
ಮುಂಬೈ: ಜನವರಿ 16 ರಂದು ತನ್ನ ಮನೆಯಲ್ಲಿ ಚಾಕು ಇರಿತಕ್ಕೊಳಗಾದ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರನ್ನು ಆಟೋ ಚಾಲಕ ಭಜನ್ ಸಿಂಗ್ ರಾಣಾ ತನ್ನ ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಪ್ರಾಣ ಕಾಪಾಡಿದ್ದರು. ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಾಣಾ ಅವರನ್ನು ಭೇಟಿಯಾಗಿ, ಅವರನ್ನು ತಬ್ಬಿಕೊಂಡು ಸೈಫ್ ಅಲಿಖಾನ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತ ಫೋಟೋಗಳು ವೈರಲ್ ಆಗಿದ್ದು, ರಾಣಾ ಪಕ್ಕ ಮುಗುಳು ನಗುತ್ತಾ ಸೈಫ್ ಅಲಿಖಾನ್ ನಿಂತಿದ್ದಾರೆ. ರಾಣಾ ಕ್ಯಾಮರಾಗೆ ಫೋಸ್ ಕೊಟ್ಟಾಗ ಅವರ ಬೆನ್ನ ಭುಜದ ಮೇಲೆ ಕೈ ಹಾಕಿದ್ದಾರೆ.
ಹಲವು ಬಾರಿ ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ಲೀಲಾವತಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಫ್ ಅಲಿಖಾನ್ ಆರು ದಿನಗಳ ಬಳಿಕ ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದರು. ಅವರಿಗೆ ಶಸ್ತ್ರ ಚಿಕಿತ್ಸೆ ಕೂಡಾ ಮಾಡಲಾಗಿತ್ತು.
ಸೈಫ್ ಅಲಿಖಾನ್ ಭೇಟಿ ಬಳಿಕ ಮಾತನಾಡಿದ ರಾಣಾ, ಮಧ್ಯಾಹ್ನ 3-30ಕ್ಕೆ ಭೇಟಿಯಾಗಲು ತಿಳಿಸಲಾಗಿತ್ತು. ಆದರೆ, ನಾಲ್ಕೈದು ನಿಮಿಷ ತಡವಾಗಿ ಹೋದೆ. ನಂತರ ಸೈಫ್ ಅಲಿಖಾನ್ ಭೇಟಿಯಾಯಿತು. ಅವರ ತಾಯಿ, ಮಕ್ಕಳು ಅಲ್ಲಿದ್ದರು. ಎಲ್ಲರೂ ತುಂಬಾ ಗೌರವದಿಂದ ಮಾತನಾಡಿಸಿದರು. ಅದರಲ್ಲಿ ಏನೂ ವಿಶೇಷ ಇರಲಿಲ್ಲ. ಅದೊಂದು ಸಹಜ ಭೇಟಿಯಾಗಿತ್ತು. ಬೇಗ ಹುಷಾರಾಗಿ ಅಂತಾ ಹೇಳಿದೆ. ಈ ಹಿಂದೆ ಕೂಡಾ ನಿಮಗಾಗಿ ಅದೇ ಪ್ರಾರ್ಥಿಸಿದ್ದೆ. ಮುಂದೆಯೂ ಪ್ರಾರ್ಥಿಸುವುದಾಗಿ ಹೇಳಿದ್ದಾಗಿ ತಿಳಿಸಿದರು.
Advertisement