Mathura ಶಾಹಿ ಈದ್ಗಾ ಮಸೀದಿ ಸಂಕೀರ್ಣದ ನ್ಯಾಯಾಲಯದ ಮೇಲ್ವಿಚಾರಣೆ ಸಮೀಕ್ಷೆ: ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಸ್ತರಣೆ

ಕಳೆದ ವರ್ಷ ಜನವರಿ 16 ರಂದು, ಸುಪ್ರೀಂ ಕೋರ್ಟ್, ಡಿಸೆಂಬರ್ 14, 2023 ರಂದು ಹೈಕೋರ್ಟ್‌ನ ಆದೇಶದ ಕಾರ್ಯಾಚರಣೆಗೆ ತಡೆ ನೀಡಿತ್ತು.
A file picture of the Shahi Idgah mosque
ಶಾಹಿ ಈದ್ಗಾ ಮಸೀದಿ
Updated on

ನವದೆಹಲಿ: ಮಥುರಾದ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶದ ಮೇಲಿನ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಿಸಿದೆ.

ಹಿಂದೂಗಳ ಮಹತ್ವದ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳವಾದ ಕೃಷ್ಣ ಜನ್ಮಭೂಮಿ ದೇವಾಲಯದ ಪಕ್ಕದಲ್ಲಿ ಈ ಮಸೀದಿಯಿದೆ. ಏಪ್ರಿಲ್ 1 ರಿಂದ ಆ ವಾರದಲ್ಲಿ ಮಸೀದಿ ಸಂಕೀರ್ಣದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿರುವ ಸಮೀಕ್ಷೆಯ ವಿರುದ್ಧ ಟ್ರಸ್ಟ್ ಶಾಹಿ ಮಸೀದಿ ಈದ್ಗಾದ ನಿರ್ವಹಣಾ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಈಗ ಮೂರು ಪ್ರಕರಣಗಳು ಬಾಕಿ ಉಳಿದಿವೆ. ಅವು ನ್ಯಾಯಾಲಯದೊಳಗಿನ ಮೇಲ್ಮನವಿಯ ವಿಷಯವಾಗಿದೆ (ಹಿಂದೂ ದಾವೆದಾರರು ಸಲ್ಲಿಸಿದ ಮೊಕದ್ದಮೆಗಳ ಕ್ರೋಢೀಕರಣದ ವಿರುದ್ಧ), ಇನ್ನೊಂದು ಕಾಯ್ದೆ (ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991 ರ ಸವಾಲು) ಎಂದು ಸಿಜೆಐ ಹೇಳಿದರು.

ಈ ಮಧ್ಯೆ, ಶಾಹಿ ಈದ್ಗಾ ಮಸೀದಿ ಸಂಕೀರ್ಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆದ ಸಮೀಕ್ಷೆಗೆ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್‌ನ ಮಧ್ಯಂತರ ಆದೇಶವು ಮುಂದುವರಿಯಲಿದೆ ಎಂದು ಪೀಠ ಹೇಳಿದೆ.

ಕಳೆದ ವರ್ಷ ಜನವರಿ 16 ರಂದು, ಸುಪ್ರೀಂ ಕೋರ್ಟ್, ಡಿಸೆಂಬರ್ 14, 2023 ರಂದು ಹೈಕೋರ್ಟ್‌ನ ಆದೇಶದ ಕಾರ್ಯಾಚರಣೆಗೆ ತಡೆ ನೀಡಿತ್ತು. ಶಾಹಿ ಈದ್ಗಾ ಮಸೀದಿ ಸಂಕೀರ್ಣದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿತ್ತು. ಅದರ ಮೇಲ್ವಿಚಾರಣೆಗೆ ನ್ಯಾಯಾಲಯ ಆಯುಕ್ತರ ನೇಮಕಕ್ಕೆ ಒಪ್ಪಿಕೊಂಡಿತ್ತು.

ಹಿಂದೂ ಧರ್ಮದ ಕಡೆಯವರು ಸಂಕೀರ್ಣದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು ಎಂದು ಸೂಚಿಸುವ ಫಲಕಗಳಿವೆ ಎಂದು ವಾದಿಸುತ್ತಿದ್ದಾರೆ. ಹಿಂದೂಗಳ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ವಿಷ್ಣು ಶಂಕರ್ ಜೈನ್, ಡಿಸೆಂಬರ್ 14, 2023 ರಂದು ಹೈಕೋರ್ಟ್‌ನ ಆದೇಶದ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿದ ಮೇಲ್ಮನವಿ ಮತ್ತು ಈ ವಿಷಯದಲ್ಲಿ ಸಂಬಂಧಿಸಿದ ಆದೇಶಗಳು ಅನಪೇಕ್ಷಿತವಾಗಿವೆ. ಹೈಕೋರ್ಟ್ ನಂತರ ತನ್ನ ಆದೇಶವನ್ನು ಪ್ರಕಟಿಸಿರುವುದರಿಂದ ಈ ಎಲ್ಲಾ ಅರ್ಜಿಗಳು ನಿಷ್ಪ್ರಯೋಜಕವಾಗಿವೆ" ಎಂದು ಹೇಳಿದರು.

A file picture of the Shahi Idgah mosque
ಮುಸ್ಲಿಮರು ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು: ಪುರಾತತ್ವಶಾಸ್ತ್ರಜ್ಞ ಕೆಕೆ ಮುಹಮ್ಮದ್ (ಸಂದರ್ಶನ)

ಮಥುರಾದಲ್ಲಿ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ 18 ಪ್ರಕರಣಗಳ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌ನ ನಂತರದ ಆದೇಶವನ್ನು ವಕೀಲ ಜೈನ್ ಉಲ್ಲೇಖಿಸಿದರು ಮತ್ತು ಮಸೀದಿಯ ಧಾರ್ಮಿಕ ಸ್ವರೂಪವನ್ನು ನಿರ್ಧರಿಸಬೇಕಾಗಿದೆ ಎಂದು ತೀರ್ಪು ನೀಡಿದರು.

ಕೃಷ್ಣ ಜನ್ಮಭೂಮಿ ದೇವಸ್ಥಾನ ಮತ್ತು ಪಕ್ಕದ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ದಾವೆದಾರರು ಸಲ್ಲಿಸಿದ ಮೊಕದ್ದಮೆಗಳು 1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯನ್ನು ಉಲ್ಲಂಘಿಸುತ್ತವೆ ಮತ್ತು ಆದ್ದರಿಂದ ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಮುಸ್ಲಿಂ ಕಡೆಯ ವಾದವನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಮಥುರಾದಲ್ಲಿ, ಶಾಹಿ ಈದ್ಗಾ ಮಸೀದಿಯನ್ನು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ನ 13.37 ಎಕರೆ ಭೂಮಿಯ ಒಂದು ಭಾಗದಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿ, ಅದನ್ನು ಸ್ಥಳಾಂತರಿಸಲು ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗ (III) ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಯಿತು.

ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದದಲ್ಲಿ ಮಾಡಿದಂತೆ ಮೂಲ ವಿಚಾರಣೆಯನ್ನು ನಡೆಸುವಂತೆ ಹಿಂದೂ ಸಮಿತಿ ಕಡೆಯವರು ಹೈಕೋರ್ಟ್ ನ್ನು ಕೋರಿದ್ದರು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಬೇಕೆಂಬ ಮನವಿಯನ್ನು ಅನುಮತಿಸುವಾಗ, ಸಮೀಕ್ಷೆ ಸಮಯದಲ್ಲಿ ಯಾವುದೇ ಹಾನಿ ಮಾಡಬಾರದು ಎಂದು ಹೇಳಿತ್ತು, ಇದನ್ನು ಮೂವರು ಸದಸ್ಯರ ವಕೀಲರ ಆಯೋಗವು ಮೇಲ್ವಿಚಾರಣೆ ಮಾಡಬಹುದು ಎಂದು ಸೂಚಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com