YSRCP ನಾಯಕ ವಿಜಯಸಾಯಿ ರೆಡ್ಡಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ

ಇದು ನನ್ನ ವೈಯಕ್ತಿಕ ನಿರ್ಧಾರ ಯಾವುದೇ ಒತ್ತಡವಿಲ್ಲ ಎಂದಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಶುಕ್ರವಾರ ರೆಡ್ಡಿ ಘೋಷಿಸಿದ್ದರು.
ವಿಜಯಸಾಯಿ ರೆಡ್ಡಿ
ವಿಜಯಸಾಯಿ ರೆಡ್ಡಿ
Updated on

ನವದೆಹಲಿ: ವೈಎಸ್‌ಆರ್‌ಸಿಪಿ ನಾಯಕ ವಿ. ವಿಜಯಸಾಯಿ ರೆಡ್ಡಿ ಅವರು ವೈಯಕ್ತಿಕ ಕಾರಣ ನೀಡಿ ರಾಜ್ಯಸಭಾ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ನಾನು ನನ್ನ ರಾಜೀನಾಮೆಯನ್ನು ರಾಜ್ಯಸಭೆ ಸಭಾಪತಿ ದಂಖರ್ ಅವರಿಗೆ ಸಲ್ಲಿಸಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬೇರೆ ಯಾವುದೇ ಪಕ್ಷಕ್ಕೆ ಸೇರಲ್ಲ. ರಾಜಕೀಯ ತೊರೆಯುತ್ತಿದ್ದೇನೆ. ನಾನು ಯಾವುದೇ ಸ್ಥಾನ, ಲಾಭ ಅಥವಾ ಹಣಕ್ಕಾಗಿ ರಾಜೀ ನಾಮೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಯಾವುದೇ ಒತ್ತಡವಿಲ್ಲ’ ಎಂದಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಶುಕ್ರವಾರ ರೆಡ್ಡಿ ಘೋಷಿಸಿದ್ದರು.

ರಾಜ್ಯಸಭಾ ಸದಸ್ಯತ್ವದಲ್ಲಿ ಆರು ವರ್ಷಗಳ ಅವಧಿಗೆ ಇನ್ನೂ ಮೂರುವರೆ ವರ್ಷಗಳು ಬಾಕಿ ಉಳಿದಿದ್ದರೂ, ವೈಯಕ್ತಿಕ ಕಾರಣಗಳಿಗಾಗಿ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿರುವುದಾಗಿ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ವೈಎಸ್‌ಆರ್‌ಸಿಪಿ ನಾಯಕರು ಪಕ್ಷದ ಏಕತೆಗಾಗಿ ರಾಜಕೀಯದಲ್ಲಿ ಉಳಿಯುವಂತೆ ವಿಜಯಸಾಯಿ ರೆಡ್ಡಿಗೆ ಮನವಿ ಮಾಡಿದ್ದಾರೆ. ವಿ. ವಿಜಯಸಾಯಿ ರೆಡ್ಡಿ ರಾಜೀನಾಮೆ ಘೋಷಿಸಿದ ನಂತರ, ಪಕ್ಷದ ನಾಯಕಿ ಮಡ್ಡಿಲ ಗುರುಮೂರ್ತಿ ಶನಿವಾರ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು.

ವಿಜಯಸಾಯಿ ರೆಡ್ಡಿ
ಚಂದ್ರಬಾಬು ನಾಯ್ಡು ಒಬ್ಬ ರೋಗಗ್ರಸ್ಥ ಮನಸ್ಥಿತಿಯ ಮಹಾನ್ ಸುಳ್ಳುಗಾರ: ಪ್ರಧಾನಿ ಮೋದಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ

"ಖಂಡಿತವಾಗಿಯೂ, ನಾವೆಲ್ಲರೂ ಅವರು (ವಿಜಯಸಾಯಿ ರೆಡ್ಡಿ) ನಮ್ಮ ಪಕ್ಷದಲ್ಲಿ ಮುಂದುವರಿಯಬೇಕೆಂದು ಬಯಸುತ್ತಿದ್ದೇವೆ. ದಯವಿಟ್ಟು ರಾಜಕೀಯದಿಂದ ನಿರ್ಗಮಿಸಬೇಡಿ. ನಿಮ್ಮಂತಹ ಅನುಭವಿ ವ್ಯಕ್ತಿಗಳು ಪಕ್ಷಕ್ಕೆ ಅವಶ್ಯಕ. ಜಗನ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ವಿನಂತಿಸಿದೆ" ಎಂದು ಗುರುಮೂತಿ ತಿಳಿಸಿದ್ದಾರೆ. ಈ ಮನವಿಗೆ ಪ್ರತಿಕ್ರಿಯಿಸಿರುವ ವಿಜಯಸಾಯಿ ರೆಡ್ಡಿ "ಇದರ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿಯಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ ಎಂದು ಗುರುಮೂರ್ತಿ ಸ್ಪಷ್ಟ ಪಡಿಸಿದರು. ದಿಟ್ಟತನಕ್ಕೆ ಹೆಸರುವಾಸಿಯಾದ ವಿಜಯಸಾಯಿ ರೆಡ್ಡಿ ಯಾವುದೇ ಸವಾಲುಗಳನ್ನು ನಿವಾರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com