ಪುದುಚೆರಿ: ಶಾಲೆಗೆ ಬ್ಯಾಗ್ ನಲ್ಲಿ ಬಾಂಬ್ ತುಂಬಿಕೊಂಡು ಬಂದು ಸಹಪಾಠಿಗೆ ಚಾಕುವಿನಿಂದ ಹಲ್ಲೆ ಮಾಡಿದ ಬಾಲಕ!

ಸಹಪಾಠಿ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯ ಬ್ಯಾಗ್ ನ್ನು ಹುಡುಕಿದಾಗ ಆರು ದೇಶೀಯ ನಿರ್ಮಿತ ಬಾಂಬ್‌ಗಳು ಪತ್ತೆಯಾಗಿವೆ.
ಪುದುಚೆರಿ: ಶಾಲೆಗೆ ಬ್ಯಾಗ್ ನಲ್ಲಿ ಬಾಂಬ್ ತುಂಬಿಕೊಂಡು ಬಂದು ಸಹಪಾಠಿಗೆ ಚಾಕುವಿನಿಂದ ಹಲ್ಲೆ ಮಾಡಿದ ಬಾಲಕ!
Updated on

ಪುದುಚೇರಿ: ಆಘಾತಕಾರಿ ಘಟನೆಯೊಂದರಲ್ಲಿ ಪುದುಚೆರಿಯ ರೆಡ್ಡಿಯಾರ್‌ಪಾಳ್ಯಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಇರಿದ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ನಿಂದಿಸಿದ್ದಾನೆಂದು ಸಹಪಾಠಿ ಮೇಲೆ ಆಕ್ರೋಶದಿಂದ ಶಾಲೆಗೆ ಚಾಕು ತೆಗೆದುಕೊಂಡು ಹೋಗಿ ಅವನ ಜೊತೆ ವಾದ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ನಂತರ ತಪಾಸಣೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ದೇಶೀಯ ನಿರ್ಮಿತ ಬಾಂಬ್‌ಗಳು ಸಹ ಪತ್ತೆಯಾಗಿವೆ.

ಚಾಕುವಿನ ಇರಿತಕ್ಕೆ ಒಳಗಾದ ಬಾಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ಲೆ ಮಾಡಿದ ಸಹಪಾಠಿಗೆ ಕಳೆದ ಕೆಲ ಸಮಯಗಳಿಂದ ಅವಮಾನವಾಗುವಂತಹ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ. ಇದರಿಂದ ಬಾಲಕ ಅವಮಾನಕ್ಕೊಳಗಾಗಿದ್ದ. ನಿನ್ನೆ ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಐಡಿ ರಚಿಸಿದವನ ಬಳಿ ಬಂದು ಆತನಿಗೆ ಬೈದಿದ್ದಾನೆ. ವಾದ-ವಿವಾದ ಬೆಳೆಯುತ್ತಿದ್ದಾಗ ಬೇರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಬಾಲಕ ಸಿಟ್ಟಿನಿಂದ ಚಾಕುವಿನಿಂದ ಇರಿದಿದ್ದಾನೆ. ಆಗ ಶಿಕ್ಷಕರು ತರಗತಿಗೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗಾಯಗೊಂಡ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಸಹಪಾಠಿ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯ ಬ್ಯಾಗ್ ನ್ನು ಹುಡುಕಿದಾಗ ಆರು ದೇಶೀಯ ನಿರ್ಮಿತ ಬಾಂಬ್‌ಗಳು ಪತ್ತೆಯಾಗಿವೆ. ಶಾಲಾ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು, ಅವರು ಸ್ಫೋಟಕಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿಯನ್ನು ವಶಕ್ಕೆ ಪಡೆದರು. ಆತನನ್ನು ಬಾಲ ನ್ಯಾಯ ಮಂಡಳಿಗೆ ಉಲ್ಲೇಖಿಸಲಾಗಿದೆ.

ಪುದುಚೆರಿ: ಶಾಲೆಗೆ ಬ್ಯಾಗ್ ನಲ್ಲಿ ಬಾಂಬ್ ತುಂಬಿಕೊಂಡು ಬಂದು ಸಹಪಾಠಿಗೆ ಚಾಕುವಿನಿಂದ ಹಲ್ಲೆ ಮಾಡಿದ ಬಾಲಕ!
ಸಾವಿನ ನಂತರ ಏನು? YouTube ಸರ್ಚ್; ಕುತೂಹಲಕ್ಕೆ ಗುಂಡು ಹಾರಿಸಿಕೊಂಡು 15 ವರ್ಷದ ಬಾಲಕ ಸಾವು!

ಆರೋಪಿಯು ಪ್ರತೀಕಾರದ ಯೋಜನೆಯ ಭಾಗವಾಗಿ ಬಾಂಬ್‌ಗಳನ್ನು ಸಿದ್ಧಪಡಿಸಿದ್ದಾಗಿ ಮತ್ತು ಚಾಕುವನ್ನು ಖರೀದಿಸಿ ಶಾಲೆಗೆ ತಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 118 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯ ಪೋಷಕರು ಯಾವುದೇ ದೂರು ದಾಖಲಿಸಿಲ್ಲ.

ಶಾಲಾ ಶಿಕ್ಷಣ ಇಲಾಖೆಯು ಆಡಳಿತಾತ್ಮಕ ಲೋಪ ಮತ್ತು ಖಾಸಗಿ ಶಾಲೆಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಪೀಪಲ್ಸ್ ರೈಟ್ಸ್ ಫೆಡರೇಶನ್ ಖಂಡಿಸಿದೆ, ಇಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗಿಂತ ತಮ್ಮ ಲಾಭಕ್ಕೆ ಆದ್ಯತೆ ನೀಡುತ್ತವೆ. ವಿದ್ಯಾರ್ಥಿಗಳಲ್ಲಿ ಹಿಂಸಾತ್ಮಕ ಪ್ರವೃತ್ತಿಗಳ ಹೆಚ್ಚಳವನ್ನು ತಡೆಯಬಹುದಾದ ನೈತಿಕ ಶಿಕ್ಷಣ, ಕ್ರೀಡೆ ಮತ್ತು ಪಠ್ಯೇತರ ಕಾರ್ಯಕ್ರಮಗಳು ಶಾಲೆಗಳಲ್ಲಿ ಮರೆಯಾಗುತ್ತಿವೆ ಎಂದು ಫೆಡರೇಶನ್‌ನ ಕಾರ್ಯದರ್ಶಿ ಜಿ. ಸುಗುಮಾರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com