Saif stabbing case: ಮುಂಬೈ ಪೊಲೀಸರ ಮತ್ತೊಂದು ಯಡವಟ್ಟು; ಬಂಧಿತ ಬಾಂಗ್ಲಾ ಪ್ರಜೆ ಶರೀಫುಲ್ ಇಸ್ಲಾಂನ ಬೆರಳಚ್ಚು ಹೊಂದಿಕೆಯಾಗುತ್ತಿಲ್ಲ!

ಶರೀಫುಲ್ ಇಸ್ಲಾಂ ಬಾಂಗ್ಲಾದೇಶದ ಪ್ರಜೆ. ಸೈಫ್ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಆತನನ್ನು ಜನವರಿ 16 ರಂದು ಬಂಧಿಸಲಾಯಿತು. ಮೂರು ದಿನಗಳ ಹುಡುಕಾಟದ ನಂತರ ಮುಂಬೈ ಪೊಲೀಸರು ಆತನನ್ನು ಬಂಧಿಸಿದರು.
Shariful Islam-Saif Ali Khan
ಶರೀಫುಲ್ ಇಸ್ಲಾಂ-ಸೈಫ್ ಅಲಿ ಖಾನ್TNIE
Updated on

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚೂರಿ ಇರಿತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಮುಂಬೈ ಪೊಲೀಸರ ತನಿಖೆ ಮತ್ತು ಈ ಪ್ರಕರಣದಲ್ಲಿ ಬಾಂಗ್ಲಾದೇಶಿ ಪ್ರಜೆಯ ಬಂಧನದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಇತ್ತೀಚಿನ ವರದಿಯ ಪ್ರಕಾರ, ನಟನ ಮನೆಯಲ್ಲಿ ದೊರೆತ ಬೆರಳಚ್ಚುಗಳು ಆರೋಪಿ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂನ ಬೆರಳಚ್ಚುಗಳಿಗೆ ಹೊಂದಿಕೆಯಾಗುತ್ತಿಲ್ಲ ಎನ್ನಲಾಗಿದೆ.

ಶರೀಫುಲ್ ಇಸ್ಲಾಂ ಬಾಂಗ್ಲಾದೇಶದ ಪ್ರಜೆ. ಸೈಫ್ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಆತನನ್ನು ಜನವರಿ 16 ರಂದು ಬಂಧಿಸಲಾಯಿತು. ಮೂರು ದಿನಗಳ ಹುಡುಕಾಟದ ನಂತರ ಮುಂಬೈ ಪೊಲೀಸರು ಆತನನ್ನು ಬಂಧಿಸಿದರು. ಆದರೆ, ಈಗ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿಯ ಮುಖವು ಬಂಧಿತ ಶರೀಫುಲ್ ಗಿಂತ ಭಿನ್ನವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚಿಸಲಾಗುತ್ತಿದೆ.

ವರದಿಯ ಪ್ರಕಾರ, ಸೈಫ್ ಅಲಿ ಮನೆಯಲ್ಲಿ 19 ಬೆರಳಚ್ಚುಗಳು ಪತ್ತೆಯಾಗಿದ್ದು, ಅವುಗಳಲ್ಲಿ ಯಾವುದೂ ಶರೀಫುಲ್ ಬೆರಳಚ್ಚುಗಳಿಗೆ ಹೊಂದಿಕೆಯಾಗಲಿಲ್ಲ. ಅಪರಾಧ ತನಿಖಾ ಇಲಾಖೆಯ (ಸಿಐಡಿ) ವರದಿಯಲ್ಲಿ ಇದು ಬಹಿರಂಗವಾಗಿದೆ. ಹೀಗಾಗಿ ಮುಂಬೈ ಪೊಲೀಸರು ಸರಿಯಾದ ವ್ಯಕ್ತಿಯನ್ನು ಬಂಧಿಸಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಉದ್ಭವಿಸಿದೆ. ಈ ವರದಿಯನ್ನು ಪುಣೆಯ ಸಿಐಡಿ ಸೂಪರಿಂಟೆಂಡೆಂಟ್‌ಗೆ ಕಳುಹಿಸಲಾಗಿದೆ.

ಮುಂಬೈ ಪೊಲೀಸರ ತಂಡವೊಂದು ಶರೀಫುಲ್ ನನ್ನು ಬಂಧಿಸಿತ್ತು. ಆದರೆ ವರದಿಯ ಪ್ರಕಾರ, ಪ್ರಕರಣದ ಬಗ್ಗೆ ಆ ತಂಡಕ್ಕೆ ಬಹಳ ಕಡಿಮೆ ಜ್ಞಾನವಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ವಲಯ 9 ಪೊಲೀಸರು ನಿರ್ವಹಿಸುತ್ತಿದ್ದರು. ಆದರೆ ನಂತರ ಶರೀಫುಲ್ ಶಂಕಿತ ಅಡಗುತಾಣ ಇದ್ದ ಸ್ಥಳದ ಬಳಿ ಇದ್ದುದರಿಂದ ಶರೀಫುಲ್‌ನನ್ನು ಬಂಧಿಸಲು ವಲಯ 6 ತಂಡವನ್ನು ಕಳುಹಿಸಲಾಗಿತ್ತು.

Shariful Islam-Saif Ali Khan
Saif Stabbing Case: ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟ ವ್ಯಕ್ತಿಯ ಜೀವನವೇ ಬರ್ಬಾದ್; ಕೆಲಸ ಹೋಯ್ತು, ಮದುವೆ ಮುರಿದುಬಿತ್ತು!

ಶರೀಫುಲ್ ಬಂಧನದ ನಂತರ ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಳಿಕೋರ ಸೈಫ್ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಆದರೆ ಈ ದೃಶ್ಯಗಳು ತುಂಬಾ ಮಸುಕಾಗಿದ್ದವು, ಇದರಿಂದಾಗಿ ಅವರ ಚಿತ್ರ ಸ್ಪಷ್ಟವಾಗಿ ಕಾಣಲಿಲ್ಲ. ಇದಾದ ನಂತರ, ಪಶ್ಚಿಮ ರೈಲ್ವೆ ಸಿದ್ಧಪಡಿಸಿದ ರೇಖಾಚಿತ್ರವನ್ನು ಬಳಸಲಾಯಿತು. ಆದರೆ ಈ ವರದಿಯಲ್ಲಿ ತೋರಿಸಿರುವ ವ್ಯಕ್ತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವ ವ್ಯಕ್ತಿಗೆ ಹೊಂದಿಕೆಯಾಗಲಿಲ್ಲ. ಇದೆಲ್ಲದರಿಂದಾಗಿ ವಿಷಯವು ಹೆಚ್ಚು ಜಟಿಲವಾಗಿದೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಶರೀಫುಲ್ ಇಸ್ಲಾಂ ಅವರನ್ನು ತಪ್ಪಾಗಿ ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com