಸಿದರು. ನಂತರ ಅವರ ವಿರುದ್ಧ ತಡೆಯಾಜ್ಞೆಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ಇನ್ನೂ ಬಾಕಿಯಿದೆ. ಹೀಗಿದ್ದರೂ ಆರೋಪಿಗಳು ಕೆಲವು ಸಮಾಜವಿರೋಧಿಗಳ ಜೊತೆ ಸೇರಿ ಜನವರಿ 11 ರಂದು ಹೋಟೆಲ್ ನೆಲಸಮಗೊಳಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ನಟರಾದ ರಾಣಾ, ವೆಂಕಟೇಶ್ ದಗ್ಗುಬಾಟಿ
ನಟ ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ನಿಶ್ಚಿತಾರ್ಥದ ಫೋಟೋಗಳು!

ನಂತರ ದೂರುದಾರ ನಾಂಪಲ್ಲಿ ಕೋರ್ಟ್ ಮೊರೆಹೋಗಿದ್ದು, ಪೊಲೀಸರು ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಅದರಂತೆ ಜನವರಿ 11 ರಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com