
ಅಹ್ಮದಾಬಾದ್: ತಮ್ಮ ವಿಧವೆ ತಾಯಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದುಹಾಕಿದ ಇಬ್ಬರು ಸಹೋದರರು ಬಳಿಕ ಆತನ ಕರಳು ಬಗೆದು ಕತ್ತರಿಸಿ ಎಸೆದಿರುವ ಭೀಕರ ಘಟನೆ ವರದಿಯಾಗಿದೆ.
ಗುಜರಾತ್ ನ ಗಾಂಧಿನಗರದಲ್ಲಿ ಜನವರಿ 26ರಂದು ಈ ಘಟನೆ ನಡೆದಿದ್ದು, ಗಂಡನನ್ನು ಕಳೆದುಕೊಂಡಿರುವ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೇ ರತನ್ ಜಿ ಎಂಬಾತನನ್ನು ಇಬ್ಬರು ಸಹೋದರರು ಕೊಂದು ಹಾಕಿದ್ದು ಮಾತ್ರವಲ್ಲದೇ ಆತನ ಕರಳು ಬಗೆದು ಕತ್ತರಿಸಿ ಬಿಸಾಡಿರುವ ಭೀಕರ ಘಟನೆ ನಡೆದಿದೆ. ಪ್ರಸ್ತುತ ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸಂಜಯ್ ಠಾಕೂರ್ (27) ಮತ್ತು ಜಯೇಶ್ ಠಾಕೂರ್ (23) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳು ಕೊಲೆಗೆ ಬಳಿಸಿದ ಆಯುಧಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ತಾಯಿ ಜೊತೆ ಅಕ್ರಮ ಸಂಬಂಧ
ವೃತ್ತಿಯಲ್ಲಿ ಕಟ್ಟಡ ನಿರ್ಮಾಣದ ಮೇಸ್ತ್ರಿಯಾಗಿದ್ದ ಸಂತ್ರಸ್ಥ ವ್ಯಕ್ತಿ ರತನ್ ಜಿ ಆರೋಪಿಗಳಾದ ಸಹೋದರರ ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಮಹಿಳೆಯ ಗಂಡ ಸಾವಿಗೀಡಾಗಿದ್ದ. ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಸಂತ್ರಸ್ಥ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈಗ ಆಕೆಯ ಇಬ್ಬರು ಗಂಡು ಮಕ್ಕಳು ಬೆಳೆದು ದೊಡ್ಡವರಾಗಿದ್ದು, ತಾಯಿಯ ಅಕ್ರಮ ಸಂಬಂಧದ ಬಗ್ಗೆ ಜನ ಮಾತನಾಡುತ್ತಿದ್ದನು ಕಂಡು ಆಕ್ರೋಶಗೊಂಡಿದ್ದರು.
ಸಾಕಷ್ಟು ಬಾರಿ ಎಚ್ಚರಿಕೆ
ಅಕ್ರಮ ಸಂಬಂಧದಿಂದ ಆಕ್ರೋಶಗೊಂಡಿದ್ದ ಸಹೋದರರು ರತನ್ ಜಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು. ತಮ್ಮ ತಾಯಿಯ ತಂಟೆಗೆ ಬಾರದಂತೆ ಎಚ್ಚರಿಸಿದ್ದರು. ಆದರೆ ರತನ್ ಜಿ ಮಾತ್ರ ತನ್ನ ಅಕ್ರಮ ಸಂಬಂಧ ಮುಂದುವರೆಸಿದ್ದು ಮಾತ್ರವಲ್ಲದೇ ಆಕೆಯ ಮೃತ ಗಂಡನ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ. ಈ ಬಗ್ಗೆ ಜಯೇಶ್ ಮತ್ತು ಸಂಜಯ್ ಗೆ ತಿಳಿದಿತ್ತು.
ಅಟ್ಟಾಡಿಸಿ ಕೊಂದು ಕರಳು ಬಗೆದರು
ರತನ್ ಜಿ ವಿರುದ್ದ ತೀವ್ರ ಆಕ್ರೋಶಕೊಂಡಿದ್ದ ಸಹೋದರರು ಸಮಯಕ್ಕಾಗಿ ಕಾಯುತ್ತಿದ್ದರು. ಅಂತೆಯೇ ಜನವರಿ 26ರಂದು ರತನ್ ಜಿ ಗಾಂಧಿನಗರದಲ್ಲಿ ತನ್ನ ಮೇಸ್ತ್ರಿ ಕೆಲಸದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಜಯೇಶ್ ಮತ್ತು ಸಂಜಯ್ ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಕೂಡಲೇ ಆತ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಸಹೋದರರು ಆತನನ್ನು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದಾರೆ. ಬಳಿಕ ತಾವು ತಂದಿದ್ದ ಹರಿತವಾದ ಚಾಕುವಿನಿಂದ ಆತನ ಹೊಟೆಗೆ ಇರಿದು ಅತನ ಕರುಳು ಬಗೆದಿದ್ದಾರೆ. ಅಲ್ಲದೆ ಹೊರಗೆ ಬಂದ ಕರಳನ್ನು ಎಸೆದಾಡಿದ್ದು, ಅದನ್ನು ಕತ್ತರಿಸಿ ಬಿಸಾಡಿದ್ದಾರೆ.
ಈ ಭೀಕರ ಘಟನೆಯನ್ನು ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಅಲ್ಲಿಯೇ ಇದ್ದ ಕೆಲವು ಕಾರ್ಮಿಕರು ರತನ್ ಜಿಯನ್ನು ಉಳಿಸಲು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು. ಘಟನೆಯ ನಂತರ ಆರೋಪಿಗಳು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮೊಬೈಲ್ ಸ್ಥಳದ ಮೂಲಕ ಅವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಳಿಕ ವಿಚಾರಣೆ ವೇಳೆ ಇಬ್ಬರು ಸಹೋದರರು ಅಕ್ರಮ ಸಂಬಂಧ ತೊರೆಯುವ ಮಾತಿಗೆ ಆತ ಒಪ್ಪಲಿಲ್ಲ, ಇವರಿಬ್ಬರ ಸಂಬಂಧದಿಂದಾಗಿ ಕುಟುಂಬದಲ್ಲಿ ತಮಗೆ ಮುಜುಗರವಾಗುತ್ತಿತ್ತು ಎಂದು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement