ತಿರುಮಲ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ; ಟಿಟಿಡಿ ಹೊರಗುತ್ತಿಗೆ ಸಿಬ್ಬಂದಿ ಬಂಧನ

ಕಳೆದ ಒಂದು ವರ್ಷದಲ್ಲಿ 10 ರಿಂದ 15 ಬಾರಿ ಬಿಸ್ಕೆಟ್ ಮತ್ತು ಆಭರಣಗಳ ರೂಪದಲ್ಲಿ ರೂ. 46 ಲಕ್ಷ ಮೌಲ್ಯದ 650 ಗ್ರಾಂ ಚಿನ್ನವನ್ನು ಕದ್ದ ಆರೋಪದ ಮೇಲೆ 40 ವರ್ಷದ ವಿ. ಪೆಂಚಲಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Accused Arrested
ಬಂಧಿತ ಆರೋಪಿಯೊಂದಿಗೆ ಪೊಲೀಸರು
Updated on

ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ದೇವರಿಗೆ ಕಾಣಿಕೆಯಾಗಿ ಸ್ವೀಕರಿಸಿದ ಅರ್ಧ ಕೆಜಿಗೂ ಹೆಚ್ಚು ಚಿನ್ನವನ್ನು ಕದ್ದ ಆರೋಪದ ಮೇಲೆ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೊರಗುತ್ತಿಗೆ ನೌಕರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ 10 ರಿಂದ 15 ಬಾರಿ ಬಿಸ್ಕೆಟ್ ಮತ್ತು ಆಭರಣಗಳ ರೂಪದಲ್ಲಿ ರೂ. 46 ಲಕ್ಷ ಮೌಲ್ಯದ 650 ಗ್ರಾಂ ಚಿನ್ನವನ್ನು ಕದ್ದ ಆರೋಪದ ಮೇಲೆ 40 ವರ್ಷದ ವಿ. ಪೆಂಚಲಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೆಂಚಲಯ್ಯ ಪರಕಾಮಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ದೇವರಿಗೆ ಅರ್ಪಿಸಲಾದ ಕಾಣಿಕೆಗಳನ್ನು ವಿಂಗಡಿಸಲಾಗುತ್ತಿದೆ. ಅವರು ದೇವರಿಗೆ ನೀಡಲಾದ ಚಿನ್ನವನ್ನು ಕದಿಯುವುದರಲ್ಲಿ ತೊಡಗಿದ್ದರು ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.

ಪರಕಾಮಣಿಯಲ್ಲಿ, ನಗದು, ಚಿನ್ನಾಭರಣ ಮತ್ತಿತರ ಕಾಣಿಕೆಗಳನ್ನು ವಿಂಗಡಿಸಲಾಗುತ್ತದೆ. ನಗದನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಡಲಾಗುತ್ತದೆ. ಇತರ ಬೆಲೆ ಬಾಳುವ ವಸ್ತುಗಳನ್ನು ಲಾಕರ್ ನಲ್ಲಿ ಇಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಪರಾಕಮಣಿಯಲ್ಲಿ ಕೆಲಸ ಮಾಡುತ್ತಿದ್ದ ಪೆಂಚಲಯ್ಯ ಎಂಬುವರು ವಾಹನಕ್ಕೆ ಜಾರಿಸಿ ಚಿನ್ನದ ಬಿಸ್ಕತ್ ಕದಿಯಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

Accused Arrested
ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಮತ್ತೊಂದು ಅವಘಡ: ಲಡ್ಡು ಕೌಂಟರ್‌ಗಳಲ್ಲಿ ಬೆಂಕಿ; ಹೆದರಿ ಓಡಿದ ಭಕ್ತರು, ವಿಡಿಯೋ!

ಜ.12ರಂದು ಆರೋಪಿಯನ್ನು ಬಂಧಿಸಿ ಸೋಮವಾರ ರಿಮಾಂಡ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. BNS ಸೆಕ್ಷನ್ 316 (5) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com