Evacuation operation
ದ್ವಾರಕದಲ್ಲಿ ದರ್ಗಾ ಪ್ರದೇಶದಲ್ಲಿ ತೆರವು ಕಾರ್ಯಾಚರಣೆonline desk

ಸ್ಫೋಟಕಗಳ ಸಾಗಣೆ: ದ್ವಾರಕಾದಲ್ಲಿನ ದರ್ಗಾ ಪ್ರದೇಶಗಳ ಧ್ವಂಸಕ್ಕೆ ಗುಜರಾತ್ ಸರ್ಕಾರ ಮುಂದು!

ರಾಜ್ಯ ಸರ್ಕಾರ ಯಥಾಸ್ಥಿತಿ ಆದೇಶವನ್ನು ತಕ್ಷಣವೇ ರದ್ದುಗೊಳಿಸುವಂತೆ ಹೈಕೋರ್ಟ್ ನ್ನು ಕೋರಿದೆ, ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ತಪ್ಪು ಕಲ್ಪನೆಯ ಸಂಗತಿಗಳನ್ನು ಆಧರಿಸಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
Published on

ದ್ವಾರಕಾ: ದ್ವಾರಕಾದಲ್ಲಿರುವ ಧಾರ್ಮಿಕ ರಚನೆಗಳೆಂದು ಹೇಳಲಾಗುವ ಕೆಲವು ಆಸ್ತಿಗಳನ್ನು ರಕ್ಷಿಸುವ ಯಥಾಸ್ಥಿತಿ ಆದೇಶದ ಮುಂದುವರಿಕೆಯನ್ನು ಗುಜರಾತ್ ಸರ್ಕಾರ ಸೋಮವಾರ ಹೈಕೋರ್ಟ್‌ನಲ್ಲಿ ವಿರೋಧಿಸಿದೆ ಮತ್ತು ದ್ವಾರಕಾದಲ್ಲಿನ ದರ್ಗಾಗಳನ್ನು ಸ್ಫೋಟಕಗಳ ಸಾಗಣೆಗೆ ಬಳಸಲಾಗುತ್ತಿದೆ ಎಂದು ವಾದಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ರಾಜ್ಯ ಸರ್ಕಾರ ಯಥಾಸ್ಥಿತಿ ಆದೇಶವನ್ನು ತಕ್ಷಣವೇ ರದ್ದುಗೊಳಿಸುವಂತೆ ಹೈಕೋರ್ಟ್ ನ್ನು ಕೋರಿದೆ, ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ತಪ್ಪು ಕಲ್ಪನೆಯ ಸಂಗತಿಗಳನ್ನು ಆಧರಿಸಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

ನ್ಯಾಯಾಧೀಶ ಮೌನಾ ಎಂ ಭಟ್ ಅವರ ಮುಂದೆ ರಾಜ್ಯದ ಪರವಾಗಿ ಹಾಜರಾದ ವಕೀಲ ಜಿ.ಎಚ್. ​​ವಿರ್ಕ್, ಯಥಾಸ್ಥಿತಿಗೆ ಒಳಪಡುತ್ತಿರುವ ರಚನೆಗಳನ್ನು "ಮಾದಕವಸ್ತು ಕಳ್ಳಸಾಗಣೆ, ಸ್ಫೋಟಕಗಳ ಸಾಗಣೆಗಾಗಿ" ಬಳಸಲಾಗುತ್ತಿದೆ ಮತ್ತು "ಈ ಪ್ರದೇಶದಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ ಮತ್ತು ಕೆಲವು ದರ್ಗಾದ ಮುಜಾಫರ್ ಸ್ಫೋಟಕಗಳನ್ನು ಸಂಗ್ರಹಿಸಲು ಬಳಸುತ್ತಿರುವುದು ಕಂಡುಬಂದಿದೆ" ಎಂದು ವಾದಿಸಿದೆ.

ಕಬರಸ್ತಾನ್ ನ್ನು ಯಾರೂ ಅತಿಕ್ರಮಿಸಬಾರದು, ಗೋಡೆಯಿಂದ ರಕ್ಷಿಸಬೇಕೆಂದು ನ್ಯಾಯಾಲಯವು ಸೂಚಿಸಿದಾಗ ಪ್ರತಿಕ್ರಿಯೆ ನೀಡಿದ "ವಿರ್ಕ್ ನಿರ್ದಿಷ್ಟ ರಚನೆಗಳ ಸುತ್ತಲಿನ ಗೋಡೆ ಮತ್ತು ಗೇಟೆಡ್ ಸಮುದಾಯವನ್ನು ಪ್ರಶ್ನಿಸಿದರು, ಈ ರಚನೆಗಳಿಗೆ ಸಂಬಂಧಿಸಿದಂತೆ 14 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಈ ರಚನೆಗಳ ಒಳಗೆ "ಅಕ್ರಮ ಚಟುವಟಿಕೆಗಳು" ಎಂದು ದಾಖಲಿಸಲಾಗಿದೆ ಎಂದು ಗಮನ ಸೆಳೆದರು.

ಯಥಾಸ್ಥಿ ಆದೇಶಕ್ಕೆ ಒಳಪಟ್ಟ ರಚನೆಯನ್ನು ಹೊರತುಪಡಿಸಿ ಉಳಿದ ಅತಿಕ್ರಮಣಗಳು ಧ್ವಂಸ!

ನ್ಯಾಯಾಲಯದಿಂದ ಯಥಾಸ್ಥಿ ಆದೇಶಕ್ಕೆ ಒಳಪಟ್ಟ ರಚನೆಯನ್ನು ಹೊರತುಪಡಿಸಿ ಉಳಿದೆಲ್ಲ ಅತಿಕ್ರಮಣಗಳನ್ನು ರಾಜ್ಯ ಸರ್ಕಾರ ತೆಗೆದುಹಾಕಿದೆ ಎಂದು ಜಿ.ಎಚ್. ​​ವಿರ್ಕ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅವರು, ಸಮಕಾಲೀನ ದಾಖಲೆಗಳ ಆಧಾರದ ಮೇಲೆ ರಾಜ್ಯ ಸರ್ಕಾರ ನೀಡಿದ ಉತ್ತರದಲ್ಲಿ ಸೂಚಿಸಿರುವ ರಿಟ್ ಅರ್ಜಿಯಲ್ಲಿ ವಸ್ತುನಿಷ್ಠ ಪ್ರಾತಿನಿಧ್ಯಗಳಿವೆ ಮತ್ತು ನ್ಯಾಯಾಲಯವನ್ನು ವಂಚಿಸುವ ಪ್ರಯತ್ನಗಳನ್ನು ತೋರಿಸಿದೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು.

ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ವಕ್ಫ್ ಕಾಯ್ದೆ ಮತ್ತು ಸಾರ್ವಜನಿಕ ಟ್ರಸ್ಟ್ ಕಾಯ್ದೆ (ಪಿಟಿಎ) ಅಡಿಯಲ್ಲಿ ಆಸ್ತಿಯ ಸ್ವರೂಪವನ್ನು ಸಹ ಪರಿಶೀಲಿಸಿತು.

ಪಿಟಿಆರ್ (ಪಬ್ಲಿಕ್ ಟ್ರಸ್ಟ್ ರಿಜಿಸ್ಟರ್) ದಾಖಲೆಯಲ್ಲಿ ಪ್ರಸ್ತುತಪಡಿಸಿದ ಆಸ್ತಿ ವಕ್ಫ್ ಆಸ್ತಿ ಅಲ್ಲ ಎಂದು ಸೂಚಿಸುತ್ತದೆ ಎಂದು ವಿರ್ಕ್ ವಾದಿಸಿದರು, ಇದರಲ್ಲಿ ಅರ್ಜಿದಾರರು ಪ್ರಶ್ನೆಯಲ್ಲಿರುವ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪ್ರತಿಪಾದಿಸಿದ್ದಾರೆ.

"ನೀವು ಇಲ್ಲಿಯವರೆಗೆ ಎಲ್ಲಿದ್ದಿರಿ?. ನಿರ್ಮಾಣವು ಇತ್ತೀಚೆಗೆ ಆಗಿಲ್ಲ" ಎಂದು ನ್ಯಾಯಾಲಯ ಕೇಳಿದಾಗ, ಸರ್ಕಾರಿ ವಕೀಲರು ಇದನ್ನು ಕಳೆದ ಐದು ವರ್ಷಗಳಲ್ಲಿ ಮಾಡಲಾಗಿದೆ ಮತ್ತು ರಾಜ್ಯವು ಈಗ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡರು.

Evacuation operation
ದ್ವಾರಕ ಪೂಜೆ ಪ್ರಧಾನಿ ಮೋದಿಯ ಮತ್ತೊಂದು ನಾಟಕ: ರಾಹುಲ್ ಗಾಂಧಿ ಲೇವಡಿ

ಒಂದು ಅರ್ಜಿಯಲ್ಲಿ, ರಚನೆಯನ್ನು ಗೌಚರ್ ಭೂಮಿ (ಗೋಮಾಳ) ಮತ್ತು ಇನ್ನೊಂದು ಅರ್ಜಿಯಲ್ಲಿ, ಇದು ಕಬ್ರಿಸ್ತಾನ್ (ಸ್ಮಶಾನ) ಎಂದು ನಮೂದಾಗಿದೆ, ಕಬ್ರಿಸ್ತಾನ್‌ನಲ್ಲಿ ಒಬ್ಬರು ಹೇಗೆ ಬೃಹತ್ ಅದ್ದೂರಿ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ವಕೀಲರು ಉಪಗ್ರಹ ಚಿತ್ರಗಳನ್ನು ಇಂಟಲಿಜೆನ್ಸ್ ಬ್ಯೂರೊ ವರದಿಗಳನ್ನು ಸಲ್ಲಿಸಿದರು.

ದ್ವಾರಕಾದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಲವಾರು ಮಸೀದಿಗಳು ಮತ್ತು ಮಜಾರ್‌ಗಳು ಸೇರಿದಂತೆ 350 ನಿರ್ಮಾಣಗಳನ್ನು "ಅಕ್ರಮ ಅತಿಕ್ರಮಣ" ಎಂದು ಉಲ್ಲೇಖಿಸಿ ಕೆಡವಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com