
ಪ್ರಯಾಗ್‌ರಾಜ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಾಧುಗಳ ಜೊತೆಗೆ ಪವಿತ್ರ ಸ್ನಾನ ಮಾಡಿದರು.
ಇದೇ ವೇಳೆ ಐಸಿಸಿ ಅಧ್ಯಕ್ಷ ಮತ್ತು ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಗಂಡು ಮಗುವಿಗೆ ಸಾಧುಗಳು ಆಶೀರ್ವದಿಸಿದರು.
ಅಮಿತ್ ಶಾ ಅವರು ಇಂದು ಪ್ರಯಾಗ್‌ರಾಜ್‌ನ ಸಂಗಮ ತ್ರಿವೇಣಿಯಲ್ಲಿ ಪತ್ರ ಸ್ನಾನ ಮಾಡಿದರು. ಶಾ ಅವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮ್ ದೇವ್ ಸೇರಿದಂತೆ ಹಲವು ಸಂತರು ಮತ್ತು ಸಾಧುಗಳು ಇದ್ದರು.
ಪವಿತ್ರ ಸ್ನಾನಕ್ಕೂ ಮೊದಲು, ಅಮಿತ್ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್‌ನಲ್ಲಿರುವ ಸಾಧು, ಸಂತರನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಕೇಂದ್ರ ಗೃಹ ಸಚಿವರು ಪವಿತ್ರ ಸ್ನಾನದ ನಂತರ ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಲಿದ್ದಾರೆ. ನಂತರ ಜುನಾ ಅಖಾರಕ್ಕೆ ತೆರಳಿ ಮಹಾರಾಜರು ಮತ್ತು ಅಖಾರದ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸೇವಿಸಲಿದ್ದಾರೆ.
Advertisement