ಹರಿಯಾಣ: ನರೈಂಗರ್‌ನಲ್ಲಿ ಬಿಎಸ್‌ಪಿ ನಾಯಕ ಹರ್ಬಿಲಾಸ್ ಸಿಂಗ್ ರಾಜ್ಜುಮಜ್ರಾನನ್ನು ಗುಂಡಿಕ್ಕಿ ಹತ್ಯೆ

ಪುನೀತ್‌ಗೂ ಗುಂಡೇಟು ತಗುಲಿದೆ. ದಾಳಿಯ ನಂತರ, ಅವರನ್ನು ಚಂಡೀಗಢದ ಪಿಜಿಐಎಂಇಆರ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಹರ್ಬಿಲಾಸ್ ತಡರಾತ್ರಿ ಮೃತಪಟ್ಟರು.
Representational image
ಸಾಂದರ್ಭಿಕ ಚಿತ್ರ
Updated on

ಅಂಬಾಲಾ: ಹರಿಯಾಣದ ಅಂಬಾಲಾದ ಬಹುಜನ ಸಮಾಜ ಪಕ್ಷದ (BSP) ನಾಯಕ ಹರ್ಬಿಲಾಸ್ ಸಿಂಗ್ ರಜ್ಜುಮಜ್ರಾನನ್ನು ನರೈಂಗರ್‌ನಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಿನ್ನೆ ಶುಕ್ರವಾರ ಸಂಜೆ ಬಿಎಸ್‌ಪಿ ನಾಯಕ ಹರ್ಬಿಲಾಸ್ ಸಿಂಗ್ ರಜ್ಜುಮಜ್ರಾ ಅವರ ಜೊತೆ ಪುನೀತ್ ಮತ್ತು ಗುಗಲ್ ಎಂಬ ಇಬ್ಬರು ಸ್ನೇಹಿತರು ಕಾರಿನಲ್ಲಿ ಕುಳಿತಿದ್ದಾಗ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪುನೀತ್‌ಗೂ ಗುಂಡೇಟು ತಗುಲಿದೆ. ದಾಳಿಯ ನಂತರ, ಅವರನ್ನು ಚಂಡೀಗಢದ ಪಿಜಿಐಎಂಇಆರ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಹರ್ಬಿಲಾಸ್ ತಡರಾತ್ರಿ ಮೃತಪಟ್ಟರು. ಪುನೀತ್ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Representational image
ಅಮೆರಿಕದಲ್ಲಿ ಹೈದರಾಬಾದ್‌ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ; ಕುಟುಂಬಕ್ಕೆ ಆಘಾತ

ದಾಳಿಕೋರರನ್ನು ಇದುವರೆಗೆ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನರೈಂಗಡ್ ಎಸ್ ಹೆಚ್ ಒ ಲಲಿತ್ ಕುಮಾರ್ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿದ್ದು, ದಾಳಿಕೋರರನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ತಿಳಿಸಿದ್ದಾರೆ.

ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಅಂಬಾಲಾ ಮೂಲದ ಬಿಎಸ್ಪಿ ನಾಯಕರು ಒತ್ತಾಯಿಸಿದ್ದಾರೆ. ರಾಜ್ಜುಮಜ್ರಾ ಕಳೆದ ವರ್ಷ ನರೈಂಗಡ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com