ಜನರು ನಿನ್ನನ್ನು ಮೋಸಗಾರ ಎಂದು ಕರೆಯೋದು ಏಕೆ ಎಂದು ಅರ್ಥವಾಯಿತು: ಕೇಜ್ರಿವಾಲ್ಗೆ ಹರ್ಷ ಸಾಂಘ್ವಿ ತಿರುಗೇಟು

ಗುಜರಾತ್ ಪೊಲೀಸರ ನಿಯೋಜನೆಯ ಬಗ್ಗೆ ಕೇಜ್ರಿವಾಲ್ ಪ್ರಶ್ನೆಗಳನ್ನು ಎತ್ತಿದ್ದು ಚುನಾವಣಾ ಆಯೋಗದ ಉದ್ದೇಶಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.
Arvind Kejriwal
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಭದ್ರತೆಗೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಪೊಲೀಸ್ ಸಿಬ್ಬಂದಿಯನ್ನು ತಮ್ಮ ಭದ್ರತೆಯಿಂದ ತೆಗೆದುಹಾಕಿ ಗುಜರಾತ್ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಪೊಲೀಸರ ಆದೇಶವನ್ನು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಹಂಚಿಕೊಳ್ಳುವ ಮೂಲಕ ಆ ನಡೆಯನ್ನು ಟೀಕಿಸಿದ್ದಾರೆ. 'ಗುಜರಾತ್ ಪೊಲೀಸರ ಈ ಆದೇಶವನ್ನು ಓದಿ.' ಚುನಾವಣಾ ಆಯೋಗವು ಪಂಜಾಬ್ ಪೊಲೀಸರನ್ನು ದೆಹಲಿಯಿಂದ ತೆಗೆದುಹಾಕಿ ಗುಜರಾತ್ ಪೊಲೀಸರನ್ನು ನಿಯೋಜಿಸಿತು. ಇದೇನಿದು? ಎಂದು ಪ್ರಶ್ನಿಸಿದ್ದಾರೆ.

ಗುಜರಾತ್ ಪೊಲೀಸರ ನಿಯೋಜನೆಯ ಬಗ್ಗೆ ಕೇಜ್ರಿವಾಲ್ ಪ್ರಶ್ನೆಗಳನ್ನು ಎತ್ತಿದ್ದು ಚುನಾವಣಾ ಆಯೋಗದ ಉದ್ದೇಶಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಅವರು ಎಎಪಿ ಮುಖ್ಯಸ್ಥರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಜನರು ನಿನ್ನನ್ನು ಮೋಸಗಾರ ಎಂದು ಏಕೆ ಕರೆಯುತ್ತಾರೆಂದು ಈಗ ನನಗೆ ಅರ್ಥವಾಯಿತು!' ಚುನಾವಣಾ ಆಯೋಗವು ಗುಜರಾತ್‌ನಿಂದ ಮಾತ್ರವಲ್ಲದೆ ಹಲವು ರಾಜ್ಯಗಳಿಂದಲೂ ಪಡೆಗಳನ್ನು ಕೋರಿದೆ. ಚುನಾವಣಾ ಆಯೋಗದ ಆದೇಶದಂತೆ, ಜನವರಿ 11 ರಂದು ಗುಜರಾತ್‌ನಿಂದ ಎಂಟು ತಂಡಗಳನ್ನು ದೆಹಲಿಗೆ ಕಳುಹಿಸಲಾಯಿತು. ಕೇಜ್ರಿವಾಲ್ ಜೀ, ನೀವು ಗುಜರಾತ್ ಹೆಸರನ್ನು ಮಾತ್ರ ಏಕೆ ಬಳಸುತ್ತಿದ್ದೀರಿ? ಎಂದು ಮರುಪ್ರಶ್ನೆ ಹಾಕಿದ್ದಾರೆ.

ವಾಸ್ತವವಾಗಿ, ಯಾವುದೇ ರಾಜ್ಯದಲ್ಲಿ ಚುನಾವಣೆಗಳು ನಡೆದಾಗಲೆಲ್ಲಾ, ಚುನಾವಣಾ ಆಯೋಗವು ದೇಶಾದ್ಯಂತ ಪೊಲೀಸ್ ಪಡೆಗಳನ್ನು ಕರೆಯುತ್ತದೆ. ಈ ಪಡೆಯನ್ನು ಗೃಹ ಸಚಿವಾಲಯದ ಸಮನ್ವಯದೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಭದ್ರತೆ ಒದಗಿಸುವುದು, ಫ್ಲೈಯಿಂಗ್ ಸ್ಕ್ವಾಡ್‌ಗಳು, ಅಂತರರಾಜ್ಯ ಗಡಿ ಪರಿಶೀಲನೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು ಅವರ ಕೆಲಸ. ದೆಹಲಿ ಚುನಾವಣೆಗೆ ಆಯೋಗವು 250 ಪೊಲೀಸ್ ತಂಡಗಳನ್ನು ಕೋರಿತ್ತು. ಆದರೆ ಕೇವಲ 220 ತಂಡಗಳು ಮಾತ್ರ ಲಭ್ಯವಾಗಿವೆ.

Arvind Kejriwal
ದೆಹಲಿ ಚುನಾವಣೆ: ಯಮುನಾ ನದಿ ನೀರಿನಲ್ಲಿ 'ಕೇಜ್ರಿವಾಲ್ ಪ್ರತಿಕೃತಿ' ಮುಳುಗಿಸಿದ ಬಿಜೆಪಿ ನಾಯಕ!

ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ದೆಹಲಿ ಚುನಾವಣೆಯಲ್ಲಿ ಸಂಭವನೀಯ ಸೋಲಿನ ಭಯದಿಂದ ಎಎಪಿ ಮುಖ್ಯಸ್ಥರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪಕ್ಷ ಹೇಳಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, 'ಚುನಾವಣಾ ಆಯೋಗದ ಭದ್ರತಾ ಶಿಷ್ಟಾಚಾರಗಳ ಬಗ್ಗೆ ಕೇಜ್ರಿವಾಲ್ ತಿಳಿದಿರಬೇಕು. ಇದು ಅವರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಷ್ಟೇ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com