ಮಧ್ಯ ಪ್ರದೇಶ: RSS ಸೇರುವಂತೆ ಕಿರುಕುಳ; ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕ!

ಸಿಧಿ ಜಿಲ್ಲೆಯ ಮಜೌಲಿಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರಾಗಿರುವ ಅರ್ಜಿದಾರರು, RSS ಸೇರುವಂತೆ ನನ್ನನ್ನು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
Casual Images
ಸಾಂದರ್ಭಿಕ ಚಿತ್ರ
Updated on

ಭೋಪಾಲ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರುವಂತೆ ಸರ್ಕಾರಿ ಉಪನ್ಯಾಸಕರೊಬ್ಬರಿಗೆ ಸಂಬಂಧಿತ ಆಡಳಿತ ಮಂಡಳಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರವು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ ನಂತರ ಉಪನ್ಯಾಸಕರು ಸಲ್ಲಿಸಿದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.

ಸಿಧಿ ಜಿಲ್ಲೆಯ ಮಜೌಲಿಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರಾಗಿರುವ ಅರ್ಜಿದಾರರು, RSS ಸೇರುವಂತೆ ನನ್ನನ್ನು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಅಗರ್ ವಾಲ್ ನೇತೃತ್ವದ ಏಕಸದಸ್ಯ ಪೀಠ, ಅರ್ಜಿದಾರರ ಹೇಳಿಕೆ ಅರ್ಹತೆ ಕುರಿತು ಪ್ರತಿಕ್ರಿಯಿಸದೆ ಅರ್ಜಿಯನ್ನು ವಿಲೇವಾರಿ ಮಾಡಿತು.

ಅರ್ಜಿದಾರರ ದೂರನ್ನು ಪರಿಶೀಲಿಸುವಂತೆ ಎಸ್ ಪಿ ಗೆ ನಿರ್ದೇಶನ ನೀಡುತ್ತೇನೆ. ಒಂದು ವೇಳೆ ನಿಜವಾಗಿಯೂ ಅರ್ಜಿದಾರರಿಗೆ ಬೆದರಿಕೆ ಇದ್ದರೆ ಆದೇಶದ ಪ್ರತಿ ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸುವುದಾಗಿ ರಾಜ್ಯ ಸರ್ಕಾರದ ಪರ ವಕೀಲ ವಿ. ಎಸ್. ಚೌಧರಿ ಹೇಳಿರುವುದಾಗಿ ನ್ಯಾಯಪೀಠ ಹೇಳಿತು.

Casual Images
RSS ಪಿತೂರಿ ಸಿದ್ಧಾಂತಗಳ ಒಲವು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಸಮಗ್ರತೆಗೆ ಅಪಾಯ: ಕಾಂಗ್ರೆಸ್ ಆರೋಪ

ತಾನು ಮಜೌಲಿಯ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ತನನ್ನು RSS ಚಟುವಟಿಕೆಗಳಿಗೆ ಸೇರಲು ಕಾಲೇಜು ಅಧಿಕಾರಿಗಳು ಸೂಚಿಸಿದ್ದಾರೆ.

ಆರ್‌ಎಸ್‌ಎಸ್‌ನ ಸಿದ್ಧಾಂತ ನನಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ಅದನ್ನು ಅನುಸರಿಸಲು ನಿರಾಕರಿಸಿದಾಗ ನನಗೆ ಥಳಿಸಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಈಗಾಗಲೇ ಎಸ್‌ಪಿ ಮತ್ತು ಸಂಬಂಧಪಟ್ಟ ಪಟ್ಟಣ ನಿರೀಕ್ಷಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com