Madurai: ವಿಶ್ವವಿಖ್ಯಾತ ಅವನಿಯಪುರಂ ಜಲ್ಲಿಕಟ್ಟು ವೇಳೆ ದುರಂತ; ಗೂಳಿ ತಿವಿದು 22 ವರ್ಷದ ಯುವಕ ಸಾವು, ವಿಡಿಯೋ!

ಮದುರೈ ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ನವೀನ್ ಕುಮಾರ್ ಎಂಬ ಆಟಗಾರ ಭಾಗವಹಿಸಿದ್ದರು. 9ನೇ ಸುತ್ತಿನಲ್ಲಿ ಅವರು ಮೈದಾನಕ್ಕೆ ಪ್ರವೇಶಿಸಿದಾಗ ಜಲ್ಲಿಕಟ್ಟು ಹೋರಿ ಅವರಿಗೆ ತಿವಿಯಿತು.
ಮೃತ ನವೀನ್ ಕುಮಾರ್
ಮೃತ ನವೀನ್ ಕುಮಾರ್TNIE
Updated on

ಮದುರೈನ ಅವನಿಯಪುರಂನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಎದೆಗೆ ಗೂಳಿ ತಿವಿದು ಗೂಳಿ ಹಿಡಿಯುವ ಯುವಕ ಸಾವನ್ನಪ್ಪಿದ್ದಾನೆ. ಇದು ಎಲ್ಲರನ್ನೂ ದುಃಖಿತರನ್ನಾಗಿ ಮಾಡಿದೆ.

ಮದುರೈ ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ನವೀನ್ ಕುಮಾರ್ ಎಂಬ ಆಟಗಾರ ಭಾಗವಹಿಸಿದ್ದರು. 9ನೇ ಸುತ್ತಿನಲ್ಲಿ ಅವರು ಮೈದಾನಕ್ಕೆ ಪ್ರವೇಶಿಸಿದಾಗ ಜಲ್ಲಿಕಟ್ಟು ಹೋರಿ ಅವರಿಗೆ ತಿವಿಯಿತು. ನವೀನ್ ಮೈದಾನದಲ್ಲಿ ಕುಸಿದು ಬಿದ್ದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೀನ್ ಕುಮಾರ್ ಮೃತಪಟ್ಟಿದ್ದಾರೆ. ಮಗನ ಸಾವಿನಿಂದ ಪೋಷಕರು ಕಣ್ಣೀರಿಡುವಂತಾಗಿದೆ.

ತಮಿಳು ಜನರ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ಸ್ಪರ್ಧೆಗಳನ್ನು ಪ್ರತಿ ವರ್ಷ ಪೊಂಗಲ್ ಹಬ್ಬದ ಸಮಯದಲ್ಲಿ ನಡೆಸಲಾಗುತ್ತದೆ. ಜಲ್ಲಿಕಟ್ಟು ಎಂದ ತಕ್ಷಣ ಜನರಿಗೆ ನೆನಪಿಗೆ ಬರುವ ಮೊದಲ ವಿಷಯವೆಂದರೆ ಅವನಿಯಪುರಂ, ಪಲಮೇಡು ಮತ್ತು ಅಲಂಗನಲ್ಲೂರು ಜಲ್ಲಿಕಟ್ಟು. ಮಧುರೈ ಜಿಲ್ಲೆಯ ಈ ಮೂರು ಸ್ಥಳಗಳಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಗಳು ವಿಶ್ವಪ್ರಸಿದ್ಧವಾಗಿವೆ.

ಜಲ್ಲಿಕಟ್ಟು ಸ್ಪರ್ಧೆಗಳ ಮೊದಲ ದಿನವನ್ನು ಸಾಂಪ್ರದಾಯಿಕವಾಗಿ ಅವನಿಯಪುರಂನಲ್ಲಿ ನಡೆಸಲಾಗುತ್ತದೆ. ಇದರ ಪ್ರಕಾರ. ನಿನ್ನೆಯಿಂದ ಜಲ್ಲಿಕಟ್ಟು ಸ್ಪರ್ಧೆಗಳು ನಡೆಯುತ್ತಿವೆ. ಸಚಿವ ಮೂರ್ತಿ ಈ ಸ್ಪರ್ಧೆಯನ್ನು ಉದ್ಘಾಟಿಸಿದರು. ಅವನಿಯಪುರಂ ಜಲ್ಲಿಕಟ್ಟುವಿನಲ್ಲಿ ಭಾಗವಹಿಸಲು 2,026 ಹೋರಿಗಳು ಮತ್ತು 1,735 ಹೋರಿ ಹಿಡಿಯುವವರು ಬುಕ್ ಮಾಡಿದ್ದು ಉತ್ಸವ ಸಮಿತಿಯಿಂದ ಅವರಿಗೆ ಟೋಕನ್ ನೀಡಲಾಗಿತ್ತು. ಸ್ಪರ್ಧೆಯ ವಿಜೇತರು ಮತ್ತು ಹೋರಿಗಳಿಗೆ ಕಾರು, ಬೈಕ್, ಚಿನ್ನದ ಸರ, ಚಿನ್ನದ ಉಂಗುರ, ಮೇಜು ಮತ್ತು ಹಾಸಿಗೆ ಮುಂತಾದ ಬಹುಮಾನಗಳನ್ನು ನೀಡಲಾಗುತ್ತದೆ.

ಮೃತ ನವೀನ್ ಕುಮಾರ್
ಜಲ್ಲಿಕಟ್ಟು-ತಮಿಳುನಾಡಿನ ಸಾಂಪ್ರದಾಯಿಕ ಸ್ಪರ್ಧೆಗೆ ವಿರೋಧವೇಕೆ?

ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಗ್ಯಾಲರಿ, ಕುಡಿಯುವ ನೀರಿನ ಸೌಲಭ್ಯಗಳು, ಶೌಚಾಲಯ ಸೌಲಭ್ಯಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಎಲ್ಲವೂ ಸಿದ್ಧವಾಗಿವೆ. ಆಂಬ್ಯುಲೆನ್ಸ್‌ಗಳನ್ನು ಸಹ ಸನ್ನದ್ಧವಾಗಿ ಇರಿಸಲಾಗಿದೆ. ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com