
ಪುಣೆ: ಉತ್ತರ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೆ ಸ್ಥಿರವಾಗಿದೆ ಮತ್ತು ನಮ್ಮ ಪಡೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಹಾಗೂ ಸಮರ್ಥವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಬುಧವಾರ ಹೇಳಿದ್ದಾರೆ.
ಇಂದು ಪುಣೆಯಲ್ಲಿ ನಡೆದ 77ನೇ ಸೇನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಒಸಿ) ಕದನ ವಿರಾಮವನ್ನು ಕಾಯ್ದುಕೊಳ್ಳಲಾಗಿದೆ. ಆದರೆ "ಒಳ ನುಸುಳುವಿಕೆ ಪ್ರಯತ್ನಗಳು ಮುಂದುವರೆದಿವೆ" ಎಂದರು.
ಉತ್ತರ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೆ ಸ್ಥಿರವಾಗಿದೆ ಎಂದು ಅವರು ಹೇಳಿದರು.
"ನಮ್ಮ ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಸಮರ್ಥವಾಗಿದೆ" ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ಉತ್ತರ ಗಡಿಯಲ್ಲಿ ಆಧುನಿಕ ಉಪಕರಣಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಗಮನ ನೀಡಲಾಗಿದೆ. ಭಾರತೀಯ ಸೇನೆಯನ್ನು ಆಧುನಿಕ, ಚುರುಕಾದ, ಹೊಂದಿಕೊಳ್ಳುವ, ತಂತ್ರಜ್ಞಾನ-ಸಕ್ರಿಯಗೊಳಿಸಿದ ಪಡೆಯನ್ನಾಗಿ ಮಾಡುವ ಹಾದಿಯಲ್ಲಿ ನಾವು ಮುಂದುವರಿಯುತ್ತೇವೆ ಎಂದು ಅವರು ಪ್ರತಿಪಾದಿಸಿದರು.
ಪುಣೆಯಲ್ಲಿ ನಡೆಯುತ್ತಿರುವ 77ನೇ ಸೇನಾ ದಿನಾಚರಣೆಯು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಮರಾಠರ ಆಳ್ವಿಕೆಯಿಂದಲೂ ಶೌರ್ಯದ ಸ್ಥಳವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದರು
ಪುಣೆಯಲ್ಲಿ ಮೊದಲ ಬಾರಿಗೆ ಸೇನಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಸೇನಾ ದಿನದ ಪರೇಡ್(ADP) ಅನ್ನು ಪುಣೆಯ ಬಾಂಬೆ ಎಂಜಿನಿಯರ್ಸ್ ಗ್ರೂಪ್(BEG) ಮತ್ತು ಸೆಂಟರ್ ನಲ್ಲಿ ನಡೆಯಿತು.
Advertisement