
ಮುಂಬೈ: ದೇಶದ ವಾಣಿಜ್ಯ ನಗರ ಮುಂಬೈಯ 12ನೇ ಮಹಡಿಯಲ್ಲಿರುವ ಮನೆಗೆ ನುಗ್ಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿದು ಎರಡು ದಿನವಾದರೂ ಆಗಂತುಕ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ತೆಗಾಗಿ 30 ಕ್ಕೂ ಹೆಚ್ಚು ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿವೆ. ಈ ನಡುವೆ ಕ್ರೂರ ದಾಳಿಗೆ ಭೂಗತ ಜಗತ್ತಿನ ನಂಟನ್ನು ಮಹಾರಾಷ್ಟ್ರದ ಮಂತ್ರಿಯೊಬ್ಬರು ತಳ್ಳಿ ಹಾಕಿದ್ದಾರೆ.
ಇನ್ನೂ ದಾಳಿ ಕುರಿತು ಸೈಫ್ ಅಲಿಖಾನ್ ಅವರ ಪತ್ನಿ ಕರೀನಾ ಕಪೂರ್ ಅವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸೈಪ್ ಅಲಿ ಖಾನ್ ಜೊತೆಗಿನ ಗಲಾಟೆ ವೇಳೆ ಆಗಂತುಕ ಆಕ್ರಮಣಕಾರಿಯಾಗಿ ವರ್ತಿಸಿದ್ದ. ಆದರೆ ತೆರೆದ ಜಾಗದಲ್ಲಿ ಇರಿಸಲಾದ ಆಭರಣಗಳನ್ನು ಮುಟ್ಟಲಿಲ್ಲ ಎಂದು ಕರೀನಾ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಗುರು ಶರಣ್ ಕಟ್ಟಡದಲ್ಲಿರುವ 12ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದವ ಸೈಪ್ ಅಲಿ ಖಾನ್ (54) ಮೇಲೆ ದಾಳಿ ನಡೆಸಿದ್ದಾನೆ. ನಟನ ಕುತ್ತಿಗೆ ಸೇರಿದಂತೆ ಇತರ ಕಡೆಗಳಲ್ಲಿ ಗಾಯವಾಗಿದ್ದು, ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಿ, ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಹಂತಕ ಯಾವುದೇ ಕ್ರಿಮಿನಲ್ ಗ್ಯಾಂಗ್ ನೊಂದಿಗೆ ಸಂಪರ್ಕ ಹೊಂದಿದಂತೆ ಕಂಡುಬರುತ್ತಿಲ್ಲ. ಬಹುಶ: ಯಾರ ಮನೆ ಎಂದು ತಿಳಿಯದೇ ಸೈಪ್ ಅಲಿಖಾನ್ ಮನೆಗೆ ನುಗ್ಗಿರಬಹುದು. ಆತನಕ್ಕಾಗಿ ಬಂಧನಕ್ಕಾಗಿ 30 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಆಗಂತುಕನ ರೀತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಪೆಂಟರ್ ಒಬ್ಬರನ್ನು ಬಾಂದ್ರಾ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ, ಬಳಿಕ ಬಿಡುಗಡೆ ಮಾಡಲಾಗಿದೆ. ಆ ವ್ಯಕ್ತಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಇಲ್ಲಿಯವರೆಗೂ ಯಾವ ವ್ಯಕ್ತಿಯನ್ನು ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
Advertisement