
ಮೀರತ್: ಸಾವಿನ ನಂತರ ಏನಾಗುತ್ತದೆ? ಈ ರೀತಿಯ ಕುತೂಹಲ ಅಥವಾ ಜಿಜ್ಞಾಸೆಗಳಿದ್ದರೆ, ಯಾವುದಾದರೂ ಆಧ್ಯಾತ್ಮಿಕ ಗ್ರಂಥಗಳನ್ನು ಓದಿದರೆ, ಉತ್ತರ ಸಿಗಬಹುದೇನೋ. ಆದರೆ ಇಲ್ಲೊಬ್ಬ ಯುವಕ ಅದನ್ನು ಸ್ವತಃ ಅನುಭವಿಸಲು ಹೊಗಿ ಯಡವಟ್ಟು ಮಾಡಿಕೊಂಡಿದ್ದಾನೆ.
ಈ ಘಟನೆ ನಡೆದಿರುವುದು ಮೀರಟ್ ನಲ್ಲಿ. 15 ವರ್ಷದ ಬಾಲಕನೊಬ್ಬನಿಗೆ ಸಾವಿನ ನಂತರ ಏನು? ಎಂಬ ಕುತೂಹಲ ಉಂಟಾಗಿದ್ದು, ಗೂಗಲ್, ಯೂಟ್ಯೂಬ್ ಗಳಲ್ಲಿ ಗರುಡ ಪುರಾಣದ ಬಗ್ಗೆ ಹುಡುಕಿದ್ದಾನೆ. ನಂತರ ತನಗೆ ತಾನೇ ದೇಶೀ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ!
9 ನೇ ತರಗತಿಯಲ್ಲಿರುವ ಯುವರಾಜ್ ರಾಣ ಮೃತ ಬಾಲಕನಾಗಿದ್ದು, ಗುಂಡು ಹಾರಿಸಿಕೊಳ್ಳುವ ಮುನ್ನ ಆತ ಸಾವಿನ ರೀತಿ, ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಹುಡುಕಿದ್ದಾನೆ.
ಪೊಲೀಸ್ ಅಧಿಕಾರಿಗಳ ಪ್ರಕಾರ ಆತ ಯಾವುದೇ ಪತ್ರವನ್ನೂ ಬರೆದಿಟ್ಟಿಲ್ಲ. ಕುಟುಂಬ ಸದಸ್ಯರು ಘಟನೆ ನಡೆಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪಿಸ್ತೂಲನ್ನು ಆ ಬಾಲಕನ ಕೋಣೆಯಿಂದ ಪಡೆಯಲಾಗಿದ್ದು, ಪಿಸ್ತೂಲಿನ ಮೂಲವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.
ಯುವರಾಜ್ ಕೆಟ್ಟ ಜನರ ಸಹವಾಸದಲ್ಲಿದ್ದ ಎಂಬ ಕಾರಣಕ್ಕೆ ತಾಯಿ ಮತ್ತು ಸಹೋದರ ಎಂದು ಇತ್ತೀಚೆಗೆ ಗದರಿಸಿದ್ದರಿಂದ ಆತ ಅಸಮಾಧಾನಗೊಂಡಿದ್ದ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಕುಟುಂಬ ಅವರ ಬೈಕನ್ನು ಸಹ ಮಾರಾಟ ಮಾಡಿತು, ಇದು ಆತನನ್ನು ಮತ್ತಷ್ಟು ಕೆರಳಿಸಿತ್ತು ಎಂದು ಅಧಿಕಾರಿ ಹೇಳಿದರು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement