
ಪ್ರಯಾಗರಾಜ: ಶತಮಾನಗಳ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನೆರವೇರುತ್ತಿದ್ದು ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವಿದೇಶಗಳಿಂದಲೂ ಜನರು ಬರುತ್ತಿದ್ದಾರೆ.
ಮಹಾಕುಂಭ ಆರಂಭವಾದಾಗಿನಿಂದ ಇಲ್ಲಿಯವರೆಗೆ 11 ದಿನಗಳಲ್ಲಿ, 97.3 ಮಿಲಿಯನ್‌ಗಿಂತಲೂ(9,73,00,000) ಹೆಚ್ಚು ಭಕ್ತರು, ಕಲ್ಪವಾಸಿಗಳು ಮತ್ತು ವಿವಿಧ ಮಠಾಧೀಶರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಉತ್ಸವದ 11 ನೇ ದಿನದ ಇಂದಿನ ಅಂತ್ಯದ ವೇಳೆಗೆ ಒಟ್ಟು ಭಾಗವಹಿಸುವವರ ಸಂಖ್ಯೆ 100 ಮಿಲಿಯನ್ ಗಡಿಯನ್ನು ತಲುಪುವ ನಿರೀಕ್ಷೆಯಿದೆ.
ಉತ್ತರ ಪ್ರದೇಶ ಸರ್ಕಾರದ ಮಾಹಿತಿಯ ಪ್ರಕಾರ, ಇಂದು ಒಂದೇ ದಿನ 16.98 ಲಕ್ಷಕ್ಕೂ ಹೆಚ್ಚು ಜನರು ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಈ ಬಾರಿ ಮಹಾಕುಂಭದಲ್ಲಿ 45 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ.
Advertisement