2020ರ ದೆಹಲಿ ಗಲಭೆ ಆಧಾರಿತ ಚಿತ್ರ ಬಿಡುಗಡೆ ನಿಷೇಧಿಸಿ: ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ ಶಾರ್ಜೀಲ್ ಇಮಾಮ್

ಟ್ರೇಲರ್‌ನಲ್ಲಿ ತೋರಿಸಿರುವ ಪಕ್ಷಪಾತದ ಕಥೆಯು ಇಮಾಮ್ ಅವರ ಜಾಮೀನು ಮೇಲೆ ಮಾತ್ರವಲ್ಲದೆ ಪ್ರಕರಣದ ವಿಚಾರಣೆಯ ಮೇಲೂ ಪರಿಣಾಮ ಬೀರಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್
Updated on

ನವದೆಹಲಿ: 2020ರ ಗಲಭೆ ಆಧಾರಿತ 2020 ದೆಹಲಿ ಸಿನಿಮಾದ ಬಿಡುಗಡೆಯ ವಿರುದ್ಧ ದೆಹಲಿ ಗಲಭೆ ಆರೋಪಿ ಶಾರ್ಜೀಲ್ ಇಮಾಮ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಫೆಬ್ರವರಿ 2ರಂದು ಬಿಡುಗಡೆಯಾಗಲಿರುವ '2020 ದೆಹಲಿ' ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿ, ಜನವರಿ 31ಕ್ಕೆ ವಿಚಾರಣೆಗೆ ಪಟ್ಟಿ ಮಾಡಿದೆ. ಇನ್ನು ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಿಲುವನ್ನು ಕೋರಿದೆ.

ಪ್ರಕರಣದ ವಿಚಾರಣೆ ಇಂದು ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಿಂದ ತಿಳಿದುಕೊಂಡೆ ಎಂದು ನಿರ್ಮಾಣ ಸಂಸ್ಥೆಯ ಪರವಾಗಿ ಹಾಜರಾದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರು ಇಂದೇ ಚಿತ್ರದ ಟ್ರೇಲರ್ ವೀಕ್ಷಿಸುವಂತೆ ನ್ಯಾಯಾಲಯವನ್ನು ಕೋರಿದರು. ಆದರೆ, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಾಳೆಗೆ ನಿಗದಿಪಡಿಸಿದೆ. ಪ್ರತಿವಾದಿಗಳಿಗೆ ಅರ್ಜಿಯ ಪ್ರತಿಗಳನ್ನು ನೀಡುವಂತೆಯೂ ನ್ಯಾಯಾಲಯ ಹೇಳಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಚಿತ್ರದ ಬಿಡುಗಡೆಯನ್ನು ಮುಂದೂಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ನ್ಯಾಯಾಲಯವು ಚಿತ್ರದ ಪೂರ್ವ ಪ್ರದರ್ಶನಕ್ಕೆ ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಟ್ರೇಲರ್‌ನಲ್ಲಿ ತೋರಿಸಿರುವ ಪಕ್ಷಪಾತದ ಕಥೆಯು ಇಮಾಮ್ ಅವರ ಜಾಮೀನು ಮೇಲೆ ಮಾತ್ರವಲ್ಲದೆ ಪ್ರಕರಣದ ವಿಚಾರಣೆಯ ಮೇಲೂ ಪರಿಣಾಮ ಬೀರಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

2020ರ ಜನವರಿಯಲ್ಲಿ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ದೆಹಲಿಯ ಜಾಮಿಯಾ ಪ್ರದೇಶದಲ್ಲಿ ನೀಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಶಾರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವಂತೆ ಆದೇಶಿಸಿತ್ತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಶಾರ್ಜೀಲ್ ಇಮಾಮ್ ವಿರುದ್ಧ ಐಪಿಸಿಯ ಸೆಕ್ಷನ್ 124 ಎ (ದೇಶದ್ರೋಹ), 153 ಎ, 153 ಬಿ, 505 ಮತ್ತು ಯುಎಪಿಎಯ ಸೆಕ್ಷನ್ 13 ರ ಅಡಿಯಲ್ಲಿ ಆರೋಪಗಳನ್ನು ರೂಪಿಸಲು ಆದೇಶಿಸಿದ್ದರು.

ಚಿತ್ರದ ಪೋಸ್ಟರ್
Condom ಜಾಹೀರಾತಿಗೆ ಈ ಜೋಡಿ ಹೆಚ್ಚು ಸೂಕ್ತ; ರಣಬೀರ್ ಕಪೂರ್-ಜಾನ್ವಿ ಕಪೂರ್ ಬಗ್ಗೆ ಉದ್ಯಮಿ ಹೇಳಿಕೆ ವೈರಲ್!

ಜೆಎನ್‌ಯುನ ಮಾಜಿ ವಿದ್ಯಾರ್ಥಿ ಮತ್ತು ಶಾಹೀನ್ ಬಾಗ್ ಪ್ರತಿಭಟನೆಯ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ಶಾರ್ಜೀಲ್ ಇಮಾಮ್ ನನ್ನು 2020ರಲ್ಲಿ ಬಿಹಾರದ ಜೆಹಾನಾಬಾದ್‌ನಿಂದ ಬಂಧಿಸಲಾಯಿತು. ಕಳೆದ ವರ್ಷ ಶಾರ್ಜೀಲ್ ಗೆ ಹೈಕೋರ್ಟ್‌ ಜಾಮೀನು ನೀಡಿತ್ತು. ಇನ್ನು 2020ರ ಫೆಬ್ರವರಿ 23ರಂದು ದೆಹಲಿಯಲ್ಲಿ ಗಲಭೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com