
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಎಎಪಿಗೆ ತೀವ್ರ ಹಿನ್ನಡೆಯಾಗಿದ್ದು, ಆಡಳಿತರೂಢ ಪಕ್ಷದ ಇಬ್ಬರು ಕೌನ್ಸಿಲರ್‌ಗಳಾದ ರವೀಂದರ್ ಸೋಲಂಕಿ ಮತ್ತು ನರೇಂದರ್ ಗಿರ್ಸಾ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು.
ಬಾಪ್ರೋಲಾ ವಾರ್ಡ್‌ನ ಎಂಸಿಡಿ ಕೌನ್ಸಿಲರ್ ಸೋಲಂಕಿ ಮತ್ತು ಮಂಗಳಾಪುರಿ ವಾರ್ಡ್ ಕೌನ್ಸಿಲರ್ ಗಿರ್ಸಾ ಅವರು, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಮತ್ತು ಪಶ್ಚಿಮ ದೆಹಲಿ ಸಂಸದ ಕಮಲ್‌ಜೀತ್ ಸೆಹ್ರಾವತ್ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷ ಸೇರಿದರು.
ಈ ಎರಡು ವಾರ್ಡ್‌ಗಳು ಸೆಹ್ರಾವತ್ ಅವರ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಈ ಇಬ್ಬರು ಕೌನ್ಸಿಲರ್‌ಗಳು ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದು, ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಮತ್ತು ನೀತಿಗಳಿಂದ ಭ್ರಮನಿರಸನಗೊಂಡಿದ್ದಾರೆ ಎಂದು ಸೆಹ್ರಾವತ್ ಹೇಳಿದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement