Saif Stabbing Case: ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟ ವ್ಯಕ್ತಿಯ ಜೀವನವೇ ಬರ್ಬಾದ್; ಕೆಲಸ ಹೋಯ್ತು, ಮದುವೆ ಮುರಿದುಬಿತ್ತು!

ಸೈಫ್ ಅಲಿ ಖಾನ್ ಮೇಲಿನ ದಾಳಿ ನಂತರ ವ್ಯಕ್ತಿಯೋರ್ವ ಅಪಾರ್ಟ್ ಮೆಂಟ್ ನ ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವ ವ್ಯಕ್ತಿಯೋರ್ವನ ಫೋಟೋಗಳಲ್ಲಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು.
ಸೈಫ್ ಅಲಿ ಖಾನ್-ಆಕಾಶ್ ಕನೋಜಿಯ
ಸೈಫ್ ಅಲಿ ಖಾನ್-ಆಕಾಶ್ ಕನೋಜಿಯPTI
Updated on

ಮುಂಬೈ: ಜನವರಿ 16ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಶಂಕಿತನೋರ್ವನನ್ನು ಬಂಧಿಸಲಾಗಿತ್ತು. ಆದರೆ ವಿಪರ್ಯಾಸವೆಂದರೆ ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸ್ಪಟ್ಟ ವ್ಯಕ್ತಿಯ ಜೀವನವೆ ಹಾಳಾಗಿದೆ. ಹೌದು ಪೊಲೀಸರ ಕ್ರಮದ ನಂತರ ಆತನಿಗೆ ಕೆಲಸವಿಲ್ಲದಂತಾಗಿದ್ದು ಮದುವೆ ಪ್ರಸ್ತಾಪವೂ ಮುರಿದು ಬಿದ್ದಿದೆ.

ಜನವರಿ 18ರಂದು ಮುಂಬೈ ಪೊಲೀಸರ ಮಾಹಿತಿ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್-ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆಕಾಶ್ ಕನೋಜಿಯಾ (31) ಅವರನ್ನು ದುರ್ಗ್ ನಿಲ್ದಾಣದಲ್ಲಿ ಬಂಧಿಸಿತು. ಆದರೆ ಮಾರನೇ ದಿನ ಬೆಳಗ್ಗೆ ಮುಂಬೈ ಪೊಲೀಸರು ನೆರೆಯ ಥಾಣೆಯಿಂದ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ಬಂಧಿಸಿದರು. ಹೀಗಾಗಿ ದುರ್ಗ್ ಆರ್‌ಪಿಎಫ್ ಆಕಾಶ್ ಕನೋಜಿಯನ್ನು ಕಳುಹಿಸಿಕೊಟ್ಟಿದ್ದರು.

ಸೈಫ್ ಅಲಿ ಖಾನ್ ಮೇಲಿನ ದಾಳಿ ನಂತರ ವ್ಯಕ್ತಿಯೋರ್ವ ಅಪಾರ್ಟ್ ಮೆಂಟ್ ನ ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವ ವ್ಯಕ್ತಿಯೋರ್ವನ ಫೋಟೋಗಳಲ್ಲಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ನಂತರ ನನ್ನನ್ನು ಪ್ರಕರಣದ ಪ್ರಮುಖ ಶಂಕಿತ ಎಂಬಂತೆ ಬಿಂಬಿಸಲಾಯಿತು. ಇದರಿಂದ ನನ್ನ ಕುಟುಂಬ ಆಘಾತಕ್ಕೊಳಗಾಗಿ ಕಣ್ಣೀರಿಟ್ಟಿತು. ಮುಂಬೈ ಪೊಲೀಸರ ಒಂದು ತಪ್ಪು ನನ್ನ ಜೀವನವನ್ನು ಹಾಳು ಮಾಡಿತು. ನನಗೆ ಮೀಸೆ ಇದೆ ಎಂದು ಅವರು ಗಮನಿಸಲಿಲ್ಲ ಮತ್ತು ನಟನ ಕಟ್ಟಡದ ಸಿಸಿಟಿವಿ ಸೆರೆಹಿಡಿಯಲಾದ ವ್ಯಕ್ತಿಯನ್ನು ಅವರು ಸರಿಯಾಗಿ ಗಮನಿಸಲಿಲ್ಲ ಎಂದು ಕನೋಜಿಯಾ ತಿಳಿಸಿದರು.

ಘಟನೆಯ ನಂತರ ನನಗೆ ಪೊಲೀಸರು ಕರೆ ಮಾಡಿ ಎಲ್ಲಿದ್ದೀಯ ಎಂದು ಪ್ರಶ್ನಿಸಿದರು. ನಾನು ಮನೆಯಲ್ಲಿದ್ದೇನೆ ಎಂದು ಹೇಳಿದೆ. ನಂತರ ನಾನು ನನ್ನ ಭಾವಿ ವಧುವನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದಾಗ ನನ್ನನ್ನು ದುರ್ಗ್‌ನಲ್ಲಿ ಬಂಧಿಸಿ ನಂತರ ರಾಯ್‌ಪುರಕ್ಕೆ ಕರೆತಂದರು. ಅಲ್ಲಿಗೆ ತಲುಪಿದ ಮುಂಬೈ ಪೊಲೀಸ್ ತಂಡವು ನನ್ನ ಮೇಲೂ ಹಲ್ಲೆ ನಡೆಸಿತು ಎಂದು ಆಕಾಶ್ ಹೇಳಿಕೊಂಡಿದ್ದಾರೆ. ನಂತರ ನಾನು ನನ್ನ ಮೇಲಾಧಿಕಾರಿಗೆ ಕರೆ ಮಾಡಿದಾಗ ಅವರು ಕೆಲಸಕ್ಕೆ ವರದಿ ಮಾಡಿಕೊಳ್ಳದಂತೆ ಸೂಚಿಸಿದರು. ಅವರು ನನ್ನ ಮಾತನ್ನು ಸಹ ಕೇಳಲಿಲ್ಲ. ನನ್ನ ಬಂಧನದ ನಂತರ ನನ್ನ ಭಾವಿ ವಧುವಿನ ಕುಟುಂಬದವರು ಮದುವೆ ಮಾತುಕತೆ ಮುಂದುವರಿಸಲು ನಿರಾಕರಿಸಿದರು ಎಂದು ಹೇಳಿಕೊಂಡಿದ್ದಾರೆ.

ಸೈಫ್ ಅಲಿ ಖಾನ್-ಆಕಾಶ್ ಕನೋಜಿಯ
Attack on Saif Ali Khan: ಚತ್ತೀಸ್ ಗಢದಲ್ಲಿ ಶಂಕಿತನ ಬಂಧನ; ಗ್ಯಾಂಗ್ ಸದಸ್ಯನಲ್ಲ, ಯಾರ ಮನೆಗೆ ನುಗ್ಗಿದ್ದೇನೆಂಬುದೂ ಆತನಿಗೆ ಬಹುಶಃ ಗೊತ್ತಿರಲಿಲ್ಲ!

ಕಫೆ ಪರೇಡ್‌ನಲ್ಲಿ ನನ್ನ ಮೇಲೆ ಎರಡು ಪ್ರಕರಣಗಳು ಮತ್ತು ಗುರಗಾಂವ್‌ನಲ್ಲಿ ಒಂದು ಪ್ರಕರಣಗಳಿವೆ. ಆದರೆ ನನ್ನನ್ನು ಹಾಗೆ ಶಂಕಿತನನ್ನಾಗಿ ಮಾಡಿ ನಂತರ ಬಿಡಬಹುದು ಎಂದು ಇದರ ಅರ್ಥವಲ್ಲ. ಸೈಫ್ ಅಲಿ ಖಾನ್ ಅವರ ಅಪಾರ್ಟ್ ಮೆಂಟ್ ಹೊರಗೆ ನಿಂತು ಕೆಲಸ ಕೆಲಸ ನಾನು ಯೋಜಿಸುತ್ತಿದ್ದೇನೆ. ಏಕೆಂದರೆ ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣದ ನಂತರ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಕನೋಜಿಯಾ ಹೇಳಿದರು.

ದುರ್ಗ್ ರೈಲ್ವೆ ನಿಲ್ದಾಣದಲ್ಲಿ ನನ್ನನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಶರೀಫುಲ್ ಇಸ್ಲಾಂ ಸಿಕ್ಕಿಬಿದ್ದಿದ್ದು ದೈವ ಕೃಪೆ ಇರಬೇಕು. ಇಲ್ಲದಿದ್ದರೆ, ಯಾರಿಗೆ ಗೊತ್ತು, ನನ್ನನ್ನು ಪ್ರಕರಣದಲ್ಲಿ ಆರೋಪಿ ಎಂದು ತೋರಿಸುತ್ತಿದ್ದರೆನೋ ಎಂದು ಕನೋಜಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com