ಇಂಡಿಗೋ ವಿಮಾನದಲ್ಲಿ ಹುಚ್ಚಾಟ! ತುರ್ತು ನಿರ್ಗಮನ ಬಾಗಿಲು ತೆರೆದ ವ್ಯಕ್ತಿ ಬಂಧನ

ಕ್ಯಾಬಿನ್ ಸಿಬ್ಬಂದಿ ಸುರಕ್ಷತಾ ಸೂಚನೆಗಳನ್ನು ನೀಡುತ್ತಿದ್ದಾಗ ಮತ್ತು ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಈ ಘಟನೆ ಸಂಭವಿಸಿದೆ. ಬ್ಯಾಂಕ್ ಉದ್ಯೋಗಿ ಸಿರಾಜ್ ಕಿದ್ವಾಯಿ ಬಂಧಿತ ಪ್ರಯಾಣಿಕನಾಗಿದ್ದಾರೆ.
File pic
ವಿಮಾನದ ತುರ್ತು ನಿರ್ಗಮನ ಬಾಗಿಲುonline desk
Updated on

ಜೋಧ್ ಪುರ: ಜೋಧ್‌ಪುರದಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ತುರ್ತು ಬಾಗಿಲು ತೆರೆದಿದ್ದಕ್ಕಾಗಿ ಬಂಧಿಸಲಾಗಿದೆ. ನಿರ್ಗಮನದ ಸಮಯದಲ್ಲಿ ಪ್ರಯಾಣಿಕ ತುರ್ತು ನಿರ್ಗಮನ ಫ್ಲಾಪ್ ನ್ನು ತೆರೆದಿದ್ದರ ಪರಿಣಾಮ ವಿಮಾನ ಟೇಕ್ ಆಫ್ ಆಗುವುದು 20 ನಿಮಿಷಗಳ ವಿಳಂಬವಾಯಿತು. ವಿಮಾನವು ಬೆಳಿಗ್ಗೆ 10:10 ಕ್ಕೆ ಟೇಕ್ ಆಫ್ ಆಗಲು ನಿಗದಿಯಾಗಿತ್ತು ಎಂದು NDTV ವರದಿ ಮಾಡಿದೆ.

ಕ್ಯಾಬಿನ್ ಸಿಬ್ಬಂದಿ ಸುರಕ್ಷತಾ ಸೂಚನೆಗಳನ್ನು ನೀಡುತ್ತಿದ್ದಾಗ ಮತ್ತು ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಈ ಘಟನೆ ಸಂಭವಿಸಿದೆ. ಬ್ಯಾಂಕ್ ಉದ್ಯೋಗಿ ಸಿರಾಜ್ ಕಿದ್ವಾಯಿ ಬಂಧಿತ ಪ್ರಯಾಣಿಕನಾಗಿದ್ದಾರೆ. ಅವರು "ಆಕಸ್ಮಿಕವಾಗಿ" ತುರ್ತು ನಿರ್ಗಮನ ಫ್ಲಾಪ್ ಅನ್ನು ತೆರೆದಿದ್ದಾರೆ ಎಂದು ಹೇಳಿಕೊಂಡಿದ್ದಾರ. ಆದಾಗ್ಯೂ, ವಿಮಾನ ಸಿಬ್ಬಂದಿ ತ್ವರಿತವಾಗಿ ಕ್ರಮ ಕೈಗೊಂಡರು ಮತ್ತು ಪೈಲಟ್‌ಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು.

ಪರಿಸ್ಥಿತಿಯನ್ನು ಗಮನಿಸಿ, ಸಿಬ್ಬಂದಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOPs) ಅನುಸರಿಸಿದರು, ಮತ್ತು ಭದ್ರತಾ ಅಧಿಕಾರಿಗಳು ಪ್ರಯಾಣಿಕನನ್ನು ತಕ್ಷಣವೇ ವಿಮಾನದಿಂದ ಕೆಳಗಿಳಿಸಿದ್ದಾರೆ. ನಂತರ ಜೋಧ್‌ಪುರದ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ CISF ಸಿಬ್ಬಂದಿ ಪ್ರಯಾಣಿಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

File pic
ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಪ್ರಯಾಣಿಕನ ಬಂಧನ

ಇಂಡಿಗೋ ಹೇಳಿಕೆ

"ಇಂದು, ಜೋಧ್‌ಪುರದಿಂದ ಬೆಂಗಳೂರಿಗೆ 6E 6033 ವಿಮಾನ ಹೊರಡುವ ಮೊದಲು ಸುರಕ್ಷತಾ ಬ್ರೀಫಿಂಗ್ ಸಮಯದಲ್ಲಿ, ಒಬ್ಬ ಪ್ರಯಾಣಿಕ ತುರ್ತು ನಿರ್ಗಮನದ ಬಾಗಿಲು ತೆರೆದಿದ್ದಾನೆ. ಸಿಬ್ಬಂದಿ ತಕ್ಷಣವೇ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಿದರು. ನಂತರ ಪ್ರಯಾಣಿಕನನ್ನು ಕೆಳಗಿಳಿಸಿ ತನಿಖೆಗಾಗಿ ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು" ಎಂದು ಇಂಡಿಗೋ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದೆ.

ಇತರ ಪ್ರಯಾಣಿಕರಿಗೆ ಉಂಟಾದ ಅಡಚಣೆಗೆ ಕ್ಷಮೆಯಾಚಿಸುತ್ತಾ, ವಿಮಾನಯಾನ ಸಂಸ್ಥೆ ಅತ್ಯುನ್ನತ ಸುರಕ್ಷತೆ ಮತ್ತು ಭದ್ರತಾ ಮಾನದಂಡಗಳನ್ನು ಎತ್ತಿಹಿಡಿಯುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು

ಇದೇ ರೀತಿಯ ಘಟನೆ

ಹಿಂದೆ ಇದೇ ರೀತಿಯ ಘಟನೆಯಲ್ಲಿ, ಹೈದರಾಬಾದ್‌ಗೆ ತೆರಳುತ್ತಿದ್ದ 29 ವರ್ಷದ ಕೌಶಿಕ್ ಕರಣ್ ಎಂಬ ವ್ಯಕ್ತಿಯನ್ನು ಮಧ್ಯರಾತ್ರಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಆರೋಪದ ಮೇಲೆ ಬಂಧಿಸಲಾಯಿತು. ವಿಮಾನ ಇಳಿಯುವ ಸ್ವಲ್ಪ ಸಮಯದ ಮೊದಲು ಈ ಘಟನೆ ಸಂಭವಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com