
ನವದೆಹಲಿ: ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿ ಹಿಂಸಾಚಾರ ಆಧಾರಿತ '2020 Delhi'ಸಿನಿಮಾ ಬಿಡುಗಡೆಯನ್ನು ಮುಂದೂಡುವಂತೆ ನಿರ್ದೇಶಿಸುವಂತೆ ಕಾಂಗ್ರೆಸ್ ಭಾನುವಾರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಚುನಾವಣೆಗೆ ಮುನ್ನ ಬಿಜೆಪಿ ರಾಜಕೀಯ ವಾತಾವರಣವನ್ನು ಕೋಮುವಾದಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ದೆಹಲಿ ಚುನಾವಣೆಗೆ ಮೂರು ದಿನಗಳು ಬಾಕಿಯಿರುವಂತೆಯೇ ಫೆಬ್ರವರಿ 2 ರಂದು ಚುನಾವಣೆ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ನಿರ್ದಿಷ್ಟ ಸಮುದಾಯದ ಮತಗಳ ವಿಭಜನೆ ಹಾಗೂ ದುರ್ಬಳಕೆಯಲ್ಲಿ ಈ ಸಿನಿಮಾ ಪ್ರಮುಖವಾಗಿದೆ. ಈ ಸಂಬಂಧ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಎಂದು ಹಿರಿಯ ವಕೀಲರಾಗಿರುವ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಬಿಜೆಪಿ ತನ್ನ ಅಭ್ಯರ್ಥಿಗಳ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಸಮಾಜವನ್ನು ಹೊಡೆಯಲು, ಮತಗಳ ದುರ್ಬಳಕೆಗಾಗಿ ಕೋಮು ಆಧಾರಿತ ಚಿತ್ರಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ. ಇದೀಗ ಈ ಸಿನಿಮಾವನ್ನು ತನ್ನ ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಆರಂಭಿಸಿದೆ ಎಂದು ಅವರು ಟೀಕಿಸಿದರು.
Advertisement