
ಮಹಾಕುಂಭ: ಜನರು ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು, ನಮ್ಮ ಸನಾತನ ಧರ್ಮ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗಿರುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿರೋಧ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಜಾತಿ-ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಹೀಗೆ ಮಾಡುವುದು ದೇಶದ್ರೋಹಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರು.
ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಭಜಿಸಬೇಕೆಂಬ ಕೆಲವು ಭಾಗಗಳ ಬೇಡಿಕೆಗೆ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು, ಉತ್ತರ ಪ್ರದೇಶದ ಸಾಮರ್ಥ್ಯವು ಅದರ ಏಕತೆಯಲ್ಲಿದೆ ಎಂದು ಪ್ರಯಾಗ್ ರಾಜದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಬಗ್ಗೆ ಹೇಳಿದರು.
ಮಹಾಕುಂಭವು ಏಕತೆ ಮತ್ತು ಸಮಗ್ರತೆಯ ಸಂದೇಶ ಸಾರುತ್ತದೆ, ಇದು ಜಗತ್ತಿಗೆ ತಲುಪಬೇಕು. ಮಹಾಕುಂಭದ ಭಾಗವಾಗಿರುವ ಎಲ್ಲಾ ಸಂತರು, ಭಕ್ತರು ಅಥವಾ ಪ್ರವಾಸಿಗರು ಸಹ ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ದರೆ, ಸನಾತನ ಧರ್ಮ ಬಲಿಷ್ಠವಾಗುತ್ತದೆ. ಸನಾತನ ಧರ್ಮ ಬಲಿಷ್ಠವಾಗಿದ್ದರೆ, ನಮ್ಮ ದೇಶ ಬಲಿಷ್ಠವಾಗಿರುತ್ತದೆ ಎಂದು ಯೋಗಿ ಆದಿತ್ಯನಾಥ್ ಅವರು ಮಹಾಕುಂಭಮೇಳದಲ್ಲಿ "ನ್ಯೂಸ್ 18 ನೆಟ್‌ವರ್ಕ್" ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
Advertisement